Asianet Suvarna News Asianet Suvarna News

Tirupati airport : ಅಂತಾರಾಷ್ಟ್ರೀಯ ಏರ್ ಪೋರ್ಟ್ ಗೆ ನೀರಿನ ಸಂಪರ್ಕ ಕಟ್, ಆಂಧ್ರದಲ್ಲಿ ಶಾಸಕನ ಪುತ್ರನ ದರ್ಬಾರ್!

ವೈಯಕ್ತಿಕ ವಿಚಾರವಾಗಿ ಕಿತ್ತಾಟ 
ತಿರುಪತಿ ಏರ್ ಪೋರ್ಟ್ ನ ನೀರಿನ ಸೇವೆ ಕಟ್ ಮಾಡಿದ ಶಾಸಕನ ಪುತ್ರ
ಘಟನೆ ವಿಚಾರವಾಗಿ ತನಿಖೆ ಎಂದ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ

MLAs son cuts water supply connection at international airport creates a stir san
Author
Bengaluru, First Published Jan 13, 2022, 9:00 PM IST

ನವದೆಹಲಿ (ಜ. 13): ವೈಯಕ್ತಿಕ ದ್ವೇಷದಿಂದಾಗಿ  ತಿರುಪತಿ ವಿಮಾನ ನಿಲ್ದಾಣ ಹಾಗೂ ಸಿಬ್ಬಂದಿ ವಸತಿಗೃಹದ (Tirupati airport and staff residential quarters)ಅಪಾರ್ಟ್ ಮೆಂಟ್ ನ ನೀರಿನ ಸಂಪರ್ಕ ಕಟ್ ಮಾಡಿದ ಆಂಧ್ರ ಪ್ರದೇಶ (Andhra Pradesh) ಶಾಸಕ ಬಿ.ಕರುಣಾಕರ ರೆಡ್ಡಿ ಪುತ್ರ (B Karunakar Reddy) ಹಾಗೂ ತಿರುಪತಿಯ  ಉಪ ಮೇಯರ್ ಅಭಿನಯ ರೆಡ್ಡಿ (Tirupati deputy mayor Abhinaya Reddy) ವಿರುದ್ಧ ತನಿಖೆ ನಡೆಸುವುದಾಗಿ ಕೇಂದ್ರ ನಾಗರೀಕ ವಿಮಾನಯಾನ ಇಲಾಖೆಯ (Union Minister for Civil Aviation) ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ( Jyotiraditya M Scindia )ಹೇಳಿದ್ದಾರೆ. ಏರ್ ಪೋರ್ಟ್ ಮ್ಯಾನೇಜರ್ ವಿರುದ್ಧ ವೈಯಕ್ತಿಕ ಕಿತ್ತಾಟದ ಕಾರಣದಿಂದಾಗಿ ಅಭಿನಯ ರೆಡ್ಡಿ ವಸತಿ ಸಂಕೀರ್ಣದ ನೀರಿನ ಸಂಪರ್ಕ ಕಟ್ ಮಾಡಿದ್ದು, ಸಾಕಷ್ಟು ಸುದ್ದಿಯಾಗಿತ್ತು. ಈ ಕುರಿತಾಗಿ ಕ್ರಮ ಕೈಗೊಳ್ಳುವಂತೆ ಒತ್ತಾಯ ಬಂದ ಹಿನ್ನೆಲೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ತನಿಖೆಗೆ ಆದೇಶ ನೀಡಿದ್ದಾರೆ.

ಈ ಸಮಸ್ಯೆಯನ್ನು ಪರಿಶೀಲನೆ ಮಾಡಲಾಗುವುದು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಅನಾನೂಕೂಲತೆ ಎದುರಿಸುವುದನ್ನು ಇಲಾಖೆ ಸಹಿಸುವುದಿಲ್ಲ' ಎಂದು ಜ್ಯೋತಿರಾದಿತ್ಯ ಸಿಂಧಿಯಾ ಪ್ರಕರಣದ ಕುರಿತಾಗಿ ಮಾಧ್ಯಮ ವರದಿಗಳನ್ನು ಪ್ರಕಟಿಸಿ ಟ್ವೀಟ್ ಮಾಡಿದ್ದಾರೆ. "ನಮ್ಮ ಕಡೆಯಿಂದ ಈ ವಿಚಾರದಲ್ಲಿ ಸೂಕ್ತವಾಗಿ ತನಿಖೆ ಮಾಡಲಾಗುವುದು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದೇವೆ. ಯಾವುದೇ ರೀತಿಯ ಅನಾನೂಕೂಲತೆ ಎದುರಿಸುವುದನ್ನು ನಾವು ಸಹಿಸುವುದಿಲ್ಲ' ಎಂದು ಸಿಂಧಿಯಾ ಬರೆದುಕೊಂಡಿದ್ದಾರೆ.

ಇದಕ್ಕೂ ಮುನ್ನ, ರಾಜ್ಯಸಭಾ ಸಂಸದ ಜಿವಿಎಲ್ ನರಸಿಂಹ ರಾವ್ (Rajya Sabha MP GVL Narasimha Rao ) ಅವರು ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಪತ್ರ ಬರೆದು "ಖಂಡನೀಯ" ಘಟನೆಯ ಕುರಿತು "ಉನ್ನತ ಮಟ್ಟದ" ತನಿಖೆ ನಡೆಸುವಂತೆ ಮನವಿ ಮಾಡಿದ್ದರು.  ಪ್ರಕರಣದಲ್ಲಿ ರೇಣಿಗುಂಟಾ ವಿಮಾನ ನಿಲ್ದಾಣದ ಅಧಿಕಾರಿಗಳು ಅಧಿಕಾರದ ಮದದಲ್ಲಿ ವರ್ತಿಸಿದ್ದಾರೆ ಮತ್ತು ಅಧಿಕೃತ ಪ್ರೋಟೋಕಾಲ್ ಅನ್ನು ಅನುಸರಿಸಿಲ್ಲ ಎಂದು ವೈಎಸ್‌ಆರ್‌ಸಿಪಿ (YSRCP) ಮುಖಂಡರು ಆರೋಪಿಸಿದ್ದಾರೆ.
 


ಏನಿದು ಪ್ರಕರಣ: ರೇಣಿಗುಂಟ ವಿಮಾನನಿಲ್ದಾಣದ ಮ್ಯಾನೇಜರ್ ಸುನಿಲ್ (Renigunta airport manager Sunil) ಹಾಗೂ ತಿರುಪತಿಯ ಉಪಮೇಯರ್ ಅಭಿನಯ್ ರೆಡ್ಡಿ ನಡುವೆ ನಡೆದ ಕಿತ್ತಾಟದಿಂದ ಈ ಸಮಸ್ಯೆ ಎದುರಾಗಿದೆ. ಇತ್ತೀಚೆಗೆ ಸಚಿವ ಬಿ. ಸತ್ಯನಾರಾಯಣ ಅವರನ್ನು ಸ್ವಾಗತಿಸಲು ಅಭಿನಯ ರೆಡ್ಡಿ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಈ ವೇಳೆ ವಿಮಾನನಿಲ್ದಾಣಕ್ಕೆ ಪ್ರವೇಶ ನೀಡಲು ಅಧಿಕಾರಿಗಳು ನಿರಾಕರಿಸಿದ್ದರು. ಸಾಕಷ್ಟು ವಾಗ್ವಾದವೂ ಈ ವೇಳೆ ನಡೆದಿತ್ತು. ಇದರಿಂದ ಸಿಟ್ಟಾಗಿದ್ದ ಅಭಿನಯ ರೆಡ್ಡಿ ಸೇಡು ತೀರಿಸಿಕೊಳ್ಳಲು ಮುಂದಾಗಿ, ವಿಮಾನ ನಿಲ್ದಾಣ ಹಾಗೂ ವಸತಿಗೃಹಕ್ಕೆ ನೀಡಲಾಗುತ್ತಿದ್ದ ನೀರಿನ ಸಂಪರ್ಕವನ್ನು ಕಟ್ ಮಾಡಿದ್ದರು.  ಆದರೆ, ಪೈಪ್‌ಲೈನ್‌ನಲ್ಲಿ ಅಡಚಣೆ ಉಂಟಾಗಿದ್ದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಪುರಸಭೆ ಅಧಿಕಾರಿಗಳು ಹೇಳಿದ್ದರು ಎಂದು ಏರ್ ಪೋರ್ಟ್ ಮ್ಯಾನೇಜರ್ ತಿಳಿಸಿದ್ದರು. ಇದರ ನಡುವೆ ಏರ್ ಪೋರ್ಟ್ ವಸತಿಗೃಹದ ನಿವಾಸಿಗಳು ಒಳಚರಂಡಿ ವ್ಯವಸ್ಥೆಯ ಸಮಸ್ಯೆಯನ್ನೂ ಹೇಳಿದ್ದರು. ಆದರೆ, ಒಳಚರಂಡಿ ನೀರು ತೆಲುಗು ಗಂಗಾ ನೀರನ್ನು (ಸರಬರಾಜು ಮಾಡುವ ಕುಡಿಯುವ ನೀರು) ಕಲುಷಿತಗೊಳಿಸುತ್ತದೆ ಎಂದು ಉತ್ತರ ನೀಡಿದ್ದರು.

ಈ ಕುರಿತಾಗಿ ವಿರೋಧ ಪಕ್ಷದ ನಾಯಕ ಮತ್ತು ತೆಲುಗು ದೇಶಂ ಪಕ್ಷದ (ಟಿಡಿಪಿ) ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ , ಅಭಿನಯ ರೆಡ್ಡಿ ಅವರ ವರ್ತನೆಯನ್ನು ಟೀಕಿಸಿದ್ದಾರೆ, “ವಿಮಾನ ನಿಲ್ದಾಣ ಮತ್ತು ಸಿಬ್ಬಂದಿ ವಸತಿಗೃಹಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಿರುವುದು ವೈಎಸ್‌ಆರ್‌ಸಿಪಿಯ ಅರಾಜಕ ಆಡಳಿತಕ್ಕೆ ಸಾಕ್ಷಿಯಾಗಿದೆ. ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು.
 

 

Follow Us:
Download App:
  • android
  • ios