ದಿನಸಿ ತರಲು ಹೋದ ಮಗ ಹೆಂಡತಿ ಜೊತೆ ವಾಪಾಸಾದ: ತಾಯಿಗೆ ಆಘಾತ!

ದಿನಸಿ ತರಲು ಹೋದ ಮಗ ಹೆಂಡತಿ ಜೊತೆ ವಾಪಾಸಾದ| ವಾಸ್ತವ ಕೇಳಿ ತಾಯಿ ಕಂಗಾಲು| ಈ ಮದುವೆ ಒಪ್ಪಿಕೊಳ್ಳಲು ನಾನು ತಯಾರಿಲ್ಲ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ ತಾಯಿ

Mother sends son to buy groceries in Ghaziabad he returns with wife

ಗಾಜಿಯಾಬಾದ್(ಏ.30): ದಿನಸಿ ತರಲೆಂದು ಕಳುಹಿಸಿದ್ದ ಮಗ, ಮನೆಗೆ ಬರುವಾಗ ಹೆಂಡತಿಯನ್ನು ಕರೆದುಕೊಂಡು ಬಂದಿದ್ದಾನೆಂದು ಹೇಳಿ ತಾಯಿಯೊಬ್ಬಳು ಪೊಲಿಸ್ ಠಾಣೆ ಮೆಟ್ಟಿಲೇರಿದ್ದಾಳೆ. ಲಾಕ್‌ಡೌನ್ ಕರ್ತವ್ಯದಲ್ಲಿ ತಲ್ಲೀನರಾಗಿರುವ ಪೊಲೀಸರಿಗೆ ಈ ಪ್ರಕರಣ ಅಚ್ಚರಿಗೀಡು ಮಾಡಿದೆ.

ಹೌದು ಉತ್ತರ ಪ್ರದೇಶದ ಸಾಹಿಬಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಈ ಕುರಿತು ಪ್ರತಿಕ್ರಿಯಿಸಿದ ತಾಯಿ 'ನಾನು ಮಗನನ್ನು ಇಂದು ದಿನಸಿ ತರಲೆಂದು ಕಳುಹಿಸಿದ್ದೆ. ಆದರೆ ಆತ ಹೆಂಡತಿ ಜೊತೆ ಮರಳಿದ್ದೆ. ಈ ಮದುವೆಯನ್ನು ಒಪ್ಪಿಕೊಳ್ಳಲು ನಾನು ತಯಾರಿಲ್ಲ' ಎಂದಿದ್ದಾರೆ.

ಮೆಗಾ ಸ್ಟಾರ್‌ ಸೋದರ ಸೊಸೆ ಜೊತೆ ಪ್ರಭಾಸ್‌ ಮದುವೆ; ನಡೆಯುತ್ತಿದೆ ಸಿದ್ಧತೆ?

ಇನ್ನು ಮದುವೆ ಸಂಬಂಧ ಮಾಹಿತಿ ನೀಡಿರುವ ಮದುವೆ ಗಂಡು 26 ವರ್ಷದ ಗುಡ್ಡು 'ನಾನು ಎರಡು ತಿಂಗಳ ಹಿಂದೆಯೇ ಹರಿದ್ವಾರದ ಆರ್ಯ ಸಮಾಜ ಮಂದಿರದಲ್ಲಿ ಸವಿತಾಳನ್ನುಮದುವೆಯಾಗಿದ್ದೆ. ಆದರೆ ಆಗ ಮ್ಯಾರೆಜ್ ಸರ್ಟಿಫಿಕೇಟ್ ಸಿಕ್ಕಿರಲಿಲ್ಲ. ಇದನ್ನು ಪಡೆಯಲು ಮತ್ತೆ ಹರಿದ್ವಾರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೆ. ಆದರೆ ಲಾಕ್‌ಡೌನ್‌ನಿಂದ ಇದು ಸಾಧ್ಯವಾಗಲಿಲ್ಲ' ಎಂದಿದ್ದಾರೆ.

ಇನ್ನು 'ಹರಿದ್ವಾರದಿಂದ ಮರಳಿದ ಬಳಿಕ ಸವಿತಾ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಳು. ಲಾಕ್‌ಡೌನ್‌ನಿಂದ ಆಕೆಗೆ ಮನೆ ಖಾಲಿ ಮಾಡಲು ಹೇಳಿದ್ದರಿಂದ, ಅವಳನ್ನು ನನ್ನ ತಾಯಿ ಮನೆಗೆ ಕರೆತರಲು ನಿರ್ಧರಿಸಿದೆ' ಎಂದಿದ್ದಾರೆ.

Latest Videos
Follow Us:
Download App:
  • android
  • ios