ನವದೆಹಲಿ[ಫೆ.24]: ಪ್ರಧಾನಿ ನರೇಂದ್ರ ಮೋದಿ ಸೋಮವಾರದಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಅಹಮದಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದಾರೆ. ಬಳಿಕ ಇಲ್ಲಿಂದ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್, ಅಲ್ಲಿಂದ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಮೊಟೆರೋ ಸ್ಟೇಡಿಯಂಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ 'ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಸ್ವಾಗತ' ಎನ್ನುವ ಮೂಲಕ ಟ್ರಂಪ್ ನ್ನು ಬರ ಮಾಡಿಕೊಂಡಿದ್ದಾರೆ.

"

ಹೌದು 1 ಲಕ್ಷಕ್ಕೂ ಅಧಿಕ ಮಂದಿಗೆ ಆಸನ ವ್ಯವಸ್ಥೆಯುಳ್ಳ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಸ್ವಾಗತಿಸಿ ಮಾತನಾಡಿದ ಪಿಎಂ ಮೋದಿ 'ಟ್ರಂಪ್ ಕುಟುಂಬಕ್ಕೆ ಭಾರತದ ಸ್ವಾಗತ' ಎಂದಿದ್ದಾರೆ. ಈ ವೇಳೆ ಹೌಡಿ ಮೋದಿ ಕುರಿತು ಉಲ್ಲೇಖಿಸಿದ ಪಿಎಂ, 'ಐದು ತಿಂಗಳ ಹಿಂದೆ ನಾನು ಹೌಡಿ ಮೋದಿಯಿಂದ ನಾನು ನನ್ನ ಅಮೆರಿಕಾ ಯಾತ್ರೆ ಆರಂಭಿಸಿದ್ದೆ, ಇಂದು ನನ್ನ ಗೆಳೆಯ ಟ್ರಂಪ್ ಅಮೆರಿಕಾದಲ್ಲಿ ನಮಸ್ತೆ ಟ್ರಂಪ್ ನಿಂದ ತಮ್ಮ ಯಾತ್ರೆ ಆರಂಭಿಸುತ್ತಿದ್ದಾರೆ' ಎಂದಿದ್ದಾರೆ.

'ಕಾರ್ಯಕ್ರಮದ ಹೆಸರು ನಮಸ್ತೆ ಅರ್ಥವೂ ಬಹಳ ಆಳವಾದದ್ದು, ಇದು ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಸಂಸ್ಕೃತ ಪದ. ಇದು ಕೇವಲ ವ್ಯಕ್ತಿ ಮಾತ್ರವಲ್ಲ, ಅವನೊಳಗಿನ ದಿವ್ಯತೆಗೂ ನಮಿಸುತ್ತದೆ' ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

"

’ಒಂದು ಲ್ಯಾಂಡ್ ಆಫ್ ಫ್ರೀ ಆಗಿದ್ದರೆ, ಮತ್ತೊಂದು ಇಡೀ ವಿಶ್ವವನ್ನು ಒಂದೇ ಕುಟುಂಬವೆಂಬ ಭಾವ ಹೊಂದಿದೆ. ಒಂದು ದೇಶ ಲಿಬರ್ಟಿ ಪ್ರತಿಮೆ ಕುರಿತು ಹೆಮ್ಮೆ ಹೊಂದಿದ್ದರೆ, ಮತ್ತೊಂದು ವಿಶ್ವದ ಅತಿ ಎತ್ತರದ ಪ್ರತಿಮೆ ಸರ್ದಾರ್ ಪಟೇಲರ ಪ್ರತಿಮೆ ಕುರಿತು ಹೆಮ್ಮೆ ಹೊಂದಿದೆ' ಎಂದು ಮೋದಿ ಭಾರತವನ್ನು ಹಾಡಿ ಹೊಗಳಿದ್ದಾರೆ.

"

ಅಧ್ಯಕ್ಷ ಟ್ರಂಪ್ ಈ ಭೇಟಿ, ಭಾರತ ಹಾಗೂ ಅಮೆರಿಕಾ ನಡುವಿನ ಸಂಬಂಧಕ್ಕೆ ಹೊಸ ಆಯಾಮ ನೀಡಲಿದೆ. ಇದು ಭಾರತ ಹಾಗೂ ಅಮೆರಿಕಾ ನಾಗರಿಕರ ಅಭಿವೃದ್ಧಿ ಹಾಗೂ ಸಮೃದ್ಧಿಗೆ ಸಾಕ್ಷಿಯಾಗಲಿದೆ ಎಂದಿದ್ದಾರೆ. ಇದೇ ವೇಳೆ ಅಮೆರಿಕಾದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್ ಉದ್ದೇಶಿಸಿ ಮಾತನಾಡಿದ ಮೋದಿ 'ನಿಮ್ಮ ಉಪಸ್ಥಿತಿ ಹೆಮ್ಮೆಯ ವಿಚಾರ. ಹೆಲ್ದೀ ಆ್ಯಂಡ್ ಹ್ಯಾಪಿ ಮೆರಿಕಾಗೆ ನಿಮ್ಮ ಕೊಡುಗೆ ಅಪಾರ. ಇದು ಒಳ್ಳೆಯ ಪರಿಣಾಮ ಬೀರಿದೆ' ಎಂದಿದ್ದಾರೆ.

ಅಲ್ಲದೇ 'ಸಮಾಜದಲ್ಲಿ ಮಕ್ಕಳಿಗಾಗಿ ನೀವು ಮಾಡುತ್ತಿರುವ ಕೆಲಸ ಪ್ರಶಂಸನೀಯ' ಎಂದು ಮೋದಿ ಹೊಗಳಿದ್ದಾರೆ.

"