ನವದೆಹಲಿ(ಜ.22): ಒಂದು ವೇಳೆ ತಕ್ಷಣವೇ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಮತ್ತೊಂದೆಡೆ ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟ ಕೇವಲ 93 ಸ್ಥಾನಕ್ಕೆ ಸೀಮಿತವಾಗಲಿ ಎಂದು ‘ಇಂಡಿಯಾ ಟುಡೇ- ಕಾರ್ವಿ ಇನ್‌ಸೈಟ್ಸ್‌’ನ ‘ಮೂಡ್‌ ಆಫ್‌ ದಿ ನೇಷನ್‌’ ಸಮೀಕ್ಷೆ ಹೇಳಿದೆ.

ಇದು ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಟೀಕಿಸುತ್ತಾ, ಮುಂದಿನ ಚುನಾವಣೆಯಲ್ಲಿ ಮರಳಿ ಅಧಿಕಾರಕ್ಕೆ ಬರುವ ಕಾಣುತ್ತಿರುವ ಕಾಂಗ್ರೆಸ್‌ ಮತ್ತು ಅದರ ಮೈತ್ರಿಕೂಟದ ಪಕ್ಷಗಳಿಗೆ ಭಾರೀ ಶಾಕ್‌ ನೀಡಿದೆ.

ವರದಿಯಲ್ಲೇನಿದೆ?:

ತಕ್ಷಣಕ್ಕೆ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 321 ಸ್ಥಾನ ಗೆಲ್ಲಲಿದೆ. ಈ ಪೈಕಿ ಬಿಜೆಪಿಯೊಂದೇ 291 ಸ್ಥಾನದ ಮೂಲಕ ಏಕಾಂಗಿಯಾಗಿ ಬಹುಮತಕ್ಕೆ ಅಗತ್ಯವಾದ ಬಲ ಪಡೆದುಕೊಳ್ಳಲಿದೆ. ಮತ್ತೊಂದೆಡೆ ಕಾಂಗ್ರೆಸ್‌ ಕೇವಲ 51 ಸ್ಥಾನಕ್ಕೆ ಮತ್ತು ಒಟ್ಟಾರೆ ಯುಪಿಎ ಮೈತ್ರಿಕೂಟ 93 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರಲಿದೆ. ಎನ್‌ಡಿಎಗೆ ಶೇ. 43, ಯುಪಿಎಗೆ ಶೇ.27 ಮತ್ತು ಇತರ ಪಕ್ಷಗಳಿಗೆ ಶೇ. 30ರಷ್ಟುಮತಗಳು ಪ್ರಾಪ್ತವಾಗಲಿದೆ ಎಂದಿದೆ ಸಮೀಕ್ಷೆ

ಸಮಸ್ಯೆ ಯುದ್ಧ ಗೆದ್ದ ಬಿಜೆಪಿ

2020ರಲ್ಲಿ ಕೇಂದ್ರ ಸರ್ಕಾರ, ಕೊರೋನಾ ಸಮಸ್ಯೆ, ಕೊರೋನಾದಿಂದ ಆರ್ಥಿಕತೆ ಕುಸಿತ, ಕೊರೋನಾ ನಿರ್ವಹಣೆ, ಚೀನಾ ಗಡಿ ಬಿಕ್ಕಟ್ಟು ಮತ್ತಿತರೆ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಇದೆಲ್ಲದರ ಹೊರತಾಗಿಯೂ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಇಷ್ಟೊಂದು ಬಹುಮತ ಪ್ರಾಪ್ತವಾಗಿರುವುದು, ಸರ್ಕಾರ ಸಮಸ್ಯೆಯ ಯುದ್ಧ ಗೆದ್ದ ಪ್ರತೀಕ ಎಂದು ವಿಶ್ಲೇಷಿಸಲಾಗಿದೆ.

ಪಕ್ಷಗಳ ಬಲಾಬಲ

ಬಿಜೆಪಿ 291

ಕಾಂಗ್ರೆಸ್‌ 51

 ಕಾಂಗ್ರೆಸ್‌ಗೆ ಬಿಗ್‌ ಶಾಕ್‌

ಮೈತ್ರಿಕೂಟ ಸ್ಥಾನ

ಎನ್‌ಡಿಎ 321

ಯುಪಿಎ 093

ಇತರೆ 120