Asianet Suvarna News Asianet Suvarna News

ಮಲಯಾಳಂ ಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳ: 'ನಮ್ಮ ಭಾರತೀಯ ಪುರುಷರಲ್ಲಿ ಏನೋ ದೋಷವಿದೆ'ಎಂದ ಶಶಿ ತರೂರ್

ಮಲಯಾಳಂ ಚಿತ್ರೋದ್ಯಮದ ಲೈಂಗಿಕ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರು ‘ಭಾರತೀಯ ಸಮಾಜದಲ್ಲಿನ ಒಟ್ಟಾರೆ ಮನೋಭಾವವನ್ನು ಬದಲಿಸಬೇಕು’ ಎಂದು ಕರೆ ನೀಡಿದ್ದಾರೆ ಹಾಗೂ ‘ಭಾರತೀಯ ಪುರುಷರಲ್ಲಿ ಏನೋ ದೋಷವಿದೆ’ ಎಂದು ಟೀಕಿಸಿದ್ದಾರೆ.

mollywood meetoo kerala film industry sexual assault cases congress mp shashi taroor statement rav
Author
First Published Aug 31, 2024, 8:48 AM IST | Last Updated Aug 31, 2024, 8:53 AM IST

ತಿರುವನಂತಪುರ )ಆ.31): ಮಲಯಾಳಂ ಚಿತ್ರೋದ್ಯಮದ ಲೈಂಗಿಕ ಹಗರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಕಾಂಗ್ರೆಸ್‌ ಸಂಸದ ಶಶಿ ತರೂರ್ ಅವರು ‘ಭಾರತೀಯ ಸಮಾಜದಲ್ಲಿನ ಒಟ್ಟಾರೆ ಮನೋಭಾವವನ್ನು ಬದಲಿಸಬೇಕು’ ಎಂದು ಕರೆ ನೀಡಿದ್ದಾರೆ ಹಾಗೂ ‘ಭಾರತೀಯ ಪುರುಷರಲ್ಲಿ ಏನೋ ದೋಷವಿದೆ’ ಎಂದು ಟೀಕಿಸಿದ್ದಾರೆ.

ಶುಕ್ರವಾರ ಎನ್‌ಡಿಟೀವಿ ಜತೆ ಮಾತನಾಡಿದ ಅವರು, ‘ಈಗ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಬೇಕು. ಪರಿಹರಿಸಲು ಸಾಧ್ಯವಾಗದಿದ್ದರೆ ಭಾರತೀಯ ಪುರುಷರಲ್ಲಿ ಏನೋ ದೋಷವಿದೆ ಎಂದರ್ಥ. ಲಿಂಗ ಸಮಾನತೆಯ ನಿಜವಾದ ಯುದ್ಧವು ಭಾರತೀಯ ಸಮಾಜದ ಅಧಃಪತನವನ್ನು ಸರಿಪಡಿಸುವಲ್ಲಿ ಅಡಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಟಿಯರಗೆ ಲೈಂಗಿಕ ಕಿರುಕುಳ.. ಇಂದು, ನಿನ್ನೆಯದಲ್ಲ: ಕಾಸ್ಟಿಂಗ್ ಕೌಚ್‌ ಬಗ್ಗೆ ನಟಿ ಊರ್ವಶಿ ಸ್ಫೋಟಕ ಹೇಳಿಕೆ

Latest Videos
Follow Us:
Download App:
  • android
  • ios