ಟೆಲಿಕಾಂಗಳ ದರ ಹೆಚ್ಚಳ ವಿರೋಧಿಸಿ ನೆಟ್ಟಿಗರ ಅಭಿಯಾನ, ಲಕ್ಷಕ್ಕೂ ಅಧಿಕ ಮಂದಿ BSNLಗೆ ಸಿಮ್ ಪೋರ್ಟ್!

ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ Jio, Airtel ಮತ್ತು Vi ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. ಇದರ ಬೆನ್ನಲ್ಲೇ ಅನೇಕರು ಬಿಎಸ್‌ಎನ್‌ಎಲ್‌ ಗೆ ತಮ್ಮ ಸಿಮ್ ಪೋರ್ಟ್ ಮಾಡಿಸಿಕೊಂಡಿದ್ದಾರೆ.

more than lakh people switched back to BSNL after Collaboration With Tata and Tariffs after gow

ಪ್ರಮುಖ ಟೆಲಿಕಾಂ ಆಪರೇಟರ್‌ಗಳಾದ Jio, Airtel ಮತ್ತು Vi (Vodafone Idea) ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಸರಾಸರಿ 15 ಪ್ರತಿಶತದಷ್ಟು ಹೆಚ್ಚಿಸಿವೆ. ಹೊಸ ದರಗಳು ಜಾರಿಗೆ ಬಂದಿರುವುದಕ್ಕೆ ದೇಶದಲ್ಲಿ ಸರ್ಕಾರಿ ಸ್ವಾಮ್ಯದ BSNL  (ಭಾರತ್ ಸಂಚಾರ್ ನಿಗಮ್ ಲಿಮಿಟೆಡ್) ಗೆ ಹಿಂತಿರುಗಲು ಅಭಿಯಾನ ಆರಂಭವಾಗಿದೆ. ಅಭಿಯಾನದ ಭಾಗವಾಗಿ ಒಂದೇ ದಿನಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಬಿಎಸ್‌ಎನ್‌ಎಲ್‌ಗೆ ತಮ್ಮ ಸಿಮ್‌ ಅನ್ನು ಪೋರ್ಟ್ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ರಿಲಾಯನ್ಸ್‌ ಜಿಯೋನಿಂದ ಬಿಎಸ್‌ಎನ್‌ಎಲ್‌ಗೆ ಬಂದಿದ್ದಾರೆ ಅನ್ನುವುದು ವಿಶೇಷ.

ಸಾಮಾಜಿಕ ಜಾಲತಾಣದಲ್ಲಿ JioBoycott ಅಭಿಯಾನ ಆರಂಭವಾಗಿದ್ದು, BSNLkigharwapsi (ಬಿಎಸ್ಎನ್‌ಎಲ್‌ ಘರ್ ವಾಪಸಿ)  ಅಂತ ಬರೆದುಕೊಂಡಿದ್ದಾರೆ. ಯಾವಾಗ ಅಭಿಯಾನ ಆರಂಭವಾಯ್ತೋ ಎಚ್ಚೆತ್ತುಕೊಂಡ ಬಿಎಸ್‌ಎನ್‌ಎಲ್‌ ಟ್ವೀಟ್ ಮಾಡಿ ತನ್ನ ಹೊಸ ಆಫರ್ ಘೋಷಿಸಿದೆ. ಇದರ ಜೊತೆಗೆ ಅಮರನಾಥ ಯಾತ್ರಿಕರಿಗೆ ವಿಶೇಷವಾಗಿ 196 ರೂಗಳಿಗೆ ಹೊಸ ಸಿಮ್ ನೀಡುವ ಘೋಷಣೆ ಮಾಡಿದೆ.

ಪೊಲೀಸರ ಮೇಲೆ ದಾಳಿ ಮಾಡಿ ತಪ್ಪಿಸಲೆತ್ನಿಸಿದ ಖತರ್ನಾಕ್‌ ಚಡ್ಡಿಗ್ಯಾಂಗ್ ಮೇಲೆ ಮಂಗಳೂರಿನಲ್ಲಿ ಶೂಟೌಟ್

 ಟಾಟಾ ಜೊತೆಗೆ ಕೈಜೋಡಿಸಿರುವ BSNL ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಮತ್ತು ಈಗ BSNL ಗೆ ತಮ್ಮ ಅಸ್ತಿತ್ವದಲ್ಲಿರುವ ನೆಟ್ವರ್ಕ್ ಅನ್ನು ಪೋರ್ಟ್ ಮಾಡಲು ಯೋಜಿಸುತ್ತಿರುವ ಹೊಸ ಬಳಕೆದಾರರಿಗೆ ಲಾಭದಾಯಕ ಯೋಜನೆಗಳನ್ನು ಆಫರ್ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಫುಲ್ ಆಕ್ಟೀವ್ ಆಗಿರುವ ಕಂಪೆನಿ, ಬಿಎಸ್‌ಎನ್‌ಗೆ ಸ್ವಿಚ್‌ ಆಗಲು PORT ಅಂತ ಟೈಪ್ ಮಾಡಿ ನಿಮ್ಮ ಮೊಬೈಲ್ ನಂಬರ್ ಹಾಕಿ 1900 ಗೆ ಸಂದೇಶ ಕಳುಹಿಸಿ ಎಂದು  ಬರೆದುಕೊಂಡಿದೆ. ಇದರ ಜೊತೆಗೆ ಮಾನ್ಸೂನ್ ಆಫರ್ ಎಂದು ಫೈಬರ್ ಬೇಸಿಕ್ ಪ್ಲಾನ್ ಆಗಿ 399 ರೂಗೆ ಆಫರ್ ಘೋಷಿಸಿದ್ದು, ಮೊದಲ ತಿಂಗಳು ಉಚಿತವಾಗಿರಲಿದೆ ಎಂದು ತಿಳಿಸಿದೆ. 

ಪ್ರಮುಖ ಟೆಲಿಕಾಂ ಆಪರೇಟರ್‌ಗಳಿಂದ ಇತ್ತೀಚಿನ ಸುಂಕದ ಹೆಚ್ಚಳದ ನಂತರ, ಭಾರತದಲ್ಲಿ ಅನೇಕ ಜನರು ಸರ್ಕಾರಿ ಸ್ವಾಮ್ಯದ BSNL  ಗೆ ಹಿಂತಿರುಗಲು ಯೋಚಿಸುತ್ತಿದ್ದಾರೆ. ಎಲ್ಲಾ ಉನ್ನತ ಮಟ್ಟದ ಕಂಪೆನಿಗಳು  ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕ ರೀಚಾರ್ಜ್ ಯೋಜನೆಗಳನ್ನು ಶೇಕಡಾ 25 ರಷ್ಟು ಹೆಚ್ಚಿಸಿದೆ. ಇದರಿಂದ ಜನಮಾನ್ಯರಿಗೆ ಹೊಡೆತ ಬಿದ್ದಿದೆ.

ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ಆಗಿರೋದು ನಿಜ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಒಪ್ಪಿಗೆ

ಇದರ ಲಾಭ ಪಡೆದ BSNL ಹೊಸ ಯೋಜನೆಗಳನ್ನು ಪರಿಚಯಿಸುವ ಮೂಲಕ  ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಮತ್ತು ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಲು ಮುಂದಾಗಿದೆ. ಸರ್ಕಾರಿ ಸ್ವಾಮ್ಯದ ಕಂಪನಿಯು ಮುಂದಿನ ತಿಂಗಳು ದೇಶಾದ್ಯಂತ ತನ್ನ 4G ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಹಿಂಟ್‌ ಕೊಟ್ಟಿದೆ.

ಹೀಗಾಗಿ BSNL ತನ್ನ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ ಮತ್ತು ಈಗ BSNL ಗೆ   ಪೋರ್ಟ್ ಮಾಡಲು ಯೋಜಿಸುತ್ತಿರುವ ಹೊಸ ಬಳಕೆದಾರರಿಗೆ ಲಾಭದಾಯಕ ಯೋಜನೆಗಳನ್ನು ನೀಡುತ್ತಿದೆ. ಈ ಯೋಜನೆಯು  ಈಶಾನ್ಯ, ಜಮ್ಮು ಮತ್ತು ಕಾಶ್ಮೀರ ಮತ್ತು ಅಸ್ಸಾಂ ಹೊರತುಪಡಿಸಿ ದೇಶದಾದ್ಯಂತ ಎಲ್ಲಾ ರಾಜ್ಯಗಳಿಗೆ ಅನ್ವಯವಾಗಲಿದೆ. ಸದ್ಯ BSNL ನೆಟ್‌ವರ್ಕ್ 4G ನೆಟ್‌ವರ್ಕ್‌ಗಳಿಗೆ ಸೀಮಿತವಾಗಿದೆ. ಆದರೆ  ಪ್ರತಿಸ್ಪರ್ಧಿಗಳು 5G ನೆಟ್‌ವರ್ಕ್‌ಗಳಿಗೆ ಸ್ಥಳಾಂತರಗೊಂಡಿದ್ದಾರೆ. ನಿಧಾನವಾಗಿ 5G ನೆಟ್‌ವರ್ಕ್‌ಗೆ ಬಿಎಸ್‌ಎನ್‌ಎಲ್‌ ಸ್ಥಳಾತರಗೊಳ್ಳು ಕೂಡ ಯೋಚಿಸುತ್ತಿದೆ.

ಇದೆಲ್ಲದರ ನಡುವೆ ಬಿಎಸ್ಎನ್ಎಲ್ 199 ರೂ ಪ್ಯಾಕ್ ನ  ಆಫರ್ ನೀಡಿದ್ದು, 30 ದಿನದ ವ್ಯಾಲಿಡಿಟಿಗೆ ಒಟ್ಟು  60 GB ಡೇಟಾ ದಿನಕ್ಕೆ 2 GB, 100 ಮೆಸೇಜ್, ಅನಿಯಮಿತ ಕರೆ ನೀಡುತ್ತಿದೆ.

ಬದಲಾಗಿ ಇತರ ಟೆಲಿಕಾಂ ಕಂಪೆನಿಗಳು ಅಧಿಕ ಹಣವನ್ನು ಪಡೆದು ಕಡಿಮೆ ಆಫರ್ ನೀಡುತ್ತಿದೆ. ಇತರ ಕಂಪೆನಿಗಳ ಆಫರ್ ಇಂತಿದೆ.
ಜಿಯೋ
₹299, ಪ್ಯಾಕ್ : 28 ದಿನಗಳು
ಒಟ್ಟು ಡೇಟಾ: 42 GB
ದಿನಕ್ಕೆ: 1.5 GB/ 
 ಅನಿಯಮಿತ ಕರೆ
ದಿನಕ್ಕೆ100 SMS 

 ಏರ್ಟೆಲ್
₹299 ಪ್ಯಾಕ್  : 28 ದಿನಗಳು
ಒಟ್ಟು ಡೇಟಾ: 28 GB
ದಿನಕ್ಕೆ: 1GB 
 ಅನಿಯಮಿತ ಕರೆ
ದಿನಕ್ಕೆ100 SMS 

ವೊಡಾಫೋನ್-ಐಡಿಯಾ
₹299 ಪ್ಯಾಕ್  : 28 ದಿನಗಳು
ಒಟ್ಟು ಡೇಟಾ: 28 GB
ದಿನಕ್ಕೆ: 1GB 
ಅನಿಯಮಿತ ಕರೆ
ದಿನಕ್ಕೆ100 SMS  

Latest Videos
Follow Us:
Download App:
  • android
  • ios