ನವದೆಹಲಿ(ಏ.08): ಕೊರೋನಾ ವೈರಸ್ ಅಟ್ಟಹಾಸ ಎಲ್ಲೆಡೆ ಕಂಡು ಬರುತ್ತಿದೆ. ಹೀಗಿರುವಾಗ ಪ್ರಧಾನಿ ನರೇದ್ರ ಮೋದಿ ಭಾನುವಾರ ರಾತ್ರಿ ಒಂಭತ್ತು ಗಂಟೆಗೆ ದೀಪ ಬೆಳಗಿಸುವಂತೆ ಕರೆ ನೀಡಿದ್ದರು. ಹಹೀಗಿರುವಾಗ ದೇಶದ ಮೂಲೆ ಮೂಲೆಗಳಲ್ಲೂ ಜನರು ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸಿದ್ದರು.  ಆದರೆ ಈ ನಡುವೆ ಹಲವಾರು ಕಡೆ ಪಟಾಕಿಯನ್ನೂ ಜನರು ಸಿಡಿಸಿದ್ದರು. ಆದರೆ ಇವೆಲ್ಲದರ ನಡುವೆ ವ್ಯಕ್ತಿಯೊಬ್ಬ ಪಟಾಕಿ, ದೀಪ ಬಿಟ್ಟು ಸ್ಟಂಟ್ ಮಾಡಲು ಹೋಗಿ ಕೂದಲೆಳೆ ಅಂತರದ್ಲಿ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹೌದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬ ತನ್ನ ಬಾಯಿಯಿಂದ ಎಂಕಿ ಉಗುಳುವ ಸಾಹಸಕ್ಕೆ ಮುಂದಾಇರುವ ದೃಶ್ಯಗಳಿವೆ. ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆ ವ್ಯಕ್ತಿ ಮೇಣದ ಬತ್ತಿಯ ಸಹಾಯದಿಂದ ಬಾಯಿಯಿಂದ ಬೆಂಕಿಯುಗುಳುವ ಸಾಹಸ ಮಾಡಲು ಮುಂದಾಗುತ್ತಾನೆ. ಆದರೆ ಈ ವೇಳೆ ಅಚಾನಕ್ಕಾಗಿ ಬೆಂಕಿ ಆತನ ಬಾಯಿಗೇ ತಾಗುತ್ತದೆ. ಇದನ್ನು ಗಮನಿಸಿದ ಸ್ಥಳೀಯರು ಓಡೋಡಿ ಬಂದು ಆತನನ್ನು ಪಾರು ಮಾಡುತ್ತಾರೆ.

ಇನ್ನು ದೀಪ ಹಚ್ಚುವಂತೆ ಪ್ರಧಾನಿ ಕರೆ ನೀಡಿದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಒಗ್ಗಟ್ಟು ಪ್ರದರ್ಶನವಾಯ್ತು. ಹೀಗಿರುವಾಗಲೇ ಮೋದಿ ಕರೆಗೆ ಪಟಾಕಿ ಸಿಡಿಸಿ, ಪಂಜಿನ ಮೆರವಣಿಗೆ ನಡೆಸಿದ ದೃಶ್ಯಗಳೂ ವೈರಲ್ ಅಗಿದ್ದವು. 

"