Asianet Suvarna News Asianet Suvarna News

ಪ್ರಜಾಪ್ರಭುತ್ವದ ಕೊಲೆ: ಸಂಸತ್ ಅಧಿವೇಶನ ಹಠಾತ್ ಸ್ಥಗಿತ, ರಾಹುಲ್ ಪ್ರತಿಕ್ರಿಯೆ!

* ಸಂಸತ್ತಿನ ಮಳೆಗಾಲದ ಅಧಿವೇಶನ ಹಠಾತ್ ಅಂತ್ಯ

* ಮಹಿಳಾ ಸದಸ್ಯರ ಮೇಲೆ ದಾಳಿ ನಡೆದ ಆರೋಪ

* ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ವಿಪಕ್ಷ ನಾಯಕರ ಪ್ರತಿಭಟನೆ

Murder of democracy says Rahul Gandhi at Opposition march to protest Monsoon Session curtailment pod
Author
Bangalore, First Published Aug 12, 2021, 1:34 PM IST

ನವದೆಹಲಿ(ಆ.12): ಸಂಸತ್ತಿನ ಮಳೆಗಾಲದ ಅಧಿವೇಶನ ಹಠಾತ್ ಅಂತ್ಯಗೊಂಡ ಹಾಗೂ ರಾಜ್ಯಸಭೆಯಲ್ಲಿ ಕೆಲ ಮಹಿಳಾ ಸದಸ್ಯರ ಮೇಲೆ ದಾಳಿ ನಡೆದ ಆರೋಪ ಕೇಳಿ ಬಂದಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ವಿಪಕ್ಷ ನಾಯಕರು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. 

ಸುದ್ದಿ ಸಂಸ್ಥೆ ಎಎನ್‌ಐಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ 'ಇಂದು ನಾವು ನಿಮ್ಮೊಂದಿಗೆ ಮಾತನಾಡಲು ಬಂದಿದ್ದೇವೆ, ಯಾಕೆಂದರೆ ನಮಗೆ ಒಳಗೆ ಮಾತನಾಡಲು ಅವಕಾಶವೇ ಕೊಡುತ್ತಿಲ್ಲ. ಇದು ಪ್ರಜಾಪ್ರಭುತ್ವದ 'ಕೊಲೆ' ಎಂದು ಕಿಡಿ ಕಾರಿದ್ದಾರೆ. ಅಲ್ಲದೇ ಸಂಸತ್ತಿನ ಅಧಿವೇಶನ ಮುಗಿದಿದೆ ದೇಶದ ಶೇಕಡಾ 60 ರಷ್ಟು ಮಂದಿ ಯಾವುದೇ ಅಧಿವೇಶನ ನಡೆದಿಲ್ಲ ಎನ್ನುತ್ತಿದ್ದಾರೆ. ನಿನ್ನೆ ರಾಜ್ಯಸಭೆಯಲ್ಲಿ ದೇಶದ ಶೇಕಡಾ 60 ರಷ್ಟು ಜನರ ಪ್ರತಿನಿಧಿಗಳ ಧ್ವನಿ ಹಿಡಿದಿಟ್ಟಿದ್ದಾರೆ, ಅವರನ್ನು ಅವಮಾನಿಸಿದ್ದಾರೆ ಮತ್ತು ದೈಹಿಕವಾಗಿ ಥಳಿಸಿದ್ದಾರೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವುತ್, 'ವಿರೋಧ ಪಕ್ಷಗಳಿಗೆ ಸಂಸತ್ತಿನಲ್ಲಿ ತನ್ನ ಅಭಿಪ್ರಾಯಗಳನ್ನು ಮಂಡಿಸಲು ಅವಕಾಶ ಸಿಗಲಿಲ್ಲ. ಬುಧವಾರ ಮಹಿಳೆಯರ ವಿರುದ್ಧ ನಡೆದ ಘಟನೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ನಾವು ಪಾಕಿಸ್ತಾನದ ಗಡಿಯಲ್ಲಿ ನಿಂತಿದ್ದೇವೆ ಎಂದು ತೋರುತ್ತಿತ್ತು' ಎಂದಿದ್ದಾರೆ. ಅಲ್ಲದೇ ಅವರು ಬುಧವಾರದಂದು, ರಾಜ್ಯಸಭೆಯ ವಿರೋಧ ಪಕ್ಷದ ಸಂಸದರು ಸದನದಲ್ಲಿ ವಿಮಾ ಮಸೂದೆಯನ್ನು ಪರಿಚಯಿಸುವ ಸಂದರ್ಭದಲ್ಲಿ ನಡೆದ ಘಟನೆಗೆ ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದಾರೆ. 

ಇನ್ನು ಎನ್‌ಸಿಪಿ ನಾಯಕ ಶರದ್ ಪವಾರ್ ಅವರೂ ಮಹಿಳೆಯರ ಮೇಲೆ ದಾಳಿ ಮಾಡಲು ಮತ್ತು ಸದನದಲ್ಲಿ ಸಂಸದರನ್ನು ನಿಯಂತ್ರಿಸಲು 40 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರನ್ನು ಸದನಕ್ಕೆ ಕರೆತರಲಾಗಿದೆ ಎಂದು ಆರೋಪಿಸಿದ್ದಾರೆ. 

Follow Us:
Download App:
  • android
  • ios