ಮೌತ್ ವಾಶ್ ಆರ್ಡರ್ ಮಾಡಿದ ವ್ಯಕ್ತಿಗೆ ಸಿಕ್ತು ಮೊಬೈಲ್ ಫೋನ್ ಆರ್ಡರ್ ಮಾಡಿದ್ದು ಕಾಲ್ಗೆಟ್ ಮೌತ್‌ವಾಶ, ಸಿಕ್ಕಿದ್ದು ರೆಡ್‌ಮಿ ನೋಟ್ 10

ದೆಹಲಿ(ಮೇ.16): ಆನ್‌ಲೈನ್ ಶಾಪಿಂಗ್‌ನ ಅವಾಂತರಗಳು ಒಂದೆರಡಲ್ಲ, ಆದರೆ ಕೆಲವೊಮ್ಮೆ ಗ್ರಾಹಕರಿಗೆ ಬಂಪರ್ ಸಿಗುವುದಿದೆ. ಅಮೆಝಾನ್‌ ಅವರು ಮೌತ್‌ವಾಶ್ ಬದಲಿಗೆ ಗ್ರಾಹಕನಿಗೆ ರೆಡ್‌ಮಿ ನೋಟ್ 10 ಸ್ಮಾರ್ಟ್‌ಫೋನ್ ಡೆಲಿವರಿ ಮಾಡಿದ್ದಾರೆ.

ಲೋಕೇಶ್ ದಾಗಾ ಅಮೆಝಾನ್‌ನಲ್ಲಿ ಮೌತ್‌ವಾಶ ಆರ್ಡರ್ ಮಾಡಿದ್ದರು. ಇವರಿಗೆ ಮೌತ್‌ವಾಶ್ ಬದಲು ಮೊಬೈಲ್ ಫೋನ್ ಸಿಕ್ಕಿದೆ. ತಪ್ಪಿ ವಸ್ತು ಡೆಲಿವರಿಯಾಗಿದ್ದರೂ ಅದನ್ನು ಮರಳಿಸಲೂ ಸಾಧ್ಯವಾಗ್ತಿಲ್ಲ ಎಂದಿದ್ದಾರೆ ಲೋಕೇಶ್.

ಯೋಗಿ ಸೇರಿ ನಾಲ್ವರು ಸಿಎಂಗಳ ಜೊತೆ ಮೋದಿ ಮಾತು, ಕೊರೋನಾ ಬಗ್ಗೆ ಮಾಹಿತಿ!

ಮೌತ್‌ವಾಶ್ ಹಿಂದಿರುಗಿಸಲು ಪ್ರಯತ್ನಿಸಿದರೂ ಕಂಪನಿ ನಿಯಮಗಳು ಇದನ್ನು ಅನುಮತಿಸುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಮೊಬೈಲ್ ಫೋನ್ ಇಟ್ಟುಕೊಂಡಿದ್ದಾರೆ ಲೋಕೇಶ್

Scroll to load tweet…