ತುರ್ತು ಸೇವೆಗೆ ಹೋಗಬೇಕಿದ್ದ ಆಂಬುಲೆನ್ಸ್ ಹತ್ತಿ ಪೋಸ್ ಕೊಟ್ಟ ಶಾಸಕಿ..! ವಿಡಿಯೋ ವೈರಲ್

ದಕ್ಷಿಣ ಕನ್ನಡ ನಟಿ ಹಾಗೂ ಆಂಧ್ರಪ್ರದೇಶದ ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಆರ್. ರೋಜಾ ಆಂಬುಲೆನ್ಸ್ ಡ್ರೈವರ್ ಸೀಟ್‌ನಲ್ಲಿ ಕೂತು ಜಾಲಿಯಾಗಿ ರೌಂಡ್ ಹೊಡೆದು ಫೋಟೋ ಹಾಗೂ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.

MLA roja drives new ambulance poses for photos delays deployment

ಹೈದರಾಬಾದ್(ಜು.08): ದಕ್ಷಿಣ ಕನ್ನಡ ನಟಿ ಹಾಗೂ ಆಂಧ್ರಪ್ರದೇಶದ ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ಕೆ. ಆರ್. ರೋಜಾ ಆಂಬುಲೆನ್ಸ್ ಡ್ರೈವರ್ ಸೀಟ್‌ನಲ್ಲಿ ಕೂತು ಜಾಲಿಯಾಗಿ ರೌಂಡ್ ಹೊಡೆದು ಫೋಟೋ ಹಾಗೂ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.

ಚಿತ್ತೂರಿನಲ್ಲಿ ಹೊಸ ಆಂಬುಲೆನ್ಸ್‌ ರಸ್ತೆಗೆ ಬಿಡುವ ಸಂದರ್ಭ ಚಾಲಕನ ಸೀಟು ಹತ್ತಿ ಕುಳಿತ ಶಾಸಕಿ, ತನ್ನ ಬೆಂಬಲಿಗರಿಗೆ ಫೋಟೋ ಹಾಗೂ ವಿಡಿಯೋ ಮಾಡುವಂತೆ ಒತ್ತಾಯಿಸಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಮೇಲೆ ಸಂಪರ್ಕಕ್ಕೆ ಸಿಗುತ್ತಿಲ್ಲ ಈ ನಟಿ!

ಕಳೆದ ವಾರ ಆಂಧ್ರಪ್ರದೇಶ ಸರ್ಕಾರ 412 ಹೊಸ ಆಂಬುಲೆನ್ಸ್ ಘೋಷಿಸಿತ್ತು. ಇದರಲ್ಲಿ ನಗರಿ ವಿಧಾನಸಭಾ ಕ್ಷೇತ್ರಕ್ಕೂ ಒಂದು ಆಂಬುಲೆನ್ಸ್ ಮಂಗಳವಾರ ತಲುಪಿತ್ತು. ಆಂಧ್ರಪ್ರದೇಶದಲ್ಲಿ ಹೆಚ್ಚು ಕೊರೋನಾ ಪ್ರಕರಣಗಳಿದ್ದು, ಆಂಬುಲೆನ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಜುಲೈ 7ರಂದು ಆಂಧ್ರದಲ್ಲಿ 1178 ಕೊರೋನಾ ಪ್ರಕರಣ ವರದಿಯಾಗಿತ್ತು. ಒಟ್ಟು 21197 ಪ್ರಕರಣಗಳಿದ್ದು, ಒಟ್ಟು 252 ಸಾವು ಸಂಭವಿಸಿದೆ.

ಅಗತ್ಯ ಇರುವ ಸ್ಥಳಕ್ಕೆ ತುರ್ತಾಗಿ ಆಂಬುಲೆನ್ಸ್ ಕಳುಹಿಸುವ ಬದಲು ಕೆಲವು ಗಂಟೆ ಆಂಬುಲೆನ್ಸ್‌ನಲ್ಲಿ ಕುಳಿತು ರೋಜಾ ಪೋಸ್ ಕೊಟ್ಟಿದ್ದಾರೆ. ಆಂಬುಲೆನ್ಸ್ ಸ್ವಾಗತಿಸಿದ ನಂತರ ಡ್ರೈವ್ ಮಾಡುತ್ತಾ ಫೋಟೋ ತೆಗೆಯುವಂತೆ ಒತ್ತಾಯಿಸುತ್ತಿದ್ದರು.

MLA roja drives new ambulance poses for photos delays deployment

ಜೊತೆಗೇ ಆಂಬುಲೆನ್ಸ್‌ನ ಎಮರ್ಜೆನ್ಸಿ ರೆಡಿಯೋ ಮೂಲಕ ಫೋನ್‌ ಕಾಲ್‌ ಎಟೆಂಡ್ ಮಾಡಿದ್ದರು. ತೆಲುಗು ನಟಿ ರೋಜಾ ಹಲವು ಬಾರಿ ಸಾರ್ವಜನಿಕ ವಿಚಾರಗಳಿಗಾಗಿ ಪಕ್ಷದ ಹೊರಗೆ ಮತ್ತು ಒಳಗೂ ಟೀಕೆಗೊಳಗಾಗಿದ್ದಾರೆ. 

Latest Videos
Follow Us:
Download App:
  • android
  • ios