ದೇಶಾದ್ಯಂತ ಇಂದಿನಿಂದ ಲಸಿಕೆ ಅಭಿಯಾನ| ಅಮೃತಂಗಮಯ| ಜಗತ್ತಿನ ಅತಿದೊಡ್ಡ ಕೊರೋನಾ ಲಸಿಕೆ ವಿತರಣೆ ಆಂದೋಲನಕ್ಕೆ ಮೋದಿ ಚಾಲನೆ

ನವದೆಹಲಿ(ಜ.16): ಒಂದು ವರ್ಷದಿಂದ ಜಗತ್ತನ್ನೇ ಕಂಗೆಡಿಸಿರುವ ಕೊರೋನಾ ಮಹಾಮಾರಿಯಿಂದ ಭಾರತೀಯರಿಗೆ ರಕ್ಷಣೆ ನೀಡಿ ದೇಶವನ್ನು ಸಾವಿನ ಭೀತಿಯಿಂದ ಬದುಕಿನ ಆಶಾಕಿರಣದತ್ತ ಕೊಂಡೊಯ್ಯುವ ಬಹುನಿರೀಕ್ಷಿತ ಲಸಿಕೆ ವಿತರಣೆ ಅಭಿಯಾನ ಇಂದಿನಿಂದ ಆರಂಭವಾಗಲಿದೆ. ಸ್ವದೇಶಿ ನಿರ್ಮಿತ ಕೋವಿಶೀಲ್ಡ್‌ ಮತ್ತು ಕೋವ್ಯಾಕ್ಸಿನ್‌ ಲಸಿಕೆಗಳು ದೇಶದ ಜನರನ್ನು ‘ಮೃತ್ಯೋರ್ಮಾ ಅಮೃತಂಗಮಯ’ ಎಂಬ ಭರವಸೆಯೊಂದಿಗೆ ಹೊಸ ಸಂವತ್ಸರದತ್ತ ಕೈಹಿಡಿದು ನಡೆಸಲು ಸನ್ನದ್ಧವಾಗಿವೆ.

"

ಇಂದು ಏನೇನು?

1. ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಕೋ-ವಿನ್‌ ಆ್ಯಪ್‌ ಉದ್ಘಾಟನೆ

2. ಈ ಮೂಲಕ 3 ಕೋಟಿ ಮಂದಿಗೆ ಮೊದಲ ಹಂತದ ಲಸಿಕೆ ನೀಡಿಕೆ ಅಭಿಯಾನ ಶುರು

3. ಇದಾದ ಬಳಿಕ ಆಯ್ದ ಲಸಿಕೆ ಫಲಾನುಭವಿಗಳ ಜೊತೆ ಮೋದಿ ವಿಡಿಯೋ ಸಂವಾದ

4. ಮೊದಲ ದಿನ ದೇಶದ 3006 ಕೇಂದ್ರಗಳಲ್ಲಿ 3 ಲಕ್ಷ ಫಲಾನುಭವಿಗಳಿಗೆ ಲಸಿಕೆ ವಿತರಣೆ

5. ಮುಂದಿನ 3-4 ತಿಂಗಳಲ್ಲಿ ಸುಮಾರು 30 ಕೋಟಿ ಫಲಾನುಭವಿಗಳಿಗೆ ಲಸಿಕೆ ಹಂಚಿಕೆ

"

ಯಾರಾರ‍ಯರಿಗೆ ಲಸಿಕೆ?

1. ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಮುಂಚೂಣಿಯ ಕೊರೋನಾ ಯೋಧರಿಗೆ ಲಸಿಕೆ

2. ನಂತರದ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ ಅನಾರೋಗ್ಯಪೀಡಿತರಿಗೆ ವ್ಯಾಕ್ಸಿನ್‌

ಯಾವಾಗ ಲಸಿಕೆ?

1. ಭಾರತದಲ್ಲಿ ಸದ್ಯಕ್ಕೆ ಕೋವಿಶೀಲ್ಡ್‌ ಮತ್ತು ಕೊವ್ಯಾಕ್ಸಿನ್‌ ಎಂಬ ಎರಡು ಲಸಿಕೆ ನೀಡಲಾಗುತ್ತಿದೆ

2. ಮೊದಲ ಹಂತದಲ್ಲಿ ಸುಮಾರು 1.65 ಕೋಟಿ ಡೋಸ್‌ ಲಸಿಕೆಗಳನ್ನು ಕೇಂದ್ರ ಖರೀದಿಸಿದೆ

3. ಪ್ರತಿ ಫಲಾನುಭವಿಯೂ ಯಾವುದೇ ಒಂದು ಲಸಿಕೆಯ ತಲಾ 2 ಡೋಸ್‌ ಪಡೆಯಬೇಕಿದೆ

4. ಲಸಿಕೆಯ ಮೊದಲ ಡೋಸ್‌ ಪಡೆದು 28 ದಿನಗಳ ಬಳಿಕ ಇನ್ನೊಂದು ಡೋಸ್‌ ಸ್ವೀಕರಿಸಬೇಕು

5. ಎರಡನೇ ಡೋಸ್‌ ಪಡೆದ 14 ದಿನಗಳ ಬಳಿಕ ದೇಹದಲ್ಲಿ ಕೊರೋನಾ ನಿರೋಧಕ ಶಕ್ತಿ

ಲಸಿಕೆ ವಿತರಣೆ ಹೇಗೆ?

1. ಪ್ರತಿ ಕೇಂದ್ರದಲ್ಲಿ ನೋಂದಣಿ, ನಿರೀಕ್ಷಣೆ, ಲಸಿಕೆ ನೀಡಿಕೆ, ಪರಿಶೀಲನೆಗೆಂದು 4 ಕೊಠಡಿ

2. ಮೊದಲು ನೋಂದಣಿ ಕೊಠಡಿಯಲ್ಲಿ ಫಲಾನುಭವಿಗಳ ವಿವರ ಸಂಪೂರ್ಣ ಪರಿಶೀಲನೆ

3. ಲಸಿಕೆ ಸರದಿ ಸಂಖ್ಯೆ ಪಡೆದ ಬಳಿಕ ನಿರೀಕ್ಷಣಾ ಕೊಠಡಿಗೆ ಫಲಾನುಭವಿಗಳು ಸ್ಥಳಾಂತರ

4. ವೈದ್ಯ, ನರ್ಸ್‌, ಅರಿವಳಿಕೆ ತಜ್ಞ, ಆ್ಯಂಬುಲೆನ್ಸ್‌ ಚಾಲಕರಿರುವ ಕೊಠಡಿಯಲ್ಲಿ ಲಸಿಕೆ ನೀಡಿಕೆ

5. ಬಳಿಕ 30 ನಿಮಿಷಗಳ ಕಾಲ ನಿಗಾ. ಅಸ್ವಸ್ಥರಾದರೆ ಆಸ್ಪತ್ರೆಗೆ ದಾಖಲು. ಇಲ್ಲದಿದ್ದರೆ ಮನೆಗೆ