ಅಹಮದಾಬಾದ್[ಮಾ.05]: ಈಶಾನ್ಯ ದೆಹಲಿಯಲ್ಲಿ ಇತ್ತೀಚೆಗಷ್ಟೇ ನಡೆದಿದ್ದ ಹಿಂಸಾಚಾರದಲ್ಲಿ 48 ಮಂದಿ ಬಲಿಯಾಗಿದ್ದರು. ಆಪತ್ತಿನ ಈ ಸಮಯದಲ್ಲಿ ಮುಸ್ಲಿ ಹಾಗೂ ಹಿಂದೂ ಸಹೋದರರು ಪರಸ್ಪರ ಸಹಾಯಕ್ಕೆ ಧಾವಿಸಿದ್ದರು. ಹೀಗಾಗುವುದು ಸಹಜ ಯಾಕೆಂದರೆ ಭಾರತ ಈ ಹಿಂದಿನಿಂದಲೂ ಜಾತ್ಯಾತೀತ ಹಾಗೂ ಏಕತೆಗೆ ಹೆಸರುವಾಸಿಯಾಗಿದೆ. ಸದ್ಯ ಗುಜರಾತ್ ನಲ್ಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸುವ ಮೂಲಕ ಭಾರತದ ವಿವಿಧತೆಯಲ್ಲಿ ಏಕತೆ ಎಂಬ ಸಂಸ್ಕೃತೆಗೆ ಸಾಕ್ಷಿಯಾಗಿದ್ದಾರೆ.

ANI ಈ ಸಂಬಂಧ ಸುದ್ದಿ ಪ್ರಕಟಿಸಿದೆ. ಮೂಲತಃ ತಮಿಳುನಾಡಿನ ಪರಿಪಟ್ಟಿಯವರಾದ ಅಬ್ದುಲ್ ಖುದಾ ಮೊಹಮ್ಮದ್ ಹನೀಫ್ ಶೇಖ್ ಸದ್ಯ ಗುಜರಾತ್ ನ ಬರೂಚ್ ಜಿಲ್ಲೆಯ ಪೀರಾಮನ್ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ. ಅವರು ಪರಿಪಟ್ಟಿಯಲ್ಲಿ ದೇಗುಲ ನಿರ್ಮಿಸಲು ಈವರೆಗೆ ಒಟ್ಟು 3 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ.

ಇನ್ನು ಶೇಖ್ ಇಂತಹ ಹರಜ್ಜೆ ಇರಿಸಲೂ ಒಂದು ಕಾರಣವಿದೆ. ಇವರ ಜಳ್ಳಿಯ ವಿಜಯ್ ಕುಮಾರ್ ಎಂಬವರು ಕೇಳಿದ್ದ ಸಹಾಯಕ್ಕೆ ಪ್ರತಿಯಾಗಿ ಅವರು ಈ ಕೆಲಸಕ್ಕೆ ಮುಂದಾಗಿದ್ದಾರೆ. ಈ ಸಂಬಂದ ಪ್ರತಿಕ್ರಿಯಿಸಿರುವ ಶೇಖ್ 'ಅವರು ನನಗೆ 4 ತಿಂಗಳ ಹಿಂದೆ ತಿಳಿಸಿದ್ದರು ಹಾಗೂ 10 ದಿನದ ಹಿಂದೆ ನನ್ನ ಬಳಿ ಬಂದಿದ್ದರು. ವಾಣಿಯಿಂದ ಹಿಡಿದು ಮೆಹಸಾಣಾವರೆಗೆ, ನನ್ನ ಹಳ್ಳಿಯಲ್ಲೂ ಹಲವಾರು ಮದ್ರಾಸಿಗಳು ಇದ್ದಾರೆ. ನಾನು ಅವರೆಲ್ಲರ ಬಳಿ ಖುದ್ದಾಗಿ ತೆರಳಿ ಈವರೆಗೂ ಒಟ್ಟು 3 ಲಕ್ಷ ರೂಪಾಯಿ ಸಂಗ್ರಹಿಸಿದ್ದೇನೆ' ಎಂದಿದ್ದಾರೆ. 

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ವಿಜಯ್ ಕುಮಾರ್, ನಾನು ನನ್ನ ಗೆಳೆಯನೊಂದಿಗೆ 10 ದಿನಗಳವರೆಗೆ ಗುಜರಾತ್ ನಲ್ಲಿ ಉಳಿದುಕೊಂಡೆ ಹಾಗೂ 3 ಲಕ್ಷ ಸಂಗ್ರಹಿಸಿದೆ. ನಮ್ಮ ಹಳ್ಳಿಯಲ್ಲಿ ಹಿಂದೂ ಮುಸಲ್ಮಾನರ ನಡುವೆ ಇರುವಷ್ಟು ಆತ್ಮೀಯತೆ ಬೇರೆಲ್ಲೂ ಕಾಣಲು ಸಿಗುವುದಿಲ್ಲ. ನಾವೆಲ್ಲರೂ ಸ್ನೇಹಿತರಂತಿದ್ದೇವೆ ಎಂದಿದ್ದಾರೆ.