Asianet Suvarna News Asianet Suvarna News

ಇಲ್ಲೊಬ್ಬ ಆಹಾರ ಯೋಧ: ಪ್ರತಿದಿನ 200 ಕೊರೋನಾ ರೋಗಿಗಳಿಗೆ ಆಹಾರ ಪೂರೈಕೆ

ಕೊರೋನಾ ಉಲ್ಭಣವಾಗುತ್ತಿರುವ ಜೊತೆ ಜೊತೆಗೇ ಬಹಳಷ್ಟು ಮಾನವೀಯ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇಲ್ಲೊಬ್ಬ ಆಹಾರ ಯೋಧನ ಕೆಲಸ ವೈರಲ್ ಆಗಿದೆ. ಏನದು ನೋಡಿ..

Mumbai Man Provides Food Twice A Day To 200 COVID-19 Patients In Home Quarantine dpl
Author
Bangalore, First Published Apr 30, 2021, 12:57 PM IST

ಮುಂಬೈ(ಏ.30): ಪ್ರಪಂಚ ಅತ್ಯಂತ ಕಷ್ಟದ ದಿನಗಳನ್ನು ಎದುರಿಸುತ್ತಿದೆ. ಕೊರೊನಾವೈರಸ್ ಎರಡನೇ ಅಲೆಯಲ್ಲಿ ಭಾರತದಲ್ಲಿ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಆದರೆ ಎಲ್ಲಾ ಕಷ್ಟಗಳ ಮಧ್ಯೆ, ದೇಶಾದ್ಯಂತ ಜನರು ತಮ್ಮ ಹೆಚ್ಚುವರಿ ಸಮಯ ಮತ್ತು ಸಂಪನ್ಮೂಲಗಳನ್ನು ಉತ್ತಮ ಕೆಲಸಕ್ಕಾಗಿ ಬಳಸುವುದರ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿದ್ದಾರೆ.

ಅನೇಕರಿಗೆ ಮನೆಯಲ್ಲೇ ಐಸೋಲೇಷನ್‌ನಲ್ಲಿರುವ COVID-19 ರೋಗಿಗಳಿಗೆ ಆಹಾರವನ್ನು ಒದಗಿಸುವ ಅವಕಾಶವಾಗಿ ಬಂದಿದೆ. ಕೋವಿಡ್ ರೋಗಿಗಳು ಆರೋಗ್ಯಕರ ಆಹಾರವನ್ನು ಪಡೆಯುವುದು ಬಹಳ ಮುಖ್ಯ. ಇದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾರೆ ಮುಂಬೈನ ಒಬ್ಬ ವ್ಯಕ್ತಿ.

ಹೆಚ್ಚುತ್ತಿರೋ ಕೊರೋನಾ ಮಧ್ಯೆ ಬದುಕೋಕೆ ಸುರಕ್ಷಿತ ದೇಶಗಳಿವು..!

ಉದ್ಯಮಿ ರಾಜೀವ್ ಸಿಂಘಾಲ್ ಅವರಿಗೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕರೋನವೈರಸ್ ಪಾಸಿಟಿವ್ ಬಂದಿತ್ತು. ನಂತರ, ಅವರ ಇಡೀ ಕುಟುಂಬಕ್ಕೆ ಪಾಸಿಟಿವ್ ಬಂತು. ಕ್ಯಾರೆಂಟೈನ್‌ನಲ್ಲಿದ್ದ ದಿನಗಳಲ್ಲಿ ಅವರಿಗೆ ಸರಿಯಾದ ಆಹಾರ ಸಿಕ್ಕಿರಲಿಲ್ಲ. ಆ ಸಂದರ್ಭದಲ್ಲಿ ಮನೆ ಊಟಕ್ಕಾಗಿ ಬಹಳಷ್ಟು ಹಂಬಲಿಸಿದ್ದರು ರಾಜೀವ್.

ಪ್ರಸ್ತುತ ಭಾರತ ಕರೋನವೈರಸ್ ಎರಡನೇ ಅಲೆಯೊಂದಿಗೆ ಹೋರಾಡುತ್ತಿದೆ. ಆಹಾರದ ವಿಷಯದಲ್ಲಿ ಜನರು ಅವರು ಕಷ್ಟಪಟ್ಟಂತೆ ಕಷ್ಟಪಡದಿರಲಿ ಎಂದೇ ರಾಜೀವ್ ಬಯಸುತ್ತಾರೆ. ಹಾಗಾಗಿ ಅವರು 200 ಕ್ಕೂ ಹೆಚ್ಚು COVID-19 ರೋಗಿಗಳಿಗೆ ದಿನಕ್ಕೆ ಎರಡು ಬಾರಿ ಮನೆಯಲ್ಲೇ ತಯಾರಿಸಿದ ಆರೋಗ್ಯಕರ ಆಹಾರವನ್ನು ನೀಡಲು ಪ್ರಾರಂಭಿಸಿದ್ದಾರೆ. ಸಿಂಘಾಲ್ ಆಹಾರವನ್ನು ತಯಾರಿಸಲು ಮುಂಬೈನ ಮಲಾಡ್ನಲ್ಲಿ ಆಶಾ ಕಿಚನ್ ಫುಡ್ ಸೇವೆಯನ್ನು ನೇಮಿಸಿಕೊಂಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

"

Follow Us:
Download App:
  • android
  • ios