ತಿಂಗಳಿಗೆ 1.35 ಲಕ್ಷ ರೂ ಬಾಡಿಗೆ,5 ಲಕ್ಷ ಅಡ್ವಾನ್ಸ್; ಫೋಟೋದಲ್ಲೇ ಮನೆ ಸಮಸ್ಯೆ ಪತ್ತೆ ಹಚ್ಚಿದ ನೆಟ್ಟಿಗರು!
ತಿಂಗಳಿಗೆ 1.35 ಲಕ್ಷ ರೂಪಾಯಿ ಬಾಡಿಗೆ, 5 ಲಕ್ಷ ರೂಪಾಯಿ ಅಡ್ವಾನ್ಸ್, ಇದರ ಜೊತೆಗೆ ಬ್ರೋಕರ್‌ಗೆ 1.4 ಲಕ್ಷ ರೂಪಾಯಿ ನೀಡಬೇಕು. ಮುಂಬೈನಲ್ಲಿರುವ ಈ ದುಬಾರಿ ಮನೆಯ ಫೋಟೋ ನೋಡಿದ ನೆಟ್ಟಿಗರು ಇಲ್ಲೊಂದು ಸಮಸ್ಯೆ ಇದೆ ಎಂದಿದ್ದಾರೆ. ಅದೇನು?
ಮುಂಬೈ(ಸೆ.26) ವಾಣಿಜ್ಯ ನಗರಿ ಎಂದೇ ಗುರುತಿಸಿಕೊಂಡಿರುವ ಮುಂಬೈ ಉದ್ಯೋಗ ಅರಸಿ ಬಂದವರಿಗೆ ಕೆಲಸ ನೀಡುತ್ತೆ. ಹಲವರು ಮುಂಬೈಗೆ ಬಂದು ಬದಕು ಕಟ್ಟಿಕೊಂಡಿದ್ದಾರೆ. ಇದು ಕನಸುಗಳ ನಗರ. ಬೆಟ್ಟದಷ್ಟು ಕನಸುಗಳ ಸಾಕಾರಗೊಳಿಸಲು ಮುಂಬೈ ಬಹುತೇಕರ ಮೊದಲ ಆಯ್ಕೆ. ಆದರೆ ಮುಂಬೈ ಅಷ್ಟೇ ದುಬಾರಿ. ಇಲ್ಲಿ ಬಾಡಿಗೆ ಮನೆ ಕೈಗೆಟುಕದ ವಸ್ತು. ಇದೀಗ ಮುಂಬೈನ ಸಾಮಾನ್ಯ ಫ್ಲಾಟ್ ಭಾರಿ ಸದ್ದು ಮಾಡುತ್ತಿದೆ. ಈ ಮನೆಗೆ ತಿಂಗಳಿಗೆ 1.35 ಲಕ್ಷ ರೂಪಾಯಿ ಬಾಡಿಗೆ, 4 ಲಕ್ಷ ರೂಪಾಯಿ ಅಡ್ವಾನ್ಸ್. ಆದರೆ ಈ ಮನೆಯಲ್ಲೊಂದು ಸಮಸ್ಯೆ ಇದೆ ಎಂದು ಮನೆ ಹುಡುಕಾಟ ನಡೆಸುತ್ತಿದ್ದ ಎಕ್ಸ್ ಬಳಕೆದಾರ ಗುರುತಿಸಿದ್ದಾರೆ.
ಉತ್ಕರ್ಷ್ ಗುಪ್ತಾ ಮುಂಬೈನಲ್ಲಿ ಬಾಡಿಗೆ ಮನೆ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಆನ್‌ಲೈನ್ ಸೇರಿದಂತೆ ಹಲವು ವೇದಿಕೆಗಳ ಮೂಲಕ ಗುಪ್ತಾ ಹುಡುಕಾಡಿದ್ದಾರೆ. ಈ ವೇಳೆ ಬಾಂದ್ರಾದಲ್ಲಿನ ಮನೆಯ ಫೋಟೋ ಹಾಗೂ ಇತರ ಮಾಹಿತಿ ಪರಿಶೀಲಿಸಿದಾಗ ಅಚ್ಚರಿಯಾಗಿದೆ. ಕಾರಣ ಈ ಫ್ಲಾಟ್‌ಗೆ ಮಾಲೀಕರು ತಿಂಗಳಿಗೆ 1.35 ಲಕ್ಷ ರೂಪಾಯಿ ಬಾಡಿಗೆ ಎಂದಿದ್ದಾರೆ. ಇತ್ತ 4 ಲಕ್ಷ ರೂಪಾಯಿ ಅಡ್ವೌನ್ಸ್ ಮೊತ್ತವಾಗಿ ನೀಡಬೇಕು. ಜೊತೆಗೆ ಬ್ರೋಕರ್‌ಗೆ 1.4 ಲಕ್ಷ ರೂಪಾಯಿ ನೀಡಬೇಕು.
ಈ ಕಾರಣಕ್ಕೆ ಬೆಂಗಳೂರು ನಿವಾಸಿ ಮನೆ ಬಾಡಿಗೆ 80 ಸಾವಿರ ರೂ, ಕಣ್ತೆರೆದು ನೋಡಲು ಹೇಳಿದ ಜನ!
ಇದು 2 ಬೆಡ್ ರೂಂ ಮನೆ. ಹಾಗಂತ ಮುಂಬೈನ ಸಾಮಾನ್ಯ ಫ್ಲಾಟ್‌ಗಳ ಬೆಡ್ ರೂಂ ಸ್ಥಳವಕಾಶ ತುಸು ಕಡಿಮೆ. ಆದರೆ ಉತ್ಕರ್ಷ್ ಗುಪ್ತಾ ಈ ಫೋಟೋ ನೋಡಿ ಒಂದು ಸಮಸ್ಯೆ ಪತ್ತೆ ಹಚ್ಚಿದ್ದಾರೆ. ಈ ಫೋಟೋವನ್ನು ಗುಪ್ತಾ ಹಂಚಿಕೊಂಡ ಬೆನ್ನಲ್ಲೇ ನೆಟ್ಟಿಗರೂ ಮನೆಯ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಪ್ರಮುಖ ಸಮಸ್ಯೆ ಎಂದರೆ ಈ ಟಾಯ್ಲೆಡ್ ಕಮೋಡ್ ಮೇಲೆ ವಾಶಿಂಗ್‌ಮಶೀನ್ ಇರಿಸಲಾಗಿದೆ. ವಾಶಿಂಗ್ ಮಶೀನ್ ಇಡಲು ಈ ಫ್ಲಾಟ್‌ನಲ್ಲಿ ಸ್ಥಳವಿಲ್ಲ.
ಹಲವರು ಈ ಪೋಸ್ಟ್‌ಗೆ ಕಮೆಂಟ್ ಮಾಡಿದ್ದಾರೆ. ಇದು ಮುಂಬೈನ ಬಹುತೇಕ ಕಡೆಗಳಲ್ಲಿರುವ ಸಮಸ್ಯೆ. ಮುಂಬೈ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಒಂದಿಂಚು ಜಾಗವಿಲ್ಲ. ಪಿಜಿಗಳಲ್ಲಿ ಬಂಕರ್ ಮೂಲಕವೂ ಮಲಗಲು ಜಾಗವಿಲ್ಲ. ಅಷ್ಟರಮಟ್ಟಿಗೆ ಮುಂಬೈ ತುಂಬಿ ತುಳುಕುತ್ತಿದೆ. ಹೀಗಾಗಿ ಮುಂಬೈ ದುಬಾರಿ ದುನಿಯಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
2 ಬೆಡ್ ರೂಂ ಮನೆಯಲ್ಲಿ ವಾಶಿಂಗ್ ಮಶೀನ್ ಇಡಲು ಜಾಗವಿಲ್ಲ ಎಂದರೆ ಏನು? ಆದರೆ ಬಾಡಿಗೆ ಮಾತ್ರ 1.34 ಲಕ್ಷ ರೂಪಾಯಿ. ಯೂರೋಪ್ ದೇಶಗಳಲ್ಲಿನ ಬಾಡಿಗೆ ಇದೀಗ ಮುಂಬೈನಲ್ಲಿದೆ.
ಕಟ್ಟಡ ಬಾಡಿಗೆ ನೀಡಿದ ವಿರಾಟ್ ಕೊಹ್ಲಿ, ಪ್ರತಿ ತಿಂಗಳ ಬಾಡಿಗೆ 8.85 ಲಕ್ಷ ರೂ!