ನಾವು ಸಾಮಾನ್ಯವಾಗಿ ಹಲವು ಬಗೆಯ ಪಕ್ಷಿಗಳನ್ನು ಮನೆಯಲ್ಲಿ ಸಾಕುತ್ತೇವೆ. ಅವುಗಳ ಬೆಲೆ ನೂರರಿಂದ ಸಾವಿರಗಳವರೆಗೆ ಇರುತ್ತದೆ. ಆದರೆ ಕೋಟಿ ಬೆಲೆ ಬಾಳುವ ಪಕ್ಷಿ ಯಾವುದೆಂದು ನಿಮಗೆ ತಿಳಿದಿದೆಯೇ? ಆ ಪಕ್ಷಿಗೆ ಯಾಕೆ ಅಷ್ಟೊಂದು ಬೆಲೆ? ತಿಳಿದುಕೊಳ್ಳಿ.
ಪ್ರಪಂಚದಲ್ಲಿ ದುಬಾರಿ ವಸ್ತುಗಳ ಬಗ್ಗೆ ನಾವು ಆಗಾಗ ಕೇಳ್ತಾನೆ ಇರ್ತೀವಿ. ಅವುಗಳ ಬೆಲೆ ಲಕ್ಷಗಳಲ್ಲಿ ಇರುತ್ತದೆ. ಆದರೆ ಇಷ್ಟೊಂದು ದುಬಾರಿ ಪಾರಿವಾಳದ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದರ ಬೆಲೆ ಒಂದು ಎರಡಲ್ಲ, ನೂರು BMW ಕಾರುಗಳಿಗೆ ಸಮಾನವಂತೆ. ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಪಕ್ಷಿ ಎಂದು ಪರಿಗಣಿಸಲಾಗಿದೆ. ಪಾರಿವಾಳಗಳು ಮಾತ್ರವಲ್ಲ ಕೆಲವು ಗಿಳಿಗಳು,, ಕೋಳಿಗಳು ಕೂಡ ತುಂಬಾ ದುಬಾರಿಯಾಗಿವೆ. ಅವುಗಳ ವಿಶೇಷತೆ ಏನೆಂದು ಒಮ್ಮೆ ನೋಡೋಣ.
ಅತ್ಯಂತ ದುಬಾರಿ ಪಾರಿವಾಳದ ಬೆಲೆ
ಪ್ರಪಂಚದಲ್ಲೇ ಅತ್ಯಂತ ದುಬಾರಿ ಪಕ್ಷಿ ರೇಸಿಂಗ್ ಪಾರಿವಾಳ. 2020 ರಲ್ಲಿ, ಅರ್ಮಾಂಡೋ ಎಂಬ ರೇಸಿಂಗ್ ಪಾರಿವಾಳ 1.4 ಮಿಲಿಯನ್ ಡಾಲರ್‌ಗಳಿಗೆ ಅಂದರೆ ಸುಮಾರು 115 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಇದು ಚಾಂಪಿಯನ್ ರೇಸರ್. ಇದು ತುಂಬಾ ವೇಗವಾಗಿ ಹಾರುತ್ತದೆ. ಇವುಗಳಿಗೆ ಹೆಚ್ಚು ದೂರ ಹಾರಲು ತರಬೇತಿ ನೀಡಲಾಗುತ್ತದೆ. ಈ ಪಾರಿವಾಳಗಳು ಗಂಟೆಗೆ 60 ಮೈಲುಗಳ ವೇಗದಲ್ಲಿ ಹಾರುತ್ತವೆ. ಅರ್ಮಾಂಡೋ ಅತ್ಯಂತ ದುಬಾರಿ ಪಕ್ಷಿ ಎಂಬ ವಿಶ್ವ ದಾಖಲೆ ನಿರ್ಮಿಸಿದೆ. ಪ್ರಸ್ತುತ BMW X4 ಬೆಲೆ 96.20 ಲಕ್ಷ ರೂಪಾಯಿಗಳು ಅಂದರೆ ಸುಮಾರು ಒಂದು ಕೋಟಿ ರೂಪಾಯಿಗಳು. ಈ ಲೆಕ್ಕದಲ್ಲಿ ಅರ್ಮಾಂಡೋ ಪಾರಿವಾಳದ ಬೆಲೆ 100 ಕ್ಕೂ ಹೆಚ್ಚು ಕಾರುಗಳಿಗೆ ಸಮಾನ.
ಇದನ್ನೂ ಓದಿ: ಜಗತ್ತಿನ ಅತಿ ದುಬಾರಿ ತಿನಿಸುಗಳಿವು! ಬೆಲೆ ಕೇಳಿದ್ರೆ ತಲೆತಿರುಗಿ ಬಿಳೋದು ಗ್ಯಾರಂಟಿ!
ಅತ್ಯಂತ ದುಬಾರಿ ಗಿಳಿ
ನ್ಯೂ ಗಿನಿಯಾದಲ್ಲಿ ಬ್ಲ್ಯಾಕ್ ಪಾಮ್ ಕಾಕಟೂ ಎಂಬ ದೊಡ್ಡ ಗಿಳಿಕಾಣಸಿಗುತ್ತದೆ. ಈ ಗಿಳಿಯ ಗರಿಗಳು ಕಪ್ಪಾಗಿ, ಕೊಕ್ಕು ತುಂಬಾ ದೊಡ್ಡದಾಗಿರುತ್ತದೆ. ಬ್ಲ್ಯಾಕ್ ಪಾಮ್ ಕಾಕಟೂ ಬೆಲೆ 15 ಸಾವಿರ ಡಾಲರ್‌ಗಳು ಅಂದರೆ 12 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಪ್ರಪಂಚದಲ್ಲೇ ಅತಿ ದೊಡ್ಡ ಗಿಳಿ ಹೈಸಿಂತ್ ಮಕಾವ್, ಇದು ದಕ್ಷಿಣ ಅಮೆರಿಕಾದಲ್ಲಿ ಕಾಣಸಿಗುತ್ತದೆ. ಇದು ಮೂರು ಅಡಿ ಉದ್ದದವರೆಗೆ ಬೆಳೆಯುತ್ತದೆ. ಇದರ ಬೆಲೆ 10,000 ಡಾಲರ್‌ಗಳು ಅಂದರೆ ಸುಮಾರು 8 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
ಕಪ್ಪು ಮಾಂಸದ ಕೋಳಿಗಳು
ಆಯಂ ಸೆಮಾನಿ ಚಿಕನ್ ಒಂದು ಅಪರೂಪದ ಜಾತಿ. ಇದು ಇಂಡೋನೇಷ್ಯಾದಲ್ಲಿ ಕಾಣಸಿಗುತ್ತದೆ. ಇದು ತನ್ನ ಕಪ್ಪು ಗರಿಗಳು, ಕಪ್ಪು ಚರ್ಮ, ಕಪ್ಪು ಮಾಂಸದಿಂದಾಗಿ ಪ್ರಸಿದ್ಧವಾಗಿದೆ. ಈ ಕೋಳಿಗಳು ತುಂಬಾ ದುಬಾರಿ. ಇವುಗಳ ಬೆಲೆ 2,500 ಡಾಲರ್‌ಗಳು ಅಂದರೆ 2 ಲಕ್ಷ ರೂಪಾಯಿಗಳವರೆಗೆ ಇರುತ್ತದೆ.
