Asianet Suvarna News Asianet Suvarna News

UP Government Formation: ಪ್ರಧಾನಿ ಮೋದಿ ನಿವಾಸದಲ್ಲಿ ಮಹತ್ವದ ಸಭೆ

  • ಮಾರ್ಚ್ 25ಕ್ಕೆ ಯೋಗಿ ಆದಿತ್ಯನಾಥ್  ಪ್ರಮಾಣವಚನ
  • ಉತ್ತರ ಪ್ರದೇಶ ಕ್ಯಾಬಿನೆಟ್ ರಚನೆ ಕುರಿತು ಚರ್ಚೆ
  • ಪ್ರಧಾನಿ ನಿವಾಸದಲ್ಲಿ ಬಿಜೆಪಿ ವರಿಷ್ಠರ ಚರ್ಚೆ
     
Narendra Modi holds meeting regard formation of Uttar Pradesh government at PM official residence ckm
Author
Bengaluru, First Published Mar 20, 2022, 7:42 PM IST | Last Updated Mar 20, 2022, 7:50 PM IST

ನವದೆಹಲಿ(ಮಾ.20); ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯ ಗೆದ್ದಿರುವ ಬಿಜೆಪಿ, ಸರ್ಕಾರ ರಚನೆಯಲ್ಲಿ ಕೊಂಚ ವಿಳಂಬವಾಗುತ್ತಿದೆ. ಮುಂಬರುವ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪುಟ ರಚಿಸಲು ಬಿಜೆಪಿ ನಿರ್ಧರಿಸಿದೆ. ಇದೀಗ ಉತ್ತರ ಪ್ರದೇಶ ಸಂಪುಟ ರಚನೆ ಕುರಿತು ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿ ಯೋಗಿ ಆದಿತ್ಯನಾಥ್ ಪ್ರಮಾಣವಚನ ಸ್ವೀಕರಿಸಲು ಎಲ್ಲಾ ತಯಾರಿ ನಡೆದಿದೆ. ಮಾರ್ಚ್ 25 ರಂದು ಯೋಗಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯೋಗಿ ಜೊತೆ ಪ್ರಮುಖ ಸಚಿವರು ಸಂಪುಟ ಸೇರಿಕೊಳ್ಳಲಿದ್ದಾರೆ. ಇದಕ್ಕಾಗಿ ಮೋದಿ ನಿವಾಸದಲ್ಲಿ ಚರ್ಚೆ ನಡೆಯುತ್ತಿದೆ. ಯೋಗಿ ಸಂಪುಟದಲ್ಲಿ ಯಾರು ಇರಬೇಕು, ಕಳೆದ ಅವಧಿಯಲ್ಲಿ ಸಚಿವರಾಗಿದ್ದ ಯಾರಿಗೆಲ್ಲಾ ಮಣೆ ಹಾಕಬೇಕು ಅನ್ನೋ ಚರ್ಚೆ ನಡೆಯತ್ತಿದೆ.

ಜಪಾನ್ ಪ್ರಧಾನಿಗೆ 'ಕೃಷ್ಣ ಪಂಖಿ'ಯನ್ನು ಉಡುಗೊರೆಯಾಗಿ ಕೊಟ್ಟ ಪಿಎಂ ಮೋದಿ, ವಿಶೇಷತೆ ಏನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವರಿಷ್ಠರ ಜೊತೆ ಈಗಾಗಲೇ ಯೋಗಿ ಆದಿತ್ಯನಾಥ್ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕ್ಯಾಬಿನೆಟ್ ರಚನೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಮತ್ತಷ್ಟು ಗಟ್ಟಿಯಾಗಿ ನೆಲೆಯೂರಲು ಇದೀಗ ಅಳೆದು ತೂಗಿ ಸಂಪುಟ ರಚಿಸಲಾಗುತ್ತಿದೆ.

ಬಿಜೆಪಿ ಪಾಲಿಗೆ ಮಹತ್ವವಾದ ಉತ್ತರಪ್ರದೇಶದಲ್ಲಿ 60 ಸಚಿವರ ನೇಮಕಕ್ಕೆ ಅವಕಾಶವಿದೆ. ಈ ಹಿಂದಿನ ಸರ್ಕಾರದಲ್ಲಿದವರ ಪೈಕಿ 11 ಜನರು ಈಗ ಸೋತಿದ್ದಾರೆ, 4 ಜನರು ಪಕ್ಷ ಬದಲಾಯಿಸಿದ್ದಾರೆ. ಹೀಗಾಗಿ 15 ಹುದ್ದೆಗಳು ಖಾಲಿ ಇವೆ. ಇವರ ಜೊತೆ ಸೂಕ್ತವಾಗಿ ಕಾರ್ಯನಿರ್ವಹಿಸದ ಕೆಲವರನ್ನು ಬಿಟ್ಟರೆ ಅಂದಾಜು 20 ಹೊಸಬರಿಗೆ ಅವಕಾಶ ಸಿಗಲಿದೆ ಎಂದು ತಿಳಿದುಬಂದಿದೆ.

PM Modi to visit Kashmir ಏ.24 ರಂದು ಮೋದಿ ಜಮ್ಮು-ಕಾಶ್ಮೀರ ಭೇಟಿ ಸಾಧ್ಯತೆ!

ಯೋಗಿ ಪ್ರಮಾಣವಚನ ಸಮಾರಂಭ
ಸತತ 2ನೇ ಬಾರಿಗೆ ಉತ್ತರ ಪ್ರದೇಶದಲ್ಲಿ ಭರ್ಜರಿ ಜಯಗಳಿಸಿರುವ ಯೋಗಿ ಆದಿತ್ಯನಾಥ್‌ ಮಾಚ್‌ರ್‍ 25ರಂದು ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.ಆದ್ದರಿಂದ ಲಖನೌನ ಅಟಲ್‌ ಬಿಹಾರಿ ವಾಜಪೇಯಿ ಎಕ್‌ನಾ ಕ್ರೀಡಾಂಗಣದಲ್ಲಿ ಪ್ರಮಾಣವಚನಕ್ಕೆ ಭರ್ಜರಿ ಸಿದ್ಧತೆಗಳು ಆರಂಭವಾಗಿವೆ. 200 ವಿಐಪಿಗಳು ಹಾಗೂ ಸುಮಾರು 45 ಸಾವಿರ ಜನ ಭಾಗವಹಿಸುವ ಸಾಧ್ಯತೆಗಳಿವೆ ಎಂದು ಉತ್ತರ ಪ್ರದೇಶ ಬಿಜೆಪಿ ತಿಳಿಸಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಚಿವ ರಾಜನಾಥ್‌ ಸಿಂಗ್‌, ಅಮಿತ್‌ ಶಾ ಹಾಗೂ ಬಿಜೆಪಿ ಅಧಿಕಾರಗಳಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಇತರ ಪ್ರಮುಖ ಬಿಜೆಪಿ ನಾಯಕರು ಜೊತೆಗೆ ವಿರೋಧ ಪಕ್ಷಗಳ ನಾಯಕರಿಗೂ ಆಹ್ವಾನ ನೀಡಲಾಗಿದೆ. ಹಿಂದೆಂದಿಗಿಂತಲೂ ಅಭೂತಪೂರ್ವವಾಗಿ ಕಾರ್ಯಕ್ರಮ ನಡೆಯಲಿದೆ ಎಂದು ಅದು ಹೇಳಿದೆ.

ಪಂಚ ರಾಜ್ಯ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 403 ವಿಧಾನಸಭಾ ಸ್ಥಾನಗಳ ಪೈಕಿ ಬಿಜೆಪಿ 255 ಸ್ಥಾನಗಳನ್ನು ಗೆದ್ದು ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸತತ ಎರಡನೇ ಬಾರಿಗೆ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯುವ ಮೂಲಕ ಹೊಸ ದಾಖಲೆ ಬರೆದಿದೆ. 2017ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ 43 ಸ್ಥಾನಗಳು ಕಡಿಮೆಯಾಗಿದೆ. ಆದರೆ ವೋಟ್ ಶೇರ್‌ನಲ್ಲಿ ಬಿಜೆಪಿ ಭಾರಿ ಏರಿಕೆ ಕಂಡಿದೆ. ಇನ್ನು ಉತ್ತರಖಂಡ, ಮಣಿಪುರ, ಗೋವಾದಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ, ಇದೀಗ ಸರ್ಕಾರ ರಚನೆ ತಯಾರಿಯಲ್ಲಿದೆ. ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಾರ್ಟಿ ಗೆಲುವು ಸಾಧಿಸಿದೆ. ಇಷ್ಟೇ ಅಲ್ಲ ಸಿಎಂ ಭಗವಂತ್ ಮಾನ್ ಹಾಗೂ 10 ಮಂದಿ ಸಂಪುಟ ರಚನೆಯಾಗಿದೆ.

Latest Videos
Follow Us:
Download App:
  • android
  • ios