Asianet Suvarna News Asianet Suvarna News

ಅಡಲ್ಟ್‌ ಸಿನಿಮಾ ಶೂಟಿಂಗ್‌: ಇಬ್ಬರು ನಟಿಯರು ಓರ್ವ ನಟನ ಬಂಧನ...!

ಅಡಲ್ಟ್ ಸಿನಿಮಾ ಶೂಟ್‌ ಮಾಡಿ ಅದನ್ನು ಲೈವ್ ಸ್ಟ್ರೀಮಿಂಗ್ ಮಾಡ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  ಬಂಧಿತರು ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಅದನ್ನು  ಗ್ರಾಹಕರ ಚಂದದಾರಿಕೆ ಇರುವಂತಹ ಆಪ್ ಮೂಲಕ ಬಿಡುಗಡೆ ಮಾಡುತ್ತಿದ್ದರು.

Mumbai Police arrested 3 who making adult movies and doing live streaming through pihu App akb
Author
First Published Nov 7, 2023, 2:36 PM IST

ಮುಂಬೈ: ಅಡಲ್ಟ್ ಸಿನಿಮಾ ಮಾಡಿ ಅದನ್ನು ಲೈವ್ ಸ್ಟ್ರೀಮಿಂಗ್ ಮಾಡ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  ಬಂಧಿತರು ಅಶ್ಲೀಲ ಚಿತ್ರಗಳನ್ನು ನಿರ್ಮಿಸಿ ಅದನ್ನು  ಗ್ರಾಹಕರ ಚಂದದಾರಿಕೆ ಇರುವಂತಹ ಆಪ್ ಮೂಲಕ ಬಿಡುಗಡೆ ಮಾಡುತ್ತಿದ್ದರು. ಪಿಹು ಹೆಸರಿನ ಈ ಒನ್ಲಿ ಫ್ಯಾನ್  ಒನ್ಲಿ ಫ್ಯಾನ್ ಆಪ್‌ನಂತೆ ಇದ್ದು  ಇಲ್ಲಿ ಸಿನಿಮಾ ನೋಡಲು ಬಯಸುವವರು  ಮಾಸಿಕ ವಾರ್ಷಿಕ ಹೀಗೆ ಹಣ ನೀಡಿ ಸಬ್‌ಸ್ಕ್ರೈಬ್ ಆಗಬೇಕಾಗುತ್ತದೆ. 

ವರ್ಸೋವಾ ಪೊಲೀಸ್ ಅಧಿಕಾರಿಗಳ ಪ್ರಕಾರ,  ಬಂಧಿತ ಆರೋಪಿಗಳಲ್ಲಿ  ಇಬ್ಬರು ಮಹಿಳೆಯರೂ ಕೂಡ ಇದ್ದು, ಅವರಲ್ಲಿ ಒಬ್ಬಾಕೆ 20 ಹಾಗೂ ಮತ್ತೊಬ್ಬಾಕೆ 30 ವರ್ಷದವಳಾಗಿದ್ದಾಳೆ. ಹಾಗೆಯೇ ಮತ್ತೊಬ್ಬ ಆರೋಪಿಯ ವಯಸ್ಸು 27, ಈ ಮೂವರು ಈ ಆಪ್‌ಗೆ ಅಪ್‌ಲೋಡ್ ಮಾಡಬೇಕಾದ ಅಶ್ಲೀಲ ಸಿನಿಮಾದ ಕಂಟೆಂಟ್‌ಗಳನ್ನು  ಚಿತ್ರಿಕರಿಸುತ್ತಿದ್ದರು.  ಈ ಆಪ್‌ನಲ್ಲಿ ಬಳಕೆದಾರರು ಆಡಿಯೋ ಹಾಗೂ ವೀಡಿಯೋಗಳನ್ನು  ಬುಕ್ ಮಾಡುವ ಅವಕಾಶವಿತ್ತು.

ಇವರು ಎರಡು ವಾರಗಳ ಹಿಂದಷ್ಟೇ ಅಂಧೇರಿ ಪಶ್ಚಿಮದಲ್ಲಿ ಸಾಕಷ್ಟು ಇಂತಹ ಲೈವ್‌ ಸ್ಟ್ರೀಮ್‌ಗಳನ್ನು (Live streaming) ಚಿತ್ರೀಕರಿಸಿದ ಬಗ್ಗೆ ಸ್ಥಳೀಯ ಮಾಹಿತಿದಾರರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಪೊಲೀಸರು ಪಶ್ಚಿಮ ಅಂಧೇರಿಯಲ್ಲಿ  ಪೊಲೀಸರು ದಾಳಿ ನಡೆಸಿ, ಈ ಮೂವರನ್ನು ಬಂಧಿಸಿದ್ದಾರೆ. ಭಾನುವಾರ ಅಂಧೇರಿ ಪಶ್ಚಿಮದ 4 ಬಂಗಲೆಗಳಲ್ಲಿ ಇವರು ಅಶ್ಲೀಲ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಇವರು ಕೇವಲ ನಟರಾಗಿದ್ದು, ಈ ಅಪ್ಲಿಕೇಷನ್‌ನ ಮಾಲೀಕರು ಬೇರೆಯೇ ಇದ್ದು, ಅವರಿಗಾಗಿ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಈ ಆಪ್‌ ತನ್ನ ಬಳಕೆದಾರರಿಗೆ ತಮ್ಮ  ಸ್ಟ್ರೀಮಿಂಗ್ ಸಮಯವನ್ನು ಇನ್ಸ್ಟಾಗ್ರಾಮ್‌ನಲ್ಲಿ ನೇರ ಸಂದೇಶಗಳ ಮೂಲಕ ತಿಳಿಸುತ್ತಿತ್ತು. ಬಳಕೆದಾರರು ಈ ಸ್ಟ್ರೀಮಿಂಗ್ ಖರೀದಿಗೆ ಅಪ್ಲಿಕೇಷನ್‌ನಲ್ಲಿ ನಾಣ್ಯಗಳನ್ನು ಖರೀದಿಸಬೇಕಾಗಿತ್ತು.  ಆಪ್‌ನಲ್ಲಿ  ತಮ್ಮ ಪ್ರೊಫೈಲ್ ಹೊಂದಿರುವ ಮಹಿಳೆಯರು ಆಡಿಯೋ ಹಾಗೂ ವೀಡಿಯೋ ಕರೆಗಳನ್ನು ಒದಗಿಸುತ್ತಿದ್ದರು ಎಂದು ವರ್ಸೋವಾ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಅಲ್ಲದೇ ಇದಕ್ಕೆ 7,500 ನೋಂದಣಿ ಶುಲ್ಕವನ್ನು ಕೂಡ ಕಟ್ಟಬೇಕಿತ್ತು.  ಅಲ್ಲದೇ ಪ್ರತಿ ವೀಕ್ಷಣೆಗೂ ಪ್ರತ್ಯೇಕವಾಗಿ ಪಾವತಿ ಮಾಡಬೇಕಿತ್ತು. ನಾಣ್ಯಗಳ ಖರೀದಿಗೆ ಡಿಜಿಟಲ್ ಪೇಮೆಂಟ್ (Digital Payment) ಮಾತ್ರ ಬಳಕೆ ಮಾಡಬೇಕಿತ್ತು.  ಒಮ್ಮೆ ಗ್ರಾಹಕರು ಆ್ಯಪ್‌ಗೆ ಪ್ರವೇಶ ಪಡೆದರೆ, ಅವರು ವಿವಿಧ ಮಹಿಳೆಯರ ಪ್ರೊಫೈಲ್‌ಗಳನ್ನು ಸಹ ನೋಡಬಹುದಿತ್ತು.  ಈ ಮಹಿಳೆಯರು ತಮ್ಮ ಪ್ರೊಫೈಲ್‌ಗಳಲ್ಲಿ ಪ್ರಚಾರಕ್ಕಾಗಿ ಕೆಲ ವೀಡಿಯೋಗಳನ್ನು ಹಾಕುತ್ತಿದ್ದರು.  ಅದನ್ನು ನೋಡಿದ ಗ್ರಾಹಕರು ಅವರನ್ನು ಸಂಪರ್ಕಿಸುತ್ತಿದ್ದರು ಹೆಚ್ಚಿನ ಸ್ಟ್ರೀಮ್‌ಗಳಲ್ಲಿ ಸಂಭಾಷಣೆಯೂ ಇರುತ್ತಿದ್ದವು ಎಂದು ಅಧಿಕಾರಿ ಹೇಳಿದ್ದಾರೆ. 

ಪ್ರಸ್ತುತ ಈ ಆಪ್‌ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಹಾಗೂ ಆಪಲ್ ಪ್ಲೇ ಸ್ಟೋರ್‌ನಿಂದಲೂ ಡಿಲಿಟ್ ತೆಗೆದು ಹಾಕಲಾಗಿದೆ. ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 292, 293, ರ ಅಡಿ ಹಾಗೂ ಐಟಿ ಕಾಯ್ದೆಯಡಿಯೂ ಕೂಡ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  ಬಂಧಿತರೆಲ್ಲರೂ ನಮ್ಮ ಕಸ್ಟಡಿಯಲ್ಲಿದ್ದು, ಇಲ್ಲಿ ಗ್ರಾಹಕರು ನೀಡಿದ ಹಣ ಯಾವ ಖಾತೆಗೆ ಹೋಗುತ್ತಿದೆ ಎಂಬ ಬಗ್ಗೆ  ನಾವು ಟ್ರ್ಯಾಕ್ ಮಾಡ್ತಿದ್ದೇವೆ.  ಅಲ್ಲದೇ ಬೇರೆ ಆಯಾಮದಿಂದಲೂ ವಿಚಾರಣೆ ನಡೆಸುತ್ತಿದ್ದೇವೆ. ಅಲ್ಲದೇ ಯಾವುದೇ ಮಹಿಳೆಯರನ್ನು ಈ ಕೃತ್ಯವೆಸಗುವುದಕ್ಕಾಗಿ ಒತ್ತಾಯ ಮಾಡಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. 

Follow Us:
Download App:
  • android
  • ios