Asianet Suvarna News Asianet Suvarna News

ಪ್ರಯಾಣಿಕರಿಗೆ ತೊಂದರೆಯಾಗುವಂತೆ ರೈಲಲ್ಲೇ ನಮಾಜ್: ಛೀಮಾರಿ ಹಾಕಿದ ಟಿಕೆಟ್ ಕಲೆಕ್ಟರ್

ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರು ತಿರುಗಾಡುವ ಮಾರ್ಗದಲ್ಲಿ ಕೆಲ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದರಿಂದ ಟಿಕೆಟ್ ಚೆಕ್ಕರ್ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

muslim community people doing namaz in moving train video viral mrq
Author
First Published Aug 14, 2024, 5:47 PM IST | Last Updated Aug 14, 2024, 5:47 PM IST

ನವದೆಹಲಿ: ಚಲಿಸುತ್ತಿರುವ ರೈಲಿನಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಟಿಕೆಟ್ ಚಕ್ಕರ್ ಎಲ್ಲರನ್ನು ಕ್ಲಾಸ್ ತೆಗೆದುಕೊಂಡಿದ್ದಾರೆ. ರೈಲಿನಲ್ಲಿ ದೀರ್ಘ ಪ್ರಯಾಣ ಮಾಡುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಜನರು ಸೀಟ್‌ನಲ್ಲಿಯೇ ಕುಳಿತು ನಮಾಜ್ ಮಾಡುತ್ತಿರೋದು ಬಹುತೇಕ ಎಲ್ಲರ ಗಮನಕ್ಕೆ ಬಂದಿರುತ್ತದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಸುಮಾರು ಏಳೆಂಟು ಜನರು ಪ್ರಯಾಣಿಕರು ಸಂಚರಿಸುವ ಮಾರ್ಗದಲ್ಲಿಯೇ ನಿಂತು  ನಮಾಜ್ ಮಾಡಿದ್ದಾರೆ. ಇದರಿಂದ ಪ್ರಯಾಣಿಕರ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. 

ಮುಸ್ಲಿಮರು ಸರತಿ ಸಾಲಿನಲ್ಲಿ ನಿಂತು ನಮಾಜ್ ಮಾಡುತ್ತಿರುವಾಗ ಅಲ್ಲಿಗೆ ಬಂದ ಟಿಕೆಟ್ ಚೆಕರ್, ಇದೊಂದು ಮಸೀದಿ ಅಲ್ಲ. ಈ ರೀತಿ ರಸ್ತೆಯಲ್ಲಿ ನಿಂತು ಪ್ರಾರ್ಥನೆ ಮಾಡೋದು ತಪ್ಪು. ನಿಮ್ಮ ಪ್ರಾರ್ಥನೆಯಿಂದ ಬೇರೆಯವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪ್ರಯಾಣಿಕರಿಗೆ ಹೋಗಲು ದಾರಿ ಮಾಡಿಕೊಡಿ ಎಂದು ಟಿಕೆಟ್ ಪರಿಶೀಲಕರ ಎಲ್ಲರಿಗೂ ಹೇಳಿದ್ದಾರೆ. ಈ ಘಟನೆಯನ್ನು ಕೆಲ ಪ್ರಯಾಣಿಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ನಿಮಗೆ ನಾಚಿಕೆ ಆಗಲ್ವಾ? ನಿಮ್ಮಗಳ ಕಾರಣದಿಂದು ಎಷ್ಟು ಜನರಿಗೆ ತೊಂದರೆ ಆಗ್ತಿದೆ ಅಂತ ಒಮ್ಮೆ ನೋಡಿ. ಈ ಕೂಡಲೇ ನಿಮ್ಮ ನಮಾಜ್ ಬಂದ್ ಮಾಡಿ. ಇದು ರೈಲು, ನಮಾಜ್ ಮಾಡುವ ಗಾಡಿ ಅಲ್ಲ. ಇಲ್ಲಿ ಎಲ್ಲಾ ವರ್ಗದವರು ಪ್ರಯಾಣ ಮಾಡುತ್ತಾರೆ ಎಂಬ ಸಾಮಾನ್ಯ ತಿಳುವಳಿಕೆ ಇಲ್ಲವಾ? ಒಂದು ವೇಳೆ ನಮಾಜ್ ನಿಲ್ಲಿಸದಿದ್ದರೆ ಆರ್‌ಪಿಎಫ್ ಪೊಲೀಸರಿಗೆ ಹೇಳುತ್ತೇನೆ ಎಂದು ಟಿಕೆಟ್ ಚೆಕ್ಕರ್ ಎಚ್ಚರಿಕೆ ನೀಡಿದ್ದಾರೆ. 

ಇದೀಗ ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಟಿಕೆಟ್ ಪರಿಶೀಲಕರ ಹೇಳಿಕೆಯು ಜಾತ್ಯಾತೀಯ ಉಲ್ಲಂಘನೆಯಾಗಿದೆ ಎಂದು ಕೆಲವರು ಹೇಳಿದ್ದಾರೆ. ಒಂದಿಷ್ಟು ಜನರು, ರೈಲಿನಲ್ಲಿ ತೊಂದರೆಯನ್ನುಂಟು ಮಾಡೋದು ತಪ್ಪು. ಟಿಕೆಟ್ ಚೆಕ್ಕರ್ ಪ್ರಬುದ್ಧವಾಗಿ ಮಾತನಾಡಿದ್ದಾರೆ. ಅವರು ಎಲ್ಲಿಯೂ ನಮಾಜ್ ಮಾಡೋದು ತಪ್ಪು ಅಂತ ಹೇಳಿಲ್ಲ. ನಿಮ್ಮ ಧಾರ್ಮಿಕ ಆಚರಣೆಗಳಿಂದ ಬೇರೆಯವರಿಗೆ ತೊಂದರೆ ಆಗಬಾರದು ಎಂದು ಮಾತ್ರ ಹೇಳಿದ್ದಾರೆ. ಪ್ರಯಾಣಿಕರ ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು ಹೇಳಿರುವ ಮಾತು ಎಂದಿದ್ದಾರೆ. 

ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆಗಳ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಆಗಾಗ ಈ ಕುರಿತು ಚರ್ಚೆಗಳು ನಡೆಯುತ್ತಿರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಮಾಡಬಹುದು. ಇಲ್ಲವಾದ್ರೆ ಅದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂಬ ವಾದವೂ ಕೇಳಿಬರುತ್ತದೆ.

Viral Post: ರಸ್ತೆಯಲ್ಲಿ ನಮಾಜ್‌ ಮಾಡುತ್ತಿದ್ದ ಮುಸ್ಲಿಮರನ್ನು ಒದ್ದು ಕಳಿಸಿದ ಪೊಲೀಸ್‌, ತನಿಖೆಗೆ ಆದೇಶ!

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ, ವೈರಲ್ ಆಗಿರುವ ವಿಡಿಯೋ ಸಹ ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ತನಿಖೆಗೆ ಆದೇಶಿಸಲಾಗಿದೆ. ಇಂತಹ ಸಮಸ್ಯೆಗಳನ್ನು ಸೂಕ್ತವಾಗಿ ಪರಿಹರಿಸಲು ಸೂಚಿಸಲಾಗಿದೆ. ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 

ಚಲಿಸುತ್ತಿರುವ ರೈಲಿನಲ್ಲಿ ಪ್ರಯಾಣಿಕರು ತಿರುಗಾಡುವ ಮಾರ್ಗದಲ್ಲಿ ಕೆಲ ಮುಸ್ಲಿಮರು ನಮಾಜ್ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದ್ದರಿಂದ ಟಿಕೆಟ್ ಚೆಕ್ಕರ್ ಎಲ್ಲರಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ಶಾಲೆಯಲ್ಲಿ ನಮಾಜ್ ಬ್ಯಾನ್, ಯುಕೆ ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗೆ ಹಿನ್ನಡೆ!

Latest Videos
Follow Us:
Download App:
  • android
  • ios