Asianet Suvarna News Asianet Suvarna News

ಪ್ರವಾಹದಲ್ಲಿ ಕೊಚ್ಚಿ ಹೋದ ಕಾರಿನಿಂದ ಮಹಿಳೆಯ ರಕ್ಷಣೆ,ಬೆಚ್ಚಿ ಬೀಳಿಸುವ ವಿಡಿಯೋ!

ಹರ್ಯಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಕಾರುಗಳು ಕೊಚ್ಚಿ ಹೋಗಿದೆ. ನದಿಗಳು ತುಂಬಿ ಹರಿಯುತ್ತಿದೆ. ಹೀಗೆ ಕೊಚ್ಚಿ ಹೋದ ಕಾರಿನಿಂದ ಸಾಹಸಮಯವಾಗಿ ಮಹಿಳೆಯ ರಕ್ಷಿಸಲಾಗಿದೆ. ಮೈಜುಮ್ಮೆನಿಸುವ ವಿಡಿಯೋ ಭಾರಿ ಸಂಚಲನ ಸಷ್ಟಿಸಿದೆ.
 

Monsoon Update Woman rescued from submerged car after flash flood in Haryana Video goes viral ckm
Author
First Published Jun 25, 2023, 6:28 PM IST | Last Updated Jun 25, 2023, 6:34 PM IST

ಹರ್ಯಾಣ(ಜೂ.25)  ಭಾರತದ ಹಲವು ರಾಜ್ಯಗಳಲ್ಲಿ ಮುಂಗಾರು ಚುರುಕಾಗಿದೆ. ಕೆಲೆವಡೆ ಭಾರಿ ಮಳೆಯಿಂದ ಪ್ರವಾಹ ಸೃಷ್ಟಿಯಾಗಿದೆ. ಈಶಾನ್ಯ ಭಾರತದಲ್ಲೂ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತ ಹರ್ಯಾಣದಲ್ಲೂ ಆತಂಕದ ವಾತಾರವಣ ನಿರ್ಮಾಣವಾಗಿದೆ. ಹರ್ಯಾಣದ ನದಿಗಳು ತುಂಬಿ ಹರಿಯುತ್ತಿದೆ. ನದಿ ಪಾತ್ರದಲ್ಲಿನ ಕಾರುಗಳು ಕೊಚ್ಚಿ ಹೋಗಿದೆ. ಘಗ್ಗಾರ್ ನದಿ ಬಳಿ ಕಾರು ಪಾರ್ಕಿಂಗ್ ಮಾಡುತ್ತಿದ್ದ ಮಹಿಳೆ ಕಾರಿನ ಜೊತೆ ಕೊಚ್ಚಿ ಹೋಗಿದ್ದಾರೆ. ಆದರೆ ಸ್ಥಳೀಯರು ಸಾಹಸದಿಂದ ಮಹಿಳೆಯನ್ನು ಕಾರಿನಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ರಕ್ಷಣಾ ಕಾರ್ಯದ ಸಾಹಸಮಯ ವಿಡಿಯೋ ವೈರಲ್ ಆಗಿದೆ.

ಮಹಿಳೆ ತನ್ನ ತಾಯಿಯೊಂದಿಗೆ ಪಂಚುಕಲದ ಖಡಕ್ ಮಂಗೋಲಿಯ ಬ್ಯಾಂಕ್‌ಗೆ ಆಗಮಿಸಿದ್ದಾರೆ. ಮಹಿಳೆಯ ತಾಯಿ ಕಾರಿನಿಂದ ಇಳಿದಿದ್ದಾರೆ. ಇತ್ತ ಮಹಿಳೆ ಕಾರು ಪಾರ್ಕ್ ಮಾಡಲು ಕೆಲ ಹೊತ್ತು ತೆಗೆದುಕೊಂಡಿದ್ದಾರೆ. ಆದರೆ ನದಿ ಪಾತ್ರದಲ್ಲಿ ಕಾರು ಪಾರ್ಕಿಂಗ್ ಮಾಡುತ್ತಿದ್ದ ವೇಳೆ ಏಕಾಏಕಿ ಪ್ರವಾಹ ಬಂದಿದೆ. ನೀರಿನ ಹರಿವಿನಲ್ಲಿ ಕಾರು ನದಿಯಲ್ಲಿ ಕೊಚ್ಚಿ ಹೋಗಿದೆ. 

ಮಳೆಗೆ ಅಂಡರ್‌‌ಪಾಸ್‌ನಲ್ಲಿ ಸಿಲುಕಿದ ಕಾಲೇಜು ಬಸ್, ತುರ್ತು ನಿರ್ಗಮನ ಮೂಲಕ ವಿದ್ಯಾರ್ಥಿಗಳ ರಕ್ಷಣೆ

ಸೇತುವೆ ಬಳಿ ಕಾರು ಸಿಲುಕಿಕೊಂಡಿದೆ. ಅಷ್ಟರಲ್ಲೇ ಕಾರಿನೊಳಗಿದ್ದ ಮಹಿಳೆ ಅಸ್ವಸ್ಥಗೊಂಡಿದ್ದಾರೆ. ಸಾಹಾಯಕ್ಕಾಗಿ ಅಂಗಲಾಚಿದ್ದಾರೆ. ಸ್ಥಳೀಯರು ಹಗ್ಗದ ನೆರವಿನಿಂದ ಕಾರಿನ ಬಳಿ ತೆರಳಿದ್ದಾರೆ. ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರುತ್ತಲೇ ಹೋಗಿದೆ. ಆದರೂ ಪ್ರಾಣದ ಹಂಗು ತೊರೆದು ಸ್ಥಳೀಯರು ಕಾರಿನ ಬಳಿ ತೆರಳಿದ್ದಾರೆ. 

 

 

ಹರಸಾಹಸಪಟ್ಟು ಕಾರಿನೊಳಗಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ಮಹಿಳೆಯನ್ನು ಪಂಚುಕಲದ ಸೆಕ್ಟರ್ 6 ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಇತ್ತ ನದಿಯಲ್ಲಿ ಕೋಚ್ಚಿ ಹೋಗಿರುವ ಕಾರನ್ನು ಹೊರತೆಗೆಯಲು ಸ್ಥಳೀಯರು ಪ್ರಯತ್ನಿಸಿದ್ದಾರೆ. ಇದೀಗ ಕ್ರೇನ್ ನೆರವಿನ ಮೂಲಕ ಕಾರು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿದೆ. ಇತ್ತ ಇದೇ ನದಿ ಪಾತ್ರದ ಜನರು ಮನೆಗಳಿಗೆ ನೀರು ನುಗ್ಗಿದೆ. ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ಹಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ.

 

ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಮಳೆಯ ಆರ್ಭಟ: ಸಾರ್ವಜನಿಕರ ಪರದಾಟ

ಪ್ರಮುಖವಾಗಿ ಈಶಾನ್ಯ ಭಾರತದಲ್ಲಿ ಭಾರಿ ಮಳೆಯಿಂದ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. 1 ವಾರ​ದಿಂದ ಮಳೆ ಪೀಡಿ​ತ​ವಾ​ಗಿ​ರುವ ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಮುಂದು​ವ​ರಿ​ದಿದೆ. 16 ಜಿಲ್ಲೆ​ಗ​ಳ 4.88 ಲಕ್ಷ ಜನರು ಇದ​ರಿಂದ ಬಾಧಿ​ತ​ರಾ​ಗಿ​ದ್ದಾ​ರೆ. ನದಿಗಳ ಪ್ರಮಾಣವು ಅಪಾಯಮಟ್ಟಮೀರಿ ಹರಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆಯುವುದರಿಂದ ಹವಾಮಾನ ಇಲಾಖೆಯು ಯಲ್ಲೋ ಅಲರ್ಟ್ ಜಾರಿ ಮಾಡಿದ್ದು, ಜನರಿಗೆ ಎಚ್ಚರದಿಂದಿರಲು ಸೂಚಿಸಿದೆ. ಕೆಲವು ಜಿಲ್ಲೆಗಳಲ್ಲಿ ನದಿಗಳಿಗೆ ಕಟ್ಟಿದ ಬಾಂದಾರಗಳು ಹಾನಿಗೊಂಡಿದ್ದು, ಇದರ ಪರಿಣಾಮ ಕಳೆದ 24 ಗಂಟೆ ಅವಧಿಯಲ್ಲಿ ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದೆ.

ರಾಜ್ಯದಲ್ಲಿ ಪ್ರವಾಹ ಹಾಗೂ ಭಾರಿ ಮಳೆಯಿಂದಾಗಿ 16 ಜಿಲ್ಲೆಯಲ್ಲಿ ಸುಮಾರು 4.88ಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಅವರನ್ನು 140 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗುತ್ತಿದೆ. ಇನ್ನು 75 ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಎನ್‌ಡಿಆರ್‌ಎಫ್‌ ಸೇರಿದಂತೆ ಹಲವು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದೆ. ಪ್ರವಾಹ ಹಾಗೂ ಭುಕುಸಿತಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
 

Latest Videos
Follow Us:
Download App:
  • android
  • ios