ಮೊದಲ ಮುಟ್ಟು; ನೋವಿಗೆ ಹೆದರಿ 14 ವರ್ಷದ ಹುಡುಗಿ ಆತ್ಮಹತ್ಯೆ!

ಮುಂಬೈನಲ್ಲಿ 14 ವರ್ಷದ ಹುಡುಗಿಯೊಬ್ಬಳು ತನ್ನ ಮೊದಲ ಮುಟ್ಟಿನ ನೋವಿನಿಂದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಘಟನೆಯು ಋತುಚಕ್ರದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತದೆ. 

Mumbai teen kills herself stressed by first period skr

ಮುಂಬೈನ ಮಾಲ್ವಾನಿ ಪ್ರದೇಶದಲ್ಲಿ 14 ವರ್ಷದ ಬಾಲಕಿಯೊಬ್ಬಳು ತನ್ನ ಮೊದಲ ಋತುಚಕ್ರದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಅಧಿಕಾರಿಗಳ ಪ್ರಕಾರ, ಗುರುತನ್ನು ಮರೆ ಮಾಡಲಾಗಿರುವ ಹುಡುಗಿಯು ಮಾಲ್ವಾನಿಯ ಲಕ್ಷ್ಮಿ ಚಾಲ್ಸ್‌ನಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಋತುಚಕ್ರದ ಬಗ್ಗೆ ತಪ್ಪು ಮಾಹಿತಿ ಮತ್ತು ಜ್ಞಾನದ ಕೊರತೆಯಿಂದಾಗಿ ಬಾಲಕಿ ಒತ್ತಡ ಮತ್ತು ಗೊಂದಲದಿಂದ ಬಳಲುತ್ತಿದ್ದಳು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಮಂಗಳವಾರ (ಮಾರ್ಚ್ 26) ಸಂಜೆ ಈ ಘಟನೆ ನಡೆದಾಗ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು ಎಂದು ವರದಿಗಳು ಸೂಚಿಸುತ್ತವೆ. ಆಕೆಯ ಪರಿಸ್ಥಿತಿಯನ್ನು ಕಂಡು, ಆಕೆಯ ಸಂಬಂಧಿಕರು ಮತ್ತು ನೆರೆಹೊರೆಯವರು ಆಕೆಯನ್ನು ಕಂಡಿವಲಿಯ ಹತ್ತಿರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದರು. ಆಕೆಯನ್ನು ರಕ್ಷಿಸುವ ಪ್ರಯತ್ನದ ಹೊರತಾಗಿಯೂ, ವೈದ್ಯರು ಆಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದರು.

ಈ ನಿರ್ದೇಶಕ ಒಂದು ಚಿತ್ರಕ್ಕೆ ಪಡೆಯೋದು 800 ಕೋಟಿ ರೂ. ಸಂಭಾವನೆ; ಕೈ ಹಾಕಿದ್ದೆಲ್ಲ ಸಕ್ಸಸ್
 

ತನಿಖಾಧಿಕಾರಿಯೊಬ್ಬರು, 'ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಆಕೆಯ ಸಂಬಂಧಿಕರು ಇತ್ತೀಚಿಗೆ ಮೊದಲ ಋತುಚಕ್ರದ ಅವಧಿಯಲ್ಲಿ ನೋವನ್ನು ಅನುಭವಿಸಿದ್ದಾಳೆ. ಅದರ ಬಳಿಕ ಆಕೆ ಸ್ಪಷ್ಟವಾಗಿ ವಿಚಲಿತಳಾಗಿದ್ದಳು ಮತ್ತು ಅಗಾಧವಾದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು, ಇದು ಅವಳನ್ನು ಅಂತಹ ಕಠಿಣ ಕ್ರಮಕ್ಕೆ ಪ್ರೇರೇಪಿಸಿದೆ ಎಂದು ತಿಳಿಸಿದ್ದಾರೆ' ಎಂದಿದ್ದಾರೆ. 

ಅಧಿಕಾರಿಗಳು ಫೌಲ್ ಪ್ಲೇ ಅನ್ನು ತಳ್ಳಿಹಾಕಿದ್ದಾರೆ. ಆದರೆ ತಮ್ಮ ತನಿಖೆಯಲ್ಲಿ ಎಲ್ಲಾ ಸಂಭಾವ್ಯ ಕೋನಗಳತ್ತ ಗಮನ ಹರಿಸುವುದಾಗಿ ಹೇಳಿದ್ದಾರೆ.
'ನಾವು ಆಕೆಯ ಭಾವನಾತ್ಮಕ ಸ್ಥಿತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅವಳ ಸ್ನೇಹಿತರನ್ನು ಸಂಪರ್ಕಿಸುತ್ತೇವೆ ಮತ್ತು ಆಕೆಯ ಕಾಳಜಿಗಳ ಒಳನೋಟವನ್ನು ಪಡೆಯಲು ಆಕೆಯ ಇತ್ತೀಚಿನ ಆನ್‌ಲೈನ್ ಚಟುವಟಿಕೆಗಳನ್ನು ಸಹ ಪರಿಶೀಲಿಸುತ್ತೇವೆ' ಎಂದು ಇನ್ನೊಬ್ಬ ಪೊಲೀಸ್ ಅಧಿಕಾರಿ ಹೇಳಿದರು.

ಅಬ್ಬಬ್ಬಾ, ಒಬ್ರಿಗಿಂತ ಒಬ್ರು ಚೆಂದ.. ಇವ್ರೇ ನೋಡಿ ಸ್ಟೈಲಿಶ್ ಆ್ಯಂಡ್ ಬ್ಯೂಟಿಫುಲ್ ಉರ್ಫಿ ಸೋದರಿಯರು
 

ಮರಣೋತ್ತರ ಪರೀಕ್ಷೆ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಬಾಲಕಿಯ ಮೃತದೇಹವನ್ನು ಆಕೆಯ ಕುಟುಂಬಕ್ಕೆ ಹಿಂತಿರುಗಿಸಲಾಗುತ್ತದೆ. ಪೊಲೀಸರು ಆಕಸ್ಮಿಕ ಸಾವಿನ ವರದಿಯನ್ನು ದಾಖಲಿಸಿದ್ದಾರೆ ಮತ್ತು ಈ ದುರಂತ ಘಟನೆಯ ಸುತ್ತಲಿನ ಪರಿಸ್ಥಿತಿಗಳನ್ನು ಆಳವಾಗಿ ಪರಿಶೀಲಿಸುತ್ತಿದ್ದಾರೆ.

ಈ ಘಟನೆಯು ಹದಿಹರೆಯ ಪ್ರವೇಶಿಸುವ ಮಕ್ಕಳಿಗೆ ಅವರ ದೇಹ ಮತ್ತು ಬೆಳವಣಿಗೆ ಬಗ್ಗೆ ಜಾಗೃತಿ ಮೂಡಿಸುವುದು ಎಷ್ಟು ಅಗತ್ಯ ಎಂಬುದನ್ನು ನಮಗೆ ನೆನಪಿಸುತ್ತದೆ. ಸಮುದಾಯದ ಪ್ರತಿಯೊಬ್ಬರೂ ವಿಶೇಷವಾಗಿ ಇಂತಹ ಕಠಿಣ ಸಮಯದಲ್ಲಿ, ಸಹಾಯದ ಅಗತ್ಯವಿರುವವರ ಬಗ್ಗೆ ಗಮನ ಹರಿಸಬೇಕು.
 

Latest Videos
Follow Us:
Download App:
  • android
  • ios