ನವದೆಹಲಿ(ಸೆ.14): ಕೊರೋನಾ ವೈರಸ್, ಲಾಕ್‌ಡೌನ್ ಸೇರಿದಂತೆ ಹಲವು ಕಾರಣಗಳಿಂದ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಲಾಕ್‌ಡೌನ್ ನಷ್ಟ ಸರಿದೂಗಿಸಲು ಸರ್ಕಾರ ಹೆಣಗಾಡುತ್ತಿದೆ. ಹೀಗಾಗಿ ಕೊರೋನಾ ವೈರಸ್‌ನಿಂದ ಸೃಷ್ಟಿಯಾಗಿರುವ ಅಗತ್ಯತೆಗಳಿಗೆ ಪೂರೈಕೆ ಮಾಡಲು ಸಂಸದರ ವೇತನದ ಶೇಕಡಾ 30 ರಷ್ಟು ಕಡಿತ ಮಾಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಸಾರಿಗೆ ನಿಗಮದ 10,000 ನೌಕರರಿಗೆ ಸಂಬಳವಿಲ್ಲ

ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಸಂಸದರ ವೇತನ ಕಡಿತ ಮಸೂದೆಯನ್ನು ಮಂಡಿಸಿದ್ದಾರೆ. ಸಂಸದ  ವೇತನ, ಭತ್ಯೆ, ಪೆನ್ಶನ್  ಬಿಲ್ ತಿದ್ದುಪಡಿ 2020ರ ಅಡಿಯಲ್ಲಿ ಪ್ರಸಕ್ತ ವರ್ಷ ಈ ಕಡಿತ ಜಾರಿ ಮಾಡುವಂತೆ ಈ ಮಸೂದೆ ಉಲ್ಲೇಖಿಸಿದೆ. 1954ರ ಪಾರ್ಲಿಮೆಂಟ್ ಮೆಂಬರ್ ಸ್ಯಾಲರಿ ಬಿಲ್ ತಿದ್ದುಪಡಿ ಬಿಲ್ ಮಂಡಿಸುತ್ತಿದ್ದೇನೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇಲ್ಲಿನ ಶಿಕ್ಷಕರು ಪಿಎಂ ಮೋದಿಗಿಂತಲೂ ಹೆಚ್ಚು ಸ್ಯಾಲರಿ ಪಡೆಯುತ್ತಾರೆ!

ಕೊರೋನಾ ವೈರಸ್ ಮಹಾಮಾರಿಯಿಂದ ನಿರ್ಮಾಣವಾಗಿರುವ ಆರ್ಥಿಕ ಬಿಕ್ಕಟ್ಟು ಸರಿದೂಗಿಸಲು ವೇತನ ಕಡಿತ  ಅನಿವಾರ್ಯವಾಗಿದೆ. ಈ ಮಸೂದೆ ಎಪ್ರಿಲ್ 6 ರಂದು ಕ್ಯಾಬಿನೆಟ್ ಅನುಮೂದನೆ ನೀಡಿದೆ .

ಕೆಲಸ ಕಳೆದುಕೊಂಡ 40 ಸಾವಿರ ಖಾಸಗಿ ಶಿಕ್ಷಕರು

ಪ್ರಧಾನಿ ಲಾಕ್‌ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ, ಹಲವು ಕಂಪನಿಗಳು ವೇತನ ಕಡಿತ, ಉದ್ಯೋಗ ಕಡಿತ ಮಾಡಿತ್ತು. ಅನ್‌ಲಾಕ್ ಪ್ರಕ್ರಿಯೆ ಸಂಪೂರ್ಣವಾಗಿ ಜಾರಿಯಾದರೂ ಹಲವು ಕಂಪನಿಗಳ ಕಡಿತಗಳು ಮುಂದುವರಿದಿದೆ. ಇದೀಗ ಸಂಸದರಿಗೂ ವೇತನ ಕಡಿತದ ಬಿಸಿ ತಟ್ಟಿದೆ.