Asianet Suvarna News Asianet Suvarna News

ತಾಲಿಬಾನ್‌ ಆಕ್ರಮಣ ಸಂಭ್ರಮಿಸಿದ ಭಾರತೀಯ ಮುಸ್ಲಿಮರಿಗೆ ಶಾ ತರಾಟೆ

  • ಅಷ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡಿರುವುದನ್ನು ಸಂಭ್ರಮಿಸುತ್ತಿರುವ ಕೆಲವು ಭಾರತೀಯ ಮುಸ್ಲಿಮರು
  • ನಡೆಯನ್ನು ಭಾರತೀಯ ಚಿತ್ರರಂಗದ ಹಿರಿಯ ನಟ ನಾಸಿರುದ್ದೀನ್‌ ಶಾ ಖಂಡಿಸಿದ್ದಾರೆ
naseeruddin shah slams taliban supports indian muslims snr
Author
Bengaluru, First Published Sep 3, 2021, 7:52 AM IST
  • Facebook
  • Twitter
  • Whatsapp

ಮುಂಬೈ (ಸೆ.03): ಅಷ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡಿರುವುದನ್ನು ಸಂಭ್ರಮಿಸುತ್ತಿರುವ ಕೆಲವು ಭಾರತೀಯ ಮುಸ್ಲಿಮರ ನಡೆಯನ್ನು ಭಾರತೀಯ ಚಿತ್ರರಂಗದ ಹಿರಿಯ ನಟ ನಾಸಿರುದ್ದೀನ್‌ ಶಾ ಖಂಡಿಸಿದ್ದಾರೆ.

 ‘ಭಾರತದ ಮುಸ್ಲಿಮರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಕಾಡುಮನುಷ್ಯರಂತೆ ಜೀವನ ನಡೆಸುವುದನ್ನು ಬಿಟ್ಟು ಧರ್ಮ ಆಧುನಿಕತೆ ಮತ್ತು ಸುಧಾರಣೆಯತ್ತ ಸಾಗುವಂತೆ ನೋಡಿಕೊಳ್ಳಬೇಕು. ತಾಲಿಬಾನಿಗಳ ಆಕ್ರಮಣ ಕುರಿತು ಇಡೀ ವಿಶ್ವವೇ ಕಳವಳ ವ್ಯಕ್ತಪಡಿಸಿದೆ. 

ತಾಲೀಬಾನಿಗಳ ಜೊತೆ ಐಸಿಸ್: ನರಕಕ್ಕಿಂತ ಕಡೆಯಾಗ್ತಿದೆ ಅಫ್ಘಾನ್

ತಾಲಿಬಾನ್‌ ಆಕ್ರಮಣವನ್ನು ಭಾರತದ ಮುಸ್ಲಿಮರು ಸಂಭ್ರಮಿಸುತ್ತಿರುವುದು ತಾಲಿಬಾನ್‌ ಆಡಳಿತಕ್ಕಿಂತ ಅಪಾಯಕಾರಿಯಾಗಿದೆ. ಭಾರತದಲ್ಲಿರುವ ಇಸ್ಲಾಂ ಜಗತ್ತಿನ ಇಸ್ಲಾಂಗಿಂತಾ ಭಿನ್ನವಾಗಿದೆ ಇದನ್ನು ಉಳಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ. 

ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಮುಸ್ಲಿಮರು, ಶಾ ಅವರ ಸಲಹೆ ವಿರುದ್ಧ ಕಿಡಿಕಾರಿದ್ದಾರೆ. ಮೊದಲ ನೀವು ಮುಸ್ಲಿಮರಾಗಿ. ಮುಸ್ಲಿಂ ಆಚರಣೆ ಮಾಡಿ. ಬಳಿಕ ಇತರರಿಗೆ ಪಾಠ ಮಾಡಿ ಎಂದೆಲ್ಲಾ ಶಾಗೆ ತಿರುಗೇಟು ನೀಡಲಾಗಿದೆ.

Follow Us:
Download App:
  • android
  • ios