ಕೊರೋನಾ ಪೀಡಿತ ಹಿರಿಯನ ದಂಪತಿಗಳು ಚೇತರಿಕೆ/ ಹೂಗುಚ್ಛ ನೀಡಿ ಬೀಳ್ಕೊಟ್ಟ ಆಸ್ಪತ್ರೆ ಸಿಬ್ಬಂದಿ/ ದಂಪತಿಯ ಮುಖದಲ್ಲಿ ಮದುವೆ ಕಾಲದ ಸಂಭ್ರಮ
ಭೋಪಾಲ್(ಜೂ.05) ಕೊರೋನಾ ಗೆದ್ದ ಈ ಜೋಡಿ ಮತ್ತೊಮ್ಮೆ ಮದುವೆಯಾಗಿದ್ದಾರೆ! ಇದು ನಮ್ಮ ಎರಡನೇ ಜೀವನ ಎಂದು 62 ವರ್ಷದ ವಧು ಹೇಳುವಾಗ ಆಕೆಯ ಕಣ್ಣಲ್ಲಿ ಹೊಳಪು.
ಹೌದು ಈ ಹಿರಿಯ ಜೀವಗಳಲ್ಲಿ ಅವರ ಮದುವೆ ಸಂಭ್ರಮದ ದಿನಗಳು ನೆನಪಾಗಿವೆ. ಅವರನ್ನು ಹೂಗಳಿಂದ ಸಿಂಗರಿಸಲಾಗಿದೆ. ಇದಕ್ಕೆ ಕಾರಣವನ್ನು ಹೇಳುತ್ತೇವೆ ಕೇಳಿ .
ದಾಮೋಹ್ ನ ರಾಸ್ಲಿಪುರ್ ಹಳ್ಳಿಗೆ ಗುರುಗ್ರಾಮಕ್ಕೆ ದಂಪತಿ ವಾಪಸ್ ಕಳೆದ ತಿಂಗಳು ಆಗಿದ್ದಾರೆ. 20 ನರ ತಂಡದೊಂದಿಗೆ ವಾಪಸ್ ಆಗಿದ್ದಾರೆ. ಮಹಿಳೆಗೆ ಮೇ 19 ರಂದು ಕೊರೋನಾ ಸೋಂಕು ದೃಢವಾಗಿತ್ತು. ಇದಾದ ಮೇಲೆ ಮಹಿಳೆಯ ಇಡೀ ಕುಟುಂಬವನ್ನು ಸೋಂಕು ಆವರಿಸಿತ್ತು.
ಇಂಗ್ಲೆಂಡಿನಲ್ಲಿ ಕೊರೋನಾ ಗೆದ್ದ ಬೆಳಗಾವಿ ದಂಪತಿ
ಕುಟುಂಬದ 13 ಜನರಿಗೆ ಕೋವಿಡ್ ತಗುಲಿತ್ತು. ಆಕೆಯ 64 ವರ್ಷದ ಗಂಡ ಕೊರೋನಾ ಪೀಡಿತನಾಗಿದ್ದ.
ಮಹಿಳೆ ಚಿಕಿತ್ಸೆಗೆ ಸ್ಪಂದಿಸಲು ಬಹಳ ಕಾಲ ತೆಗೆದುಕೊಂಡಳು. ಕುಟುಂಬದ ಹತ್ತು ಜನ ಕೆಲವೇ ದಿನಗಳ ಹಿಂದೆ ಡಿಸ್ಟಾರ್ಜ್ ಆದರು. ಅವರ ಬಾಳಿನಲ್ಲಿ ಇದೊಂದು ದೊಡ್ಡ ತಿರುವು ಎಂದು ದಾಮೋಹ್ ಆಸ್ಪತ್ರೆಯ ವೈದ್ಯ ದಿವಾಕರ್ ಪಾಟೀಲ್ ಹೇಳುತ್ತಾರೆ. ಚೇತರಿಸಿಕೊಂಡ ದಂಪತಿಯನ್ನು ಆಸ್ಪತ್ರೆ ಸಿಬ್ಬಂದಿ ಹೂಗುಚ್ಛ ನೀಡಿ ಬೀಳ್ಕೊಟ್ಟರು.
