ಮುಂಬೈ (ಫೆ.12): ತೆಲಂಗಾಣದ ಇಂಜಿನಿಯರ್‌ ಮಾನಸ ವಾರಾಣಸಿ ಫೆಮಿನಾ ಮಿಸ್‌ ಇಂಡಿಯಾ ವರ್ಲ್ಡ್ 2020 ಆಗಿ ಹೊರಹೊಮ್ಮಿದ್ದಾರೆ. 

ಉತ್ತರ ಪ್ರದೇಶದ ಮಾನ್ಯಾ ಸಿಂಗ್‌ ಮಿಸ್‌ ಇಂಡಿಯಾ ರನ್ನರ್‌ ಅಪ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 

ಹರಾರ‍ಯಣದ ಮನಿಕಾ ಶ್ಯೋಕಾಂದ್‌ ಫೆಮಿನಾ ಮಿಸ್‌ ಗ್ರಾಂಡ್‌ ಇಂಡಿಯಾ-2020 ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಲಾರಾ ದತ್ತ ಮಿಸ್‌ ಇಂಡಿಯಾ ಆಗ್ತಾರೆ ಅಂತ ಗೊತ್ತಿತ್ತು: ಸಹ ಸ್ಪರ್ಧಿ ದಿಯಾ ಹೇಳಿದ್ದಿಷ್ಟು .

ರನ್ನರ್ ಅಪ್ ಮಾನ್ಯ ಆಟೋ ಚಾಲಕರ ಪುತ್ರಿಯಾಗಿದ್ದು ಕಡು ಬಡತನದಲ್ಲಿಯೇ ಜೀವನ ನಡೆಸಿದ್ದರು. ಮನೆ ಮನೆಯಲ್ಲಿ ಪಾತ್ರೆ ತೊಳೆದಿದ್ದರು. 

ನಟಿ ನೇಹಾ ದೂಪಿಯಾ, ಚಿತ್ರಾಂಗದಾ ಸಿಂಗ್‌, ಪುಲಕಿತ್‌ ಸಾಮ್ರಾಟ್‌ ಮತ್ತು ಖ್ಯಾತ ವಿನ್ಯಾಸಕರಾದ ಡಿಯೋ ಫಾಲ್ಗುಣಿ ಮತ್ತು ಶೇನ್‌ ಪಿಕಾಕ್‌ ನೇತೃತ್ವದ ತೀರ್ಪುಗಾರರ ಸಮಿತಿಯು ವಿಜೇತರನ್ನು ಆಯ್ಕೆ ಮಾಡಿದೆ.