Asianet Suvarna News Asianet Suvarna News

ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಮತ್ತೊಂದು ಶಾಕ್ ಕೊಟ್ಟ ದೀದೀ!

* ಪಶ್ಚಿಮ ಬಂಗಾಳ ವಿಧಾ​ನ​ಸ​ಭೆಯ ವಿಪಕ್ಷ ನಾಯ​ಕ​, ಬಿಜೆಪಿ ಮುಖಂಡ ಸುವೇಂದು ಅಧಿ​ಕಾ​ರಿಗೆ ಶಾಕ್ ಕೊಟ್ಟ ದೀದಿ

* ಸುವೇಂದು ಅಧಿ​ಕಾ​ರಿ ಅವರು ವಿಧಾ​ನ​ಸಭೆಗೆ ಆಯ್ಕೆ ಆಗಿದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

* ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾ​ಲಯ

Mamata Banerjee vs Suvendu Adhikari Calcutta HC lists Nandigram election plea for next Thursday pod
Author
Bangalore, First Published Jun 19, 2021, 1:41 PM IST
  • Facebook
  • Twitter
  • Whatsapp

 

ಕೋಲ್ಕ​ತಾ(ಜೂ.19): ಪಶ್ಚಿಮ ಬಂಗಾಳ ವಿಧಾ​ನ​ಸ​ಭೆಯ ವಿಪಕ್ಷ ನಾಯ​ಕ​, ಬಿಜೆಪಿ ಮುಖಂಡ ಸುವೇಂದು ಅಧಿ​ಕಾ​ರಿ ಅವರು ವಿಧಾ​ನ​ಸಭೆಗೆ ಆಯ್ಕೆ ಆಗಿದ್ದನ್ನು ಪ್ರಶ್ನಿಸಿ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ಅವರು ಹೈಕೋ​ರ್ಟ್‌ ಮೊರೆ ಹೋಗಿ​ದ್ದಾರೆ. ಇದನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾ​ಲಯ, ವಿಚಾ​ರ​ಣೆ​ಯನ್ನು ಜೂ.24ಕ್ಕೆ ಮುಂದೂ​ಡಿದೆ.

ಬಂಗಾಳ ವಿಧಾ​ನ​ಸಭೆ ಚುನಾ​ವಣೆ ವೇಳೆ ಮಮತಾ ಬ್ಯಾನರ್ಜಿ ಅವರು ನಂದಿ​ಗ್ರಾಮ ಕ್ಷೇತ್ರ​ದಲ್ಲಿ ಕೇವಲ 2000ಕ್ಕಿಂತ ಕಡಿಮೆ ಮತ​ಗಳ ಅಂತ​ರ​ದಿಂದ ಅಧಿ​ಕಾ​ರಿ ಎದುರು ಸೋಲುಂಡಿ​ದ್ದರು.

ರಾಯ್‌ ಅನ​ರ್ಹತೆಗೆ ಕೋರಿಕೆ:

ಇತ್ತೀ​ಚೆ​ಗಷ್ಟೇ ಬಿಜೆ​ಪಿ​ಯಿಂದ ಮಾತೃ​ಪಕ್ಷ ಟಿಎಂಸಿ ಕ್ಯಾಂಪ್‌ಗೆ ಜಿಗಿ​ದಿ​ರುವ ಮುಕುಲ್‌ ರಾಯ್‌ ಅವ​ರನ್ನು ಶಾಸಕ ಸ್ಥಾನ​ದಿಂದ ಅನ​ರ್ಹ​ಗೊ​ಳಿ​ಸ​ಬೇಕು ಎಂದು ವಿಪಕ್ಷ ನಾಯಕ ಸುವೇಂದು ಅಧಿ​ಕಾರಿ ಸ್ಪೀಕರ್‌ ಅವ​ರಿಗೆ ದೂರು ಸಲ್ಲಿ​ಸಿ​ದ್ದಾರೆ. ಬಿಜೆ​ಪಿ​ಯಿಂದ ಗೆದ್ದಿ​ರುವ ರಾಯ್‌ ಇತ್ತೀಚೆಗೆ ಟಿಎಂಸಿಗೆ ಸೇರಿ​ದ್ದಾ​ರೆ.

Follow Us:
Download App:
  • android
  • ios