ಬಾಲಕನೊಬ್ಬ ಬಾಲಿವುಡ್ ನಟ ಶಾರುಖ್ ಖಾನ್ ಸಿಗ್ನೇಚರ್ ಪೋಸ್ ನೀಡಲು ಪ್ರಯತ್ನಿಸಿದ್ದಾನೆ. ಆದರೆ ಹಿಂಬದಿಯಲ್ಲಿದ್ದ ಬಾಲಕನ ತಾಯಿ ಮೆಲ್ಲನೆ ಬಂದು ಬಾಲಕನಿಗ ಅಚ್ಚರಿ ಉಡುಗೊರೆಯೊಂದನ್ನು ನೀಡಿದ್ದಾಳೆ.
ಸೆಲೆಬ್ರೆಟಿಗಳಿಂದ ಸಾಮಾನ್ಯರ ವರೆಗೂ ಬಾಲಿವುಡ್ ನಟ ಶಾರುಖ್ ಖಾನ್ ಅವರ ಐಕಾನಿಕ್ ಸಿಗ್ನೇಚರ್ ಪೋಸ್ ಎಲ್ಲರೂ ಪ್ರಯತ್ನಿಸಿದ್ದಾರೆ. ಅಷ್ಟರ ಮಟ್ಟಿಗೆ ಶಾರುಖ್ ಸಿಗ್ನೇಚರ್ ಪೋಸ್ ಜನಪ್ರಿಯವಾಗಿದೆ. ಇದೇ ಪೋಸ್ ಕುರಿತು ಸಾಕಷ್ಟು ರೀಲ್ಸ್ ಕೂಡ ಮಾಡಲಾಗಿದೆ. ಇದೀಗ ಬಾಲಕನೊಬ್ಬ ರೀಲ್ಸ್‌ಗಾಗಿ ಶಾರುಖ್ ಖಾನ್ ರೀತಿ ಪೋಸ್ ನೀಡಿದ್ದಾನೆ. ಶಾಲಾ ಯೂನಿಫಾರ್ಮ್ ಹಾಗೂ ಬ್ಯಾಗ್‌ನಲ್ಲಿದ್ದ ಬಾಲಕ ದಿಢೀರ್ ಬ್ಯಾಗ್ ಕಳಚಿಟ್ಟು ಪೋಸ್ ನೀಡಿದ್ದಾರೆ. ಆದರೆ ಈತನ ಪೋಸ್ ಮುಗಿಯುವ ಮೊದಲೇ ಹಿಂಬದಿಯಲ್ಲಿದ್ದ ಈ ಬಾಲಕನ ತಾಯಿ ಮೆಲ್ಲನೆ ಬಂದು ಅಚ್ಚರಿ ನೀಡಿದ ವಿಡಿಯೋ ಒಂದು ಇದೀಗ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.
ಸ್ಲಮ್ ಏರಿಯಾದಲ್ಲಿ ನಡೆದಿರುವ ಘಟನೆ ಇದು. ಬಾಲಕ ಶಾಲಾ ಸಮವಸ್ತ್ರದಲ್ಲಿದ್ದಾನೆ. ಬ್ಯಾಗ್ ಕೂಡ ಹಾಕಿಕೊಂಡಿದ್ದಾನೆ. ಆದರೆ ಕ್ಯಾಮೆರಾಗೆ ಪೋಸ್ ನೀಡುವಾಗ ತನ್ನ ಬ್ಯಾಗನ್ನು ರಸ್ತೆಯಲ್ಲಿ ಕಳಚಿಟ್ಟಿದ್ದಾನೆ. ಬಳಿಕ ಬಾಲಕ ಶಾರುಖ್ ರೀತಿ ಪೋಸ್ ನೀಡಿದ್ದಾನೆ. ಇದು ಶಾಲೆಗೆ ತೆರಳು ವೇಳೆ ಅಥವಾ ಶಾಲೆಯಿಂದ ಬಂದ ಬಳಿಕವೋ ಅನ್ನೋದು ಸ್ಪಷ್ಟವಾಗಿಲ್ಲ. ಈ ಬಾಲಕನ ಪೋಸ್ ನೀಡುತ್ತಿದ್ದಂತೆ ಆತನ ಹಿಂಭಾಗದಲ್ಲಿದ್ದ ಬಾಲಕನ ತಾಯಿ, ನೇರವಾಗಿ ಕಾಲಿನಿಂದ ಚಪ್ಪಲಿ ಎತ್ತಿಕೊಂಡಿದ್ದಾಳೆ. ಬಾಲಕನ ಬಳಿ ಬಂದ ತಾಯಿ ಚಪ್ಪಲಿಯಿಂದ ಏಟು ಕೊಟ್ಟಿದ್ದಾಳೆ.
ಬೆಂಗಳೂರಿನಲ್ಲಿ ನಾಯಿ ಮೇಲೆ ಬೈಕ್ ಹತ್ತಿಸಿದ ತ್ರಿಬಲ್ ರೈಡರ್ಸ್, ವಿಡಿಯೋ ಬೆನ್ನಲ್ಲೇ ಆಕ್ರೋಶ!
ಬಾಲಕನಿಗೆ ಚಪ್ಪಲಿ ಏಟು ನೀಡಿದ ತಾಯಿ ಮಂಗಳಾರತಿ ಮಾಡಿದ್ದಾಳೆ. ಚಪ್ಪಲಿ ಏಟು ತಿಂದ ಬಾಲಕ ಶಾರುಖ್ ಪೋಸ್ ನಿಲ್ಲಿಸಿದ್ದಾನೆ. ತಾಯಿ ಆಕ್ರೋಶದ ಮಾತುಗಳಿಗೆ ಸ್ಥಳದಿಂದ ತೆರಳಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. ಇದರ ಬೆನ್ನಲ್ಲೇ ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ. ಬಾಲಕ ಶಾರುಖ್ ಆಗುವ ಕನಸು ಕಂಡಿದ್ದಾನೆ. ಆದರೆ ಇದೆಲ್ಲಾ ಬಿಟ್ಟು ಓದಿನತ್ತ ಗಮನಕೊಡು ಎಂದು ತಾಯಿ ಚಪ್ಪಲಿ ಏಟು ನೀಡಿದ್ದಾರೆ ಎಂದು ಕೆಲವರು ಕಮೆಂಟ್ರಿ ನೀಡಿದ್ದಾರೆ. ಇದೇ ವೇಳೆ ಇದು ಭಾರತದ ತಾಯಿಯ ಸಾಮಾನ್ಯ ನಡೆ. ಟಿಪಿಕಲ್ ತಾಯಿಯ ಪ್ರಮುಖ ಅಸ್ತ್ರ ಇದು. ಇದು ತಪ್ಪಲ್ಲ, ವಿಶೇಷವೂ ಇಲ್ಲ ಎಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.
ಇದು ಹಳ್ಳಿ ಸೇರಿದಂತೆ ಬಹುತೇಕ ಭಾರತದಲ್ಲಿ ಕಂಡುಬರುವ ದೃಶ್ಯ. ತಾಯಿಗೆ ಮಾತ್ರ ಈ ರೀತಿ ಮಕ್ಕಳನ್ನು ಸರಿದಾರಿಗೆ ತರುವ ಸಾಮರ್ಥ್ಯವಿದೆ. ಇಲ್ಲಿ ತಾಯಿ ಪ್ರೀತಿಯೂ ಕಾಣಬಹುದು. ಶಿಕ್ಷೆ, ಚಪ್ಪಲಿ ಅನ್ನೋದು ಕೆಲವರ ವಿರೋಧಕ್ಕೆ ಕಾರಣವಾಗಬಹುದು. ಆದರೆ ಇಲ್ಲಿ ತಾಯಿ ಪ್ರೀತಿ, ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ಇಂತಹ ಟ್ರೀಟ್‌ಮೆಂಟ್ ಅಗತ್ಯವಿದೆ.ಆದರೆ ಅತೀಯಾಗಬಾರದು ಎಂದು ಮತ್ತೆ ಕೆಲವರು ಸಲಹೆ ನೀಡಿದ್ದಾರೆ.
ಪತ್ನಿಯನ್ನು ಬಾಂಗ್ಲಾ ಪ್ರಧಾನಿ ಮಾಡುತ್ತೇನೆ, ಶೇಕ್ ಹಸೀನಾ ಸೀರೆ ಸೂಟ್ ಕದ್ದವನ ವೀರಾವೇಶದ ಮಾತು!
