ಮುಂಬೈ[ಜ.18]: ‘ನಿದ್ರೆಯಿಲ್ಲದ ನಗರ’ ಎಂದೇ ಖ್ಯಾತಿಗೊಳಗಾಗಿರುವ ಮುಂಬೈನಲ್ಲಿ ಇನ್ನು ಈ ಹೆಸರಿಗೆ ತಕ್ಕಂತೆ ಚಟುವಟಿಕೆಗಳು ನಡೆಯಲಿವೆ. ನಗರದ ಮಾಲ್‌ಗಳು, ಶಾಪಿಂಗ್‌ ಕಾಂಪ್ಲೆಕ್ಸ್‌ಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ದಿನದ 24 ತಾಸೂ ತೆರೆಯಲು ಮಹಾರಾಷ್ಟ್ರ ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರಿನಲ್ಲಿ ಅನಧಿಕೃತ ಪಬ್, ಬಾರ್ ಗಳೇ ಹೆಚ್ಚು !

ಇತ್ತೀಚೆಗೆ ಶಿವಸೇನೆ ಮುಖಂಡ ಹಾಗೂ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅಧ್ಯಕ್ಷತೆಯಲ್ಲಿ ನಡೆದ ಮುಂಬೈ ಪೊಲೀಸರು ಹಾಗೂ ಪಾಲಿಕೆ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನಗರದ ಜೀವನವನ್ನು ಮತ್ತಷ್ಟು ಹೊಳೆಯುವಂತೆ ಮಾಡುವುದು ಇದರ ಹಿಂದಿನ ಉದ್ದೇಶ ಎಂದು ಹೇಳಲಾಗಿದೆ. ಆದರೆ ಈ ನಿರ್ಧಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಜನವಸತಿ ಪ್ರದೇಶಗಳನ್ನು ಈ ನಿರ್ಧಾರದಿಂದ ಹೊರಗಿಡಬೇಕು ಎಂದು ಆಗ್ರಹಿಸಿದೆ. 

ದೇವರ ಹೆಸರಿನ ಬಾರ್‌, ವೈನ್‌ಶಾಪ್‌ ನಾಮಫಲಕ ತೆರವಿಗೆ ಕ್ರಮ