ಮಮತಾ ಬ್ಯಾನರ್ಜಿ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಸುಪ್ರೀಂ ಕೋರ್ಟ್ ಜಸ್ಟೀಸ್!

  • ಪಶ್ಚಿಮ ಬಂಗಾಳದ ಪ್ರಕರಣ ಆಲಿಸಲು ಮತ್ತೊರ್ವ ನ್ಯಾಯಾಧೀಶ ನಿರಾಕರಣೆ
  • ನಾರದ ಲಂಚ ಪ್ರಕರಣದಲ್ಲಿ ಅರ್ಜಿ ವಿಚಾರಣೆ ನಡೆಸಲು ಜಸ್ಟೀಸ್ ಅನಿರುದ್ಧ ಬೋಸ್ ನಿರಾಕರಣೆ
  • ಎರಡು ವಾರಗಳಲ್ಲಿ ಸಿಎ ಮಮತಾ ಅರ್ಜಿ ವಿಚಾರಣೆಗೆ ಹಿಂದಕ್ಕೆ ಸರಿದ ಇಬ್ಬರು ನ್ಯಾಯಾಧೀಶರು
Narada bribery case 2nd Supreme Court Judge dropped out of case involving West Bengal in two weeks ckm

ನವದೆಹಲಿ(ಜೂ.22); ಎರಡು ವಾರದಲ್ಲಿ ಇಬ್ಬರು ಸುಪ್ರೀಂ ಕೋರ್ಟ್ ನ್ಯಾಯಧೀಶರು ಪಶ್ಚಿಮ ಬಂಗಾಳ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಪ್ರಕರಣ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ್ದಾರೆ. ಇದೀಗ ಜಸ್ಟೀಸ್ ಅನಿರುದ್ದ ಬೋಸ್, ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ನಾರದ ಲಂಚ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. 

ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಮತ್ತೊಂದು ಶಾಕ್ ಕೊಟ್ಟ ದೀದೀ!

ನ್ಯಾಯಮೂರ್ತಿ ಹೇಮಂತ್ ಗುಪ್ತಾ, ಅನಿರುದ್ಧ ಬೋಸ್ ಅವರ ಪೀಠ, ನಾರದ ಲಂಚ ಪ್ರಕರಣ ಕುರಿತು ವಿಚಾರಣೆ ಆರಂಭಿಸಲು ಮುಂದಾಗಿತ್ತು. ಈ ವೇಳೆ ಜಸ್ಟೀಸ್ ಬೋಸ್ ಪ್ರಕರಣದಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಹೀಗಾಗಿ ಹೇಮಂತ್ ಗುಪ್ತಾ, ಮತ್ತೊಂದು ಪೀಠ ಈ ಪ್ರಕರಣ ಆಲಿಸುವಂತೆ ಕೇಳಿಕೊಂಡಿದ್ದರು. ಇದೀಗ ಈ ಪ್ರಕರಣವನ್ನು ಜಸ್ಟೀಸ್ ವಿನೀತ್ ಸರನ್ ಪೀಠ ಆಲಿಸಲಿದೆ.

ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ? ರಾಜ್ಯಪಾಲರ ದೆಹಲಿ ಭೇಟಿ ಮಧ್ಯೆ ಜೋರಾದ ಮಾತು!.

ಜಸ್ಟೀಸ್ ವಿನೀತ್ ಸರನ್ ಪೀಠ ಈ ಪ್ರಕರಣ ಈಗಷ್ಟೆ ನಮ್ಮ ಮುಂದೆ ಬಂದಿದೆ. ಹೀಗಾಗಿ ಶುಕ್ರವಾರ(ಜೂ.25) ಸಿಎಂ ಮಮತಾ ಬ್ಯಾನರ್ಜಿ ಮೇಲ್ಮನವಿ ಅರ್ಜಿ ಆಲಿಸುವುದಾಗಿ ಹೇಳಿದೆ.  ಕಳೆದ ವಾರ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶದ ಬಳಿಕ ನಡೆದ ಹಿಂಸಾಚಾರ ಪ್ರಕರಣ ಕುರಿತ ವಿಚಾರಣೆಯಿಂದ ಜಸ್ಟೀಸ್ ಹಿಂದೆ ಸರಿದಿದ್ದರು.

ನಾರದ ಲಂಚ ಪ್ರಕರಣ:
ಕುಟುಕು ಕಾರ್ಯಚರಣೆ ಮೂಲಕ ನಾರದ ಲಂಚ ಪ್ರಕರಣ ಬಯಲಾಗಿತ್ತು. ಈ ಸ್ಟಿಂಗ್ ಆಪರೇಶನ್‌ನಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರು ಲಂಚ ಸ್ವೀಕರಿಸುತ್ತಿರುವುದು ಬಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಅಧಿಕಾರಿಗಳು ನಾಲ್ವರು ಟಿಎಂಸಿ ನಾಯಕರನ್ನು ಬಂಧಿಸಿತ್ತು. ಸಿಬಿಐ ನಡೆಯನ್ನು ಖಂಡಿಸಿ ಸಿಎಂ ಮಮತಾ ಬ್ಯಾನರ್ಜಿ ಹೈಕೋರ್ಟ್‌ಗೆ ಅಫಿಡವಿತ್ ಸಲ್ಲಿಸಲು ಮುಂದಾಗಿದ್ದರು. ಆದರೆ ಕೋಲ್ಕತಾ ಹೈಕೋರ್ಟ್ ನಿರಾಕರಿಸಿತ್ತು. ಇದರ ವಿರುದ್ಧ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನಲ್ಲ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಈ ಮೇಲ್ಮನವಿ ಅರ್ಜಿ ವಿಚಾರಣಯಿಂದ ಅನಿರುದ್ಧ ಬೋಸ್ ಹಿಂದೆ ಸರಿದಿದ್ದಾರೆ.

Latest Videos
Follow Us:
Download App:
  • android
  • ios