Asianet Suvarna News Asianet Suvarna News

ಹೊಸ ವರ್ಷ ಸಂಭ್ರಮದ ಬೆನ್ನಲ್ಲೇ ಮುಂಬೈನ 11 ಕಡೆ ಬಾಂಬ್ ದಾಳಿ ಬೆದರಿಕೆ, RBIಗೆ ಬಂತು ಮೇಲ್!

ಹೊಸ ವರ್ಷ ಸಂಭ್ರಮಕ್ಕೆ ಭಾರತದ ಬಹುತೇಕ ನಗರಗಳು ಸಜ್ಜಾಗಿದೆ. ಡಿಸೆಂಬರ್ 31ರ ರಾತ್ರಿ ಅದ್ಧೂರಿ ಪಾರ್ಟಿ ಆಯೋಜನೆಗೊಳ್ಳಲಿದೆ. ಆದರೆ ಈ ಸಂಭ್ರಮಾಚರಣೆಗೂ ಮೊದಲೇ ಆತಂಕ ಎದುರಾಗಿದೆ. ಮುಂಬೈ 11 ಕಡೆ ಬಾಂಬ್ ದಾಳಿ ಬೆದರಿಕೆ ಇಮೇಲ್ ಬಂದಿದೆ. 

Mumbai RBI receive Bomb threat e mail ahead of New year celebration ckm
Author
First Published Dec 26, 2023, 5:42 PM IST

ಮುಂಬೈ(ಡಿ.26) ಹೊಸ ವರ್ಷಾಚರಣೆಗೆ ತಯಾರಿ ಜೋರಾಗಿದೆ. 2023ಕ್ಕೆ ಗುಡ್ ಬೈ ಹೇಳಿ, 2024ನೇ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನ ತಯಾರಾಗಿದ್ದಾರೆ. ಪಾರ್ಟಿಗಳು ಆಯೋಜನೆಗೊಳ್ಳಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮ ಮುಗಿಲು ಮುಟ್ಟಲಿದೆ. ಆದರೆ ಹೊಸ ವರ್ಷದ ಸಂಭ್ರಮಾಚರಣೆಗೂ ಮುನ್ನ ಮುಂಬೈನ 11 ಕಡೆಗಳಲ್ಲಿ ಬಾಂಬ್ ಇಡಲಾಗಿದೆ. ಯಾವುದೇ ಕ್ಷಣದಲ್ಲೂ ಸ್ಫೋಟಿಸುತ್ತೇವೆ ಅನ್ನೋ ಬೆದರಿಕೆ ಇಮೇಲ್ ಬಂದಿದೆ. ಮುಂಬೈನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಇಮೇಲ್ ಬಂದಿದ್ದು, ವಿಚಿತ್ರ ಬೇಡಿಕೆಯನ್ನು ಮುಂಡಿಲಾಗಿದೆ.

ಆರ್‌ಬಿಐ ಗವರ್ನರ್ ಶಶಿಕಾಂತ ದಾಸ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಈ ಬೆದರಿಕೆ ಇಮೇಲ್‌ನಲ್ಲಿ ಬೇಡಿಕೆ ಇಡಲಾಗಿದೆ. ಮುಂಬೈನ 11 ಕಡೆ ಬಾಂಬ್ ಇಡಲಾಗಿದೆ. ನಮ್ಮ ಬೇಡಿಕೆ ಈಡೇರದಿದ್ದರೆ ಸ್ಫೋಟಿಸುವುದಾಗಿ ಇಮೇಲ್ ಸಂದೇಶ ಕಳುಹಿಸಲಾಗಿದೆ. ಮುಂಬೈನ ಆರ್‌ಸಿಬಿ ಕಚೇರಿ, ಹೆಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿ ಬ್ಯಾಂಕ್ ಸೇರಿದಂತೆ 11 ಕಡೆಗಳಲ್ಲಿ ಬಾಂಬ್ ಇಡಲಾಗಿದೆ ಎಂದು ಇಮೇಲ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಸಂಸಂತ್ ಒಳಗೆ 3 ಸಂಚು ರೂಪಿಸಿದ್ದಾಗಿ ಬಾಯ್ಬಿಟ್ರಾ ಆರೋಪಿಗಳು..? ಬಗೆದಷ್ಟು ಬಯಲಾಗ್ತಿದೆ ಭಯಾನಕ ಸತ್ಯ 

ಶಶಿಕಾಂತ್ ದಾಸ್ ಹಾಗೂ ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡದೆ ಹೋದರೆ, ಮಧ್ಯಾಹ್ನ 1.30ಕ್ಕೆ ಒಂದರ ಹಿಂದೆ ಒಂದರಂತೆ 11 ಬಾಂಬ್ ಸ್ಫೋಟಿಸಲಿದೆ ಎಂದು ಬೆದರಿಕೆ ಹಾಕಲಾಗಿದೆ. ಶಶಿಕಾಂತ ದಾಸ, ನಿರ್ಮಲಾ ಸೀತಾರಾಮನ್ ಬ್ಯಾಂಕಿಂಗ್ ಹಗರಣ ನಡೆಸಿದ್ದಾರೆ. ಬ್ಯಾಂಕಿಂಗ್ ಹಗರಣದಲ್ಲಿ ಪಾಲ್ಗೊಂಡಿರುವ ಎಲ್ಲರನ್ನೂ ಕೇಂದ್ರ ಸರ್ಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಆರ್‌ಸಿಬಿಗೆ ಈ ಬೆದರಿಕೆ ಇಮೇಲ್ ಬಂದ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಮೇಲ್ ಮೂಲಕ ಸೂಚಿರುವ 11 ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಈ ಬೆದರಿಕೆ ಇಮೇಲ್ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

 

 

ಪೊಲೀಸರನ್ನು ಪರೀಕ್ಷಿಸಲು ರಾಜಭವನಕ್ಕೆ ಬಾಂಬ್ ಬೆದರಿಕೆ ಹಾಕಿದ್ನಂತೆ ಆಸಾಮಿ!

ಇತ್ತೀಚೆಗೆ ಹುಸಿ ಬಾಂಬ್ ಕರೆಗಳು, ಇಮೇಲ್ ಬೆದರಿಕೆಗೆ ಹೆಚ್ಚಾಗುತ್ತಿದೆ. ಹಲವರು ಈಗಾಗಲೇ ಕಂಬಿ ಎಣಿಸುತ್ತಿದ್ದಾರೆ. ಇದೀಗ 11 ಕಡೆ ಬಾಂಬ್ ದಾಳಿ ಇಮೇಲ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೊಸ ವರ್ಷದ ಸಂಭ್ರಮಕ್ಕೂ ಮುನ್ನವೇ ದಾಳಿ ಬೆದರಿಕೆ ಬಂದಿರುವುದು ಆತಂಕ ಹೆಚ್ಚಿಸಿದೆ.

Follow Us:
Download App:
  • android
  • ios