ಭೋಪಾಲ್(ಡಿ.16): ಅದೃಷ್ಟವೆಂದರೆ ಹೀಗಿರಬೇಕು! ಒಂದು ಸಣ್ಣ ವಜ್ರದ ಹರಳಿನಿಂದ ಮಧ್ಯಪ್ರದೇಶದ ರೈತನೊಬ್ಬ ರಾತ್ರೋರಾತ್ರಿ ಲಕ್ಷಾಧೀಶನಾಗಿದ್ದಾನೆ.

ಪನ್ನಾ ಜಿಲ್ಲೆ ವಜ್ರದ ಗಣಿಗಳಿಗೆ ಫೇಮಸ್‌. ಅಲ್ಲಿನ ರೈತ ಲಖನ್‌ ಯಾದವ್‌ ಎಂಬಾತನಿಗೆ ಕೃಷ್ಣಾ ಕಲ್ಯಾಣ್‌ಪುರ ಪ್ರದೇಶದ ಗಣಿಯೊಂದರಲ್ಲಿ 14.98 ಕ್ಯಾರೆಟ್‌ನ ವಜ್ರವೊಂದು ದೊರೆತಿತ್ತು. ಅದೇ ರೀತಿ ಹಲವು ಕಡೆ ದೊರೆತ 74 ವಜ್ರಗಳನ್ನು ಪಟನಾ ಜಿಲ್ಲಾಡಳಿತ ಇತ್ತೀಚೆಗೆ ಹರಾಜು ಹಾಕಿತ್ತು.

ಲಖನ್‌ ಯಾದವ್‌ಗೆ ದೊರೆತ ವಜ್ರದ ಹರಳು ಬರೊಬ್ಬರಿ 60.60 ಲಕ್ಷ ರು.ಗಳಿಗೆ ಹರಾಜಾಗಿದೆ. ಲಖನ್‌ ಯಾದವ್‌ ಒಬ್ಬ ಸಣ್ಣ ರೈತನಾಗಿದ್ದು, 2 ಎಕರೆ ಜಮೀನನ್ನು ಹೊಂದಿದ್ದಾನೆ. ಗಣಿ ಕೆಲಸದ ವೇಳೆ ಸಿಕ್ಕ ದೊರೆತ ವಜ್ರದಿಂದಾಗಿ ಆತ ಈಗ ಲಕ್ಷಾಧಿಪತಿಯಾಗಿದ್ದಾನೆ