ವಿಶ್ವವೇ ಹೊಸ ವರ್ಷ ಬರಮಾಡಿಕೊಳ್ಳಲು ಸಜ್ಜಾಗಿದೆ. ಎಲ್ಲೆಡೆ ಪಾರ್ಟಿ, ಮೋಜು ಮಸ್ತಿಗಳು ನಡೆಯುತ್ತಿದೆ. ಇದರ ನಡುವೆ ಸರಣಿ ಬಾಂಬ್ ಸ್ಫೋಟದ ಬೆದರಿಕೆ ಕರೆಯೊಂದು ಪೊಲೀಸರಿಗೆ ಬಂದಿದೆ. ಇದೀಗ ಪೊಲೀಸರು ಎಲ್ಲೆಡೆ ತೀವ್ರ ಪರಿಶೋಧನೆ ಆರಂಭಿಸಿದ್ದಾರೆ.

ಮುಂಬೈ(ಡಿ.31) ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳುವುದರಲ್ಲಿ ಭಾರತ ಇತರ ರಾಷ್ಟ್ರಕ್ಕಿಂತ ಮುಂದಿದೆ. ಕ್ಲಬ್, ಪಬ್, ಪಾರ್ಟಿ ಸೇರಿದಂತೆ ವಿವಿಧ ರೀತಿಯಲ್ಲಿ ಹೊಸ ವರ್ಷ ಆಚರಣೆ ನಡೆಯುತ್ತದೆ. ಬೀದಿ ಬೀದಿಗಳಲ್ಲಿ ಅದ್ಧೂರಿ ಸೆಲೆಬ್ರೇಷನ್, ಪಾರ್ಟಿ ಆಯೋಜಿಸಲಾಗುತ್ತಿದೆ. ಈಗಾಗಲೇ ಪಾರ್ಟಿ ಆರಂಭಗೊಂಡಿದೆ. ಇದರ ನಡುವೆ ಮುಂಬೈ ಪೊಲೀಸರಿಗೆ ಬೆದರಿಕೆ ಕರೆಯೊಂದು ಬಂದಿದೆ. ಹೊಸ ವರ್ಷಾಚರಣೆಗೆ ಸರಣಿ ಬಾಂಬ್ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಕರೆ ಬೆನ್ನಲ್ಲೇ ಮುಂಬೈ ಪೊಲೀಸರು ಹಲವು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮುಂಬೈ ಪೊಲೀಸ್ ಠಾಣಗೆ ಈ ಬೆದರಿಕೆ ಕರೆ ಬಂದಿದೆ. ಹೊಸ ವರ್ಷಾಚಣೆ ವೇಳೆ ಸರಣಿ ಬಾಂಬ್ ಸ್ಫೋಟಗಳು ನಡೆಯಲಿದೆ ಅನ್ನೋ ಬೆದರಿಕೆಯನ್ನು ಹಾಕಲಾಗಿದೆ. ಬೆದರಿಕೆ ಕರೆ ಬಂದ ಬೆನ್ನಲ್ಲೇ ಮುಂಬೈನ ಎಲ್ಲಾ ಪೊಲೀಸ್ ಠಾಣೆಗೆ ಅಲರ್ಟ್ ನೀಡಲಾಗಿದೆ. ತಂಡ ರಚಿಸಿರುವ ಅಧಿಕಾರಿಗಳು ಪಾರ್ಟಿ ಆಯೋಜಿಸುವ, ಹೆಚ್ಚಿನ ಜನಸಂದಣಿ ಇರುವ ಸ್ಥಳಗಳಲ್ಲಿ ತಪಾಸಣೆ ನಡೆಯಲಾಗುತ್ತಿದೆ.

ಹೊಸ ವರ್ಷ ಸಂಭ್ರಮದ ಬೆನ್ನಲ್ಲೇ ಮುಂಬೈನ 11 ಕಡೆ ಬಾಂಬ್ ದಾಳಿ ಬೆದರಿಕೆ, RBIಗೆ ಬಂತು ಮೇಲ್!

ಚತ್ರಪತಿ ಶಿವಾಜಿ ಟರ್ಮಿನಲ್ ರೈಲು ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬಾಂಬ್ ಸ್ಕ್ವಾಡ್ ಸೇರಿದಂತೆ ಪೊಲೀಸರು ತಪಾಸಣೆ ನಡೆಸಿದ್ದಾರೆ. ಸದ್ಯ ಯಾವುದೇ ಸ್ಫೋಟಗಳು, ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಪೊಲೀಸರು ಹದ್ದಿನ ಕಣ್ಣಿಟ್ಟಿತ್ತು. ತೀವ್ರ ಕಟ್ಟೆಚರ ವಹಿಸಲಾಗಿದೆ. ಇದು ಹುಸಿ ಬಾಂಬ್ ಕರಯೋ ಅಥವಾ ನಿಜಕ್ಕೂ ಬಾಂಬ್ ಇಡಲಾಗಿದೆಯೋ ಅನ್ನೋ ಕುರಿತು ತನಿಖೆ ನಡೆಯುತ್ತಿದೆ. 

ಇತ್ತೀಚೆಗೆ ಹುಸಿ ಬಾಂಬ್ ಕರೆಗಳು ಹೆಚ್ಚಾಗುತ್ತಿದೆ. ಇದರ ನಡುವೆ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿನ ಬಾಂಬ್ ಸ್ಫೋಟ ಹಲವು ಆತಂಕಕ್ಕೆ ಕಾರಣವಾಗಿದೆ. ಇದರ ನಡುವೆ ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಪೋಟ ಸಂಭವಿಸುವ ಮೂಲಕ ಆತಂಕ ಮತ್ತಷ್ಟು ಹೆಚ್ಚಾಗಿದೆ. ಡಿ.26 ರಂದು ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಸ್ಫೋಟ ನಡೆದಿತ್ತು. ಈ ದಾಳಿ ಕುರಿತು ತನಿಖೆ ನಡೆಸಲಾಗುತ್ತಿದ್ದು ಜಾಮಿಯಾ ನಗರದಿಂದ ಆಟೋ ರಿಕ್ಷಾದಲ್ಲಿ ಬಂದ ಶಂಕಿತ ದಾಳಿಕೋರನನ್ನು ಗುರುತಿಸಲಾಗಿದೆ. ಆತನ ಪತ್ತೆಗೆ ಬಲೆ ಬೀಸಲಾಗಿದೆ. ಅಲ್ಲದೇ ಪ್ರಕರಣವನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ದಳ)ಗೂ ಹಸ್ತಾಂತರಿಸುವ ಕುರಿತು ಯೋಜಿಸಲಾಗುತ್ತಿದೆ ಎಂದು ದೆಹಲಿ ಪೊಲೀಸ್‌ ಮೂಲಗಳು ತಿಳಿಸಿವೆ.

Breaking news: ಶಾಲೆಗಳಿಗೆ ಬಾಂಬ್ ಬೆದರಿಕೆ ಬೆನ್ನಲ್ಲೇ ಇದೀಗ ಅಪರಿಚಿತನಿಂದ ರಾಜಭವನಕ್ಕೆ ಬಾಂಬ್ ಬೆದರಿಕೆ!

ಇದಕ್ಕೂ ಮೊದಲು ವಾಣಿಜ್ಯ ನಗರಿ ಮುಂಬೈನ 11 ಸ್ಥಳಗಳ ಮೇಲೆ ಬಾಂಬ್‌ ದಾಳಿ ನಡೆಸುವುದಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಕೇಂದ್ರ ಕಚೇರಿಗೆ ಇ ಮೇಲ್‌ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ್ದ ವಡೋದರ ಮೂಲದ ವ್ಯಕ್ತಿಯನ್ನು ಮುಂಬೈ ಅಪರಾಧ ದಳದ ಪೊಲೀಸರು ಬಂಧಿಸಿದ್ದರು.