ಅಹಮದಾಬಾದ್(ಮೇ 06)  ಗುಜರಾತ್ ನಲ್ಲಿ ಕೊರೋನಾ ವೈರಸ್ ಈ ಪರಿಯಾಗಿ ಹರಡಲು ಏನು ಕಾರಣ ಎಂಬುದನ್ನು ಅಲ್ಲಿನ ಕಾಂಗ್ರಸ್   ಪತ್ತೆ ಹಚ್ಚಿತ್ತು. ಈಗ ಮುಂದುವರಿದ ಭಾಗವನ್ನು ನಿಮಗೆ ಹೇಳುತ್ತಿದೆ.

ಕೊರೋನಾ ವೈರಸ್ ಸೋಂಕಿನಿಂದ ಗುಜರಾತ್ ನಲ್ಲಿ 800ಕ್ಕೂ ಅಧಿಕ  ಜನರು ಪ್ರಾಣ ಕಳೆದುಕೊಳ್ಳಲು ರಾಜ್ಯ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಕಂಡಲ್ಲಿ ಉಗುಳಿ, ಕೊರೊನಾ ಹರಡಿ ಎಂದಿದ್ದ ಕ್ರಿಮಿಗೆ ಪಾಕ್ ನಂಟು

ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆಯಾಗಬೇಕು ಎಂದು ಗುಜರಾತ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಚಾವ್ಡಾ ಅಲ್ಲಿನ ಹೈಕೋರ್ಟ್ ಮೊರೆ ಹೋಗಿದ್ದಾರೆ.

ತಬ್ಲಿಘಿ ಜಮಾತ್ ಪ್ರಕರಣವನ್ನು ಮುಚ್ಚಿಹಾಕಲು ಕಾಂಗ್ರೆಸ್ ಇಂಥ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಠಕ್ಕರ್ ಕೊಟ್ಟಿದೆ. ಫೆಬ್ರವರಿ 24 ರಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತಕ್ಕೆ ಬಂದಿದ್ದಾಗ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕೇರಳದಲ್ಲಿ ಜನವರಿಯಲ್ಲೇ ಕೊರೋನಾ ಪಾಸಿಟವ್ ಕೇಸ್ ದಾಖಲಾಗಿತ್ತು. ಆದರೆ ಇಲ್ಲಿ ಸೋಶಿಯಲ್ ಡಿಸ್ಟಂಸಿಂಗ್ ಮರೆತು ಕಾರ್ಯಕ್ರಮ ಆಯೋಜನೆ ಮಾಡಿದ್ದೇ ಕೊರೋನಾ ಹರಡಲು ಕಾರಣವಾಯಿತು ಎಂದು ಕಾಂಗ್ರೆಸ್ ಆರೋಪ ಮಾಡಿತ್ತು.

ಅಹಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಭಾಗವಹಿಸಿದ್ದರು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ವೇದಿಕೆ ಹಂಚಿಕೊಂಡಿದ್ದರು .