ಸಂಜಯ್ ದತ್ ಮುನ್ನಾಭಾಯ್ ಎಂಬಿಬಿಎಸ್ ಸಿನಿಮಾ ರೀತಿಯಲ್ಲೇ ಇಲ್ಲೊಬ್ಬ ಮಾರ್ಡರ್ನ್ ಮುನ್ನಾ ಭಾಯ್ ಇದ್ದಾನೆ. ಈತ ಬರೋಬ್ಬರಿ 50 ಸಿ ಸೆಕ್ಷನ್ ಸರ್ಜರಿ ಮಾಡಿದ್ದಾನೆ. 51ನೇ ಸರ್ಜರಿ ಮಾಡುತ್ತಿರುವಾಗಲೇ ಪೊಲೀಸರು ಈತನ ಅರೆಸ್ಟ್ ಮಾಡಿದ್ದಾರೆ. 

ಸಿಲ್ಚಾರ್ (ಆ.05) ಬಾಲಿವುಡ್ ಸಿನಿಮಾ ಮುನ್ನಾ ಭಾಯ್ ಎಂಬಿಬಿಎಸ್ ಸಿನಿಮಾ ಭಾರಿ ಜನಮನ್ನಣೆ ಗಳಿಸಿತ್ತು. ಆದರೆ ಇದೀಗ ಆಧುನಿಕ ಮುನ್ನ ಭಾಯ್ ಎಂಬಿಬಿಎಸ್ ಒಬ್ಬ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನ ಡಾಕ್ಟರ್ ಪಯಣ ರಣ ರೋಚಕವಾಗಿದೆ. ಕಾರಣ ಈತ ನಕಲಿ ವೈದ್ಯ ಎಂಬಿಬಿಎಸ್ ಏನೂ ಮಾಡೇ ಇಲ್ಲ. ಆದರೆ 50 ಸಿ ಸೆಕ್ಷನ್ ಸರ್ಜರಿ ಮಾಡಿದ್ದಾನೆ. 51ನೇ ಆಪರೇಶನ್ ವೇಳೆ ಪೊಲೀಸರು ದಾಳಿ ಮಾಡಿ ನಕಲಿ ವೈದ್ಯನ ಬಂಧಿಸಿದ ಘಟನೆ ಅಸ್ಸಾಂ ಸಿಲ್ಚಾರ್‌ನಲ್ಲಿ ನಡೆದಿದೆ. ಪುಲೋಕ್ ಮಲ್ಕಾರ್ ಎಂಬ ನಕಲಿ ವೈದ್ಯನ ಒಂದೊಂದು ಕತೆಗಳು ಹೊರಬರುತ್ತಿದೆ.

ಎರಡು ಖಾಸಗಿ ಆಸ್ಪತ್ರೆಯಲ್ಲಿ ಈತ ಗೈನಾಕಾಲಜಿಸ್ಟ್

ಅಸ್ಸಾಂ ಸಿಲ್ಚಾರ್‌ನ ಎರಡು ಖಾಸಗಿ ಆಸ್ಪತ್ರೆಯಲ್ಲಿ ಈ ನಕಲಿ ವೈದ್ಯ ಪುಲೋಕ್ ಮಲ್ಕಾರ್ ಗೈನಾಕಾಲಜಿಸ್ಟ್. ಈ ಪೈಕಿ ಒಂದು ಆಸ್ಪತ್ರೆಯಲ್ಲಿ ಸಿಸೆರಿಯನ್ ಸೆಕ್ಷನ್ ಆಪರೇಶನ್ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ವೈದ್ಯನ ಬಂಧಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ನಕಲಿ ವೈದ್ಯ ದಂಧೆ ಮಾಡಿಕೊಂಡಿರುವುದು ಪತ್ತೆಯಾಗಿದೆ.

ಸುಳಿವು ಸಿಕ್ಕ ಪೊಲೀಸರಿಂದ ರಹಸ್ಯ ತನಿಖೆ

ನಕಲಿ ವೈದ್ಯನ ಕುರಿತು ಪೊಲೀಸರಿಗೆ ಸಣ್ಣ ಸುಳಿವು ಸಿಕ್ಕಿತ್ತು. ಹೀಗಾಗಿ ಪೊಲೀಸರು ತನಿಖೆ ಆರಂಭಿಸಿದ್ದರು. ನಕಲಿ ವೈದ್ಯನಿಗೆ ಗೊತ್ತಿಲ್ಲದೆ ತನಿಖೆ ಆರಂಭಗೊಂಡಿತ್ತು. ಈತನ ಎಂಬಿಬಿಎಸ್ ಪ್ರಮಾಣ ಪತ್ರ, ಕಾಲೇಜು ಸೇರಿದಂತೆ ಹಲವು ಕಡೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಈತನ ಎಂಬಿಬಿಸಿಎಸ್ ಸರ್ಟಫಿಕೇಟ್ ಸೇರಿದಂತೆ ಎಲ್ಲವೂ ನಕಲಿ ಅನ್ನೋದು ಪತ್ತೆಯಾಗಿದೆ. ಹೀಗಾಗಿ ಪೊಲೀಸರು ನೆರವಾಗಿ ಖಾಸಗಿ ಆಸ್ಪತ್ರೆ ಮೇಲೆ ದಾಳಿ ನಡೆಸಿ ನಕಲಿ ವೈದ್ಯ ಪುಲೋಕ್ ಬಂಧಿಸಿದ್ದಾರೆ.

50 ಆಪರೇಶನ್ ಮಾಡಿರುವ ವೈದ್ಯ

ಗೈನಾಕಾಲಜಿಸ್ಟ್ ಆಗಿರುವ ಈ ನಕಲಿ ವೈದ್ಯ ಇದುವರೆಗೆ 50 ಸಿ ಸೆಕ್ಷನ್ ಆಪರೇಶನ್ ಮಾಡಿದ್ದಾನೆ. ಸರ್ಜರಿ ಬಳಿಕ ಇವರೆಲ್ಲಾ ಏನಾಗಿದ್ದಾರೆ? ಆರೋಗ್ಯವಾಗಿದ್ದಾರಾ ಅನ್ನೋ ಕರುತು ತನಿಖೆ ನಡೆಯುತ್ತಿದೆ. ಈ ಪೈಕಿ ಕೆಲವರು ಬೇರೆ ಆಸ್ಪತ್ರೆ ದಾಖಲಾಗಿರುವ ಕುರಿತು ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಎರಡೂ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಿಗೂ ನೋಟಿಸ್ ನೀಡಲಾಗಿದೆ.

ಅಸ್ಸಾಂನಲ್ಲಿ ನಕಲಿ ಡಾಕ್ಟರ್ ವಿರುದ್ಧ ಕಾರ್ಯಾಚರಣೆ

2025ರ ಜನವರಿ ತಿಂಗಳಿನಿಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ನಕಲಿ ವೈದ್ಯರ ಕುರಿತು ಹಲವು ದೂರುಗಳು,ಪ್ರತಿಭಟನೆ ಸೇರಿದಂತೆ ಕೆಲ ಘಟನೆ ಅಸ್ಸಾಂನಲ್ಲಿ ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ನಕಲಿ ವ್ಯದರಿಗೆ ತಕ್ಕ ಶಾಸ್ತಿ ಮಾಡಲು ಮುಂದಾಗಿದ್ದರೆ. ಈ ಕಾರ್ಯಾಚರಣ ಭಾಗವಾಗಿ ಇದೀಗ ಅಸ್ಸಾಂ ಸಿಲ್ಚಾರ್‌ನಲ್ಲಿ ಪ್ರಮುಖ ವೈದ್ಯನ ಬಂಧಿಸಿದ್ದಾರೆ.