Asianet Suvarna News Asianet Suvarna News

ಸೋನಿಯಾ ಗಾಂಧಿ 10 ಜನ್‌ಪಥ್‌ ನಿವಾಸದ ಒಳಗೆ ನಿಗೂಢ ಮಜರ್‌?

ಕರ್ನಾಟಕ ರಾಜಕಾರಣವೀಗ ದೆಹಲಿ ಅಂಗಳಕ್ಕೆ ತಲುಪಿದೆ. ಪ್ರತಿ ದಿನವೂ ದೆಹಲಿಯಲ್ಲಿ ರಾಜ್ಯ ರಾಜಕಾರಣದ ಬಿಸಿ ಬಿಸಿ ಚರ್ಚೆ ಆಗುತ್ತಿದೆ. 10 ಜನಪಥ್‌ನಲ್ಲಿರುವ ಸೋನಿಯಾ ಗಾಂಧಿ ನಿವಾಸವೂ ಇದಕ್ಕೆ ಹೊರತಾಗಿಲ್ಲ. ಈ ನಡುವೆ ಸೋನಿಯಾ ಗಾಂಧಿ ನಿವಾಸದಲ್ಲಿರುವ 'ಮಜರ್‌' ಈಗ ಎಲ್ಲರ ಗಮನಸೆಳೆದಿದೆ.

Mysterious Mazar inside 10 Janpath Trends in Twitter san
Author
First Published May 17, 2023, 9:56 PM IST | Last Updated May 17, 2023, 9:56 PM IST

ಬೆಂಗಳೂರು (ಮೇ.17): ಕರ್ನಾಟಕದಲ್ಲಿ ಮುಂದಿನ ಸಿಎಂ ಯಾರಾಗ್ತಾರೆ ಎನ್ನುವ ಕುತೂಹಲಕ್ಕೆ ಇನ್ನೂ ತೆರೆಬಿದ್ದಿಲ್ಲ. ದೆಹಲಿಯಲ್ಲಿರುವ ಸೋನಿಯಾ ಗಾಂಧಿ ನಿವಾಸ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ನಿವಾಸ ಕರ್ನಾಟಕ ರಾಜಕೀಯದ ಕೋರ್ಟ್‌ ಆಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಮಾಧ್ಯಮಗಳು ಹಾಗೂ ರಾಜ್ಯದ ಪ್ರಮುಖ ಮಾಧ್ಯಮಗಳಲ್ಲಿ ಈ ಎರಡೂ ನಿವಾಸಗಳ ಚಿತ್ರಗಳು, ವಿಡಿಯೋಗಳು ಬೇಕಾದಷ್ಟು ಬರುತ್ತಿವೆ. ಇದರ ನಡುವೆ ಸೋನಿಯಾ ಗಾಂಧಿಯವರ 10, ಜನಪಥ್‌ ನಿವಾಸದಲ್ಲಿ ಕುತೂಹಲಕಾರಿ ಅಂಶವನ್ನು ಸೋಶಿಯಲ್‌ ಮೀಡಿಯಾದಲ್ಲಿ ಜನರು ಪತ್ತೆ ಮಾಡಿದ್ದಾರೆ. ಮುಸ್ಲಿಂಮರ ಪ್ರಾರ್ಥನೆಯ ಸ್ಥಳ ಅಥವಾ ಪ್ರತಿಷ್ಠಿತರ ಸಮಾಧಿಯನ್ನು ಮಜರ್‌ ಎನ್ನಲಾಗುತ್ತದೆ. ಇಂಥ ಮಜರ್‌ ದೇಶದ ಪ್ರತಿಷ್ಠಿತ ಸ್ಥಳವಾದ 10, ಜನಪಥ್‌ನಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲಿ ಪತ್ತೆಯಾಗಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಇದರ ಬೆನ್ನಲ್ಲಿಯೇ ಈ ಮಜರ್‌ ಯಾರದ್ದು, ಇದರ ಮಾಲೀಕರು ಯಾರು ಎನ್ನುವುದರ ಕುರಿತೂ ಪ್ರಶ್ನೆಗಳು ಎದ್ದಿವೆ. ನಿಮಗೆ ನೆನಪಿರಲಿ 10, ಜನಪಥ್‌ನ ಒಳಗೆ ಪುಟ್ಟ ಶಿವನ ದೇವಸ್ಥಾನ ಕೂಡ ಇದೆ. ಆದರೆ, ಪುಟ್ಟ ದೇವಸ್ಥಾನ ಇರೋದಕ್ಕೂ ಒಂದು ಮಜರ್‌ ಇರೋದಕ್ಕೂ ವತ್ಯಾಸವಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಹಾಗಂತ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಮಜರ್‌ ಇರುವುದರ ಬಗ್ಗೆ ಚರ್ಚೆ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಇದರ ಚಿತ್ರಗಳು ಬಂದಿದ್ದವು. ಆದರೆ ಈ ಮಜರ್‌ನ ಮಾಹಿತಿಗಳು ಮಾತ್ರ ಹೆಚ್ಚಾಗಿ ಲಭ್ಯವಿಲ್ಲ. ಸಾಮಾನ್ಯವಾಗಿ ಮಜರ್‌ಗಳು, ದರ್ಗಾ, ಮಸೀದಿ ಮತ್ತು ಮದರಸಾಗಳು ವಕ್ಫ್‌ ಬೋರ್ಡ್‌ನಲ್ಲಿ ನೋಂದಣಿ ಆಗಿರುತ್ತಿದೆ. ಈ ನಿಟ್ಟಿನಲ್ಲಿ ಪತ್ರಿಕೆಯೊಂದಿಗೆ ದೆಹಲಿಯ ವಕ್ಫ್‌ ಬೋರ್ಡ್‌ನಲ್ಲಿ ರಾಷ್ಟ್ರ ರಾಜಧಾನಿಯಲ್ಲಿರುವ ಎಲ್ಲಾ ಮಜರ್‌ಗಳ ಮಾಹಿತಿಗಳನ್ನು ಕೇಳಿತ್ತು.

ಆದರೆ, ದೆಹಲಿಯ ವಕ್ಫ್‌ ಬೋರ್ಡ್‌ ಮಾತ್ರ ಈ ಕುರಿತಾಗಿ ಯಾವುದೇ ಮಾಹಿತಿಯನ್ನು ಈವರೆಗೂ ನೀಡಿಲ್ಲ. ಸ್ವತಃ ತಾವೇ ಆ ಮಜರ್‌ನ ಬಗ್ಗೆ ಇರುವ ಮಾಹಿತಿಯನ್ನೂ ಹೊರಹಾಕಿಲ್ಲ. ತನ್ನ ಆಸ್ತಿಗಳನ್ನು ದೆಹಲಿಯ ವಕ್ಫ್‌ ಬೋರ್ಡ್‌ ಆನ್‌ಲೈನ್‌ನಲ್ಲಿ ಪ್ರಕಟ ಮಾಡುವುದು ಕಡ್ಡಾಯವಾಗಿದೆ. ದೆಹಲಿಯಲ್ಲಿ ಒಟ್ಟು 1045 ವಕ್ಫ್‌ ಆಸ್ತಿಗಳಿವೆ ಅದರ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಆದರೆ, ಈ ವೆಬ್‌ಸೈಟ್‌ ಅಪ್‌ಡೇಟ್‌ ಆಗುತ್ತಿದೆಯೇ ಇಲ್ಲವೇ ಎನ್ನುವ ಮಾಹಿತಿಗಳಿಲ್ಲ. ಸೋನಿಯಾ ಗಾಂಧಿ ನಿವಾಸವಿರುವ ಜನಪಥ್‌, ನವದೆಹಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುತ್ತದೆ. ವೆಬ್‌ಸೈಟ್‌ನಲ್ಲಿ ನವದೆಹಲಿ ಪ್ರದೇಶದಲ್ಲಿ ಮೂರು ಸೆಕ್ಷನ್‌ಗಳಿಗೆ ಚಾಣಕ್ಯಪುರಿ, ಕನ್ನಾಟ್‌ ಪ್ಲೇಸ್‌ ಹಾಗೂ ಪಾರ್ಲಿಮೆಂಟ್‌ ಸ್ಟ್ರೀಟ್‌. ಈ ಮೂರು ಪ್ರದೇಶಗಳನ್ನು ಪರಿಶೀಲನೆ ಮಾಡಿದರೂ, 10 ಜನಪಥ್‌ನಲ್ಲಿರುವ ಮಜರ್‌ನ ಸಣ್ಣ ಮಾಹಿತಿ ಕೂಡ ಪತ್ತೆಯಾಗಿಲ್ಲ. ಇಡೀ ಪ್ರದೇಶದಲ್ಲಿ ದರ್ಕಾ ಶೇಖ್‌ ಕರೀಮುಲ್ಲಾ ಮಜರ್ ಮಾತ್ರವೇ ಪತ್ತೆಯಾಗಿದೆ.

Karnataka Election Results 2023: ಡಿಕೆಶಿ ಬರ್ತಡೇಗೆ ಸೋನಿಯಾ ಗಾಂಧಿ ಬಂಪರ್ ಗಿಫ್ಟ್, ಸಿಗುತ್ತಾ ಸಿಎಂ ಕುರ್ಚಿ!

ಮೂಢನಂಬಿಕೆಯ ಸಲುವಾಗಿಯೇ ಮಜರ್‌ ನಿರ್ಮಾಣ: ಇನ್ನು 10 ಜನಪಥ್‌ ನಿವಾಸ ಎನ್ನುವುದು ದುರಾದೃಷ್ಟದ ಮನೆ ಎನ್ನಲಾಗಿದೆ.  ಲಾಲ್‌ ಬಹದ್ದೂರ್‌ ಶಾಸ್ತ್ರಿ, ರಾಜೀವ್‌ ಗಾಂಧಿ, ಸೋನಿಯಾ ಗಾಂಧಿ ಇದೇ ನಿವಾಸದಲ್ಲಿ ಉಳಿದುಕೊಂಡಿದ್ದರೂ ಎಲ್ಲರಿಗೂ ದುರಾದೃಷ್ಟ ಕಾಡಿತು. ಇಬ್ಬರು ಅಕಾಲಿಕವಾಗಿ ಸಾವು ಕಂಡರೆ, ಸೋನಿಯಾ ಗಾಂಧಿ ಪಾಲಿಗೆ ಪ್ರಧಾನಿಯಾಗುವ ಅದೃಷ್ಟವೇ ತಪ್ಪಿ ಹೋಗಿತ್ತು. ರಾಜೀವ್‌ ಗಾಂಧಿ ಈ ನಿವಾಸಕ್ಕೆ ಬರುವ ಮುನ್ನ ಕೆಕೆ ತಿವಾರಿ ಈ ನಿವಾಸದಲ್ಲಿದ್ದರು. ಅವರ ರಾಜಕೀಯ ಜೀವನವೇ ಇಲ್ಲಿ ಅಂತ್ಯ ಕಂಡಿತ್ತು. ಕೆಲವೊಂದು ವರದಿಗಳ ಕಾರಣ, ಮೂಢನಂಬಿಕೆಯ ಕಾರಣಕ್ಕಾಗಿಯೇ ಮಜರ್‌ ಅನ್ನು ಮರದ ಕೆಳಗಡೆ ನಿರ್ಮಾಣ ಮಾಡಲಾಗಿದೆ ಎಂದಿದೆ. ಆದರೆ, ಏಷ್ಯಾನೆಟ್‌ ನ್ಯೂಸ್‌ ಈ ವರದಿ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟ ಪಡಿಸುವುದಿಲ್ಲ.

ಸೋನಿಯಾ ಗಾಂಧಿಯ 'ಕರ್ನಾಟಕಕ್ಕೆ ಸಾರ್ವಭೌಮತ್ವ' ಹೇಳಿಕೆ, ಚುನಾವಣಾ ಆಯೋಗದಿಂದ ಖರ್ಗೆಗೆ ನೋಟಿಸ್‌!

Latest Videos
Follow Us:
Download App:
  • android
  • ios