Asianet Suvarna News Asianet Suvarna News

ಬಿಹಾರಕ್ಕೆ ಕೇಂದ್ರದ ಕೊಡುಗೆ; 16 ಸಾವಿರ ಕೋಟಿ ರೂ. ಅಭಿವೃದ್ಧಿ ಯೋಜನೆಗೆ ಮೋದಿ ನೀಡಲಿದ್ದಾರೆ ಚಾಲನೆ!

ಬಿಹಾರದಲ್ಲಿ ಬರೋಬ್ಬರಿ 16,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಬಿಹಾರ ಮೂಲಕ ಸೌಕರ್ಯ ಅಭಿವೃದ್ಧಿ, ಗ್ಯಾಸ್, ರಸ್ತೆ, ನೀರು ಸರಬರಾಜು, ನದಿ ಶುಚಿತ್ವ ಸೇರಿದಂತೆ ಸಂಪೂರ್ಣ ಬಿಹಾರ ಬದಲಾಯಿಸಲು ಮೋದಿ ನಿರ್ಧರಿಸಿದ್ದಾರೆ.

Narendra Modi will launch development works worth over Rs 16000 crore in Bihar
Author
Bengaluru, First Published Sep 11, 2020, 8:16 PM IST

ನವದೆಹಲಿ(ಸೆ.11): ಬಿಹಾರದ ಚಿತ್ರಣ ಬದಲಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಬಿಹಾರದ ಹಳ್ಳಿ, ಪಟ್ಟಣ, ನಗರ ಸೇರಿದಂತೆ ಪ್ರತಿ ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗೆ ಮೋದಿ  ಬಹು ದೊಡ್ಡ ಪ್ಲಾನ್ ರೆಡಿ ಮಾಡಿದ್ದಾರೆ. ಬರೋಬ್ಬರಿ 16,000 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ.

ಚಿಕಾಗೋ ಭಾಷಣ, ವಿನೋಬಾ ಭಾವೆ ಜನ್ಮದಿನ, ಚೇತನಳಿಗೆ ಮೋದಿ ನಮನ

ಮುಂದಿನ 10 ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 16,000 ಕೋಟಿ ರೂಪಾಯಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಬಿಹಾರ ನಾಗರೀಕರ ಜೊತೆ ಮೋದಿ ವಿಡಿಯೋ ಕಾನ್ಫೆರನ್ಸ್ ಮೂಲಕ ಮಾತನಾಡಲಿದ್ದಾರೆ. LPG ಪೈಪ್‌ಲೈನ್, LPG ಬಾಟಲಿಂಗ್ ಪ್ಲಾಂಟ್, ನೀರು ಸರಬರಾಜು, ರೈಲ್ವೇ ಸೇತುವೆ, ರೈಲ್ವೇ ಹಳಿ, ರಾಷ್ಟ್ರೀಯ ಹೆದ್ದಾರಿ, ಇತರ ರಸ್ತೆ, ವಿದ್ಯುತೀಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ.

ಪ್ರಧಾನಿ ಮೋದಿ 16,000 ಕೋಟಿ ರೂಪಾಯಿ ಯೋಜನೆಗೆ ಚಾಲನೆ ನೀಡಿದ ಬೆನ್ನಲ್ಲೇ ಬಿಹಾರದಲ್ಲಿ ಅಭಿವೃದ್ಧಿ ಕಾರ್ಯ  ಆರಂಭಗೊಳ್ಳಲಿದೆ. ನಿಯಮದ ಪ್ರಕಾರ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ವಿಧನಾ ಸಭಾ ಚುನಾವಣೆ ನಡೆಯಬೇಕು. ಆದರೆ ಕೊರೋನಾ ಕಾರಣ ಚುನಾವಣೆ ಕುರಿತು ಸ್ಪಷ್ಟತೆ ಲಭ್ಯವಾಗಿಲ್ಲ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಅಭಿವೃದ್ಧಿ ಯೋಜನೆಗೆ ಮುಂದಾಗಿದ್ದು, ತೀವ್ರ ಕುತೂಹಲ ಕೆರಳಿಸಿದೆ.

Follow Us:
Download App:
  • android
  • ios