ನೀರೊಳಗಿಂದ ಸಾಗಬಲ್ಲ ಅತ್ಯಾಧುನಿಕ ಡ್ರೋನ್ ಪ್ರಯೋಗ ಯಶಸ್ವಿ, ರಕ್ಷಣಾ ವಲಯದಲ್ಲಿ ಹೊಸ ಸಂಚಲನ ಸಮುದ್ರ ಮಾರ್ಗದಲ್ಲಿ ಭದ್ರತೆ ಹೆಚ್ಚಿಸಲು ನೆರವು

ನವದೆಹಲಿ(ಜೂ.11): ನೀರೋಗಿನಿಂದ ಸಾಗಬಲ್ಲ ಅತ್ಯಾಧುನಿಕ ಆಟೋನೋಮಸ್ ಡ್ರೋನ್ ಪ್ರಯೋಗ ಯಶಸ್ವಿಯಾಗಿದೆ. ಕ್ಯಾಂಟ್‌ಬರಿ ವಿಶ್ವಿವಿದ್ಯಾಲಯದ ಸಂಶೋಧಕರು ಈ ಡ್ರೋನ್ ಪ್ರಯೋಗ ಯಶಸ್ವಿಯಾಗಿಸಿದ್ದಾರೆ. ಇದರಿಂದ ಸಮುದ್ರ ಮಾರ್ಗದಲ್ಲಿನ ಭದ್ರತೆ ಸವಾಲು ಸುಲಭವಾಗಿ ನಿವಾರಿಸಲು ಸಾಧ್ಯವಾಗಲಿದೆ. ಈ ತಂತ್ರಜ್ಞಾನ ಭಾರತದ ಹಿಂದೂ ಮಹಾಸಾಗರ, ದಕ್ಷಿಣ ಚೀನಾ ಹಾಗೂ ಇಂಡೋ-ಪೆಸಿಫಿಕ್ ಸಮುದ್ರದಲ್ಲಿ ನೆರವಾಗಲಿದೆ. 

ಹಿಂದೂಮಹಾಸಾಗರ, ದಕ್ಷಿಣ ಚೀನಾ, ಇಂಡೋ ಪೆಸಿಫಿಕ್ ಸಮುದ್ರದಲ್ಲಿ ಭಾರತೀಯ ನೌಕಾಪಡೆಯನ್ನು ಬಲಪಡಿಸಲು ಅತ್ಯಾಧುನಿಕ ಡ್ರೋನ್ ಸೂಕ್ತ. ಆಟೋನೋಮಸ್ ಡ್ರೋನ್ ಇದಾಗಿದ್ದು, ಇದರಿಂದ ಸಮುದ್ರದಲ್ಲಿ ಕಣ್ಗಾವಲು ಹಾಗೂ ಭದ್ರತೆ ಮತ್ತಷ್ಟು ಹೆಚ್ಚಲಿದೆ.

ಕಾರವಾರ: ಕದಂಬ ನೌಕಾನೆಲೆ ಸಬ್ ಮರೀನ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಪ್ರಯಾಣ

ಭಾರತ ರಕ್ಷಣಾ ಇಲಾಖೆ ಭಾರತ ನಿರ್ಮಿತ ಡ್ರೋನ್ ಅಭಿವೃದ್ಧಿಪಡಿಸಲು ತಯಾರಿ ನಡೆಸಿದೆ. ನೂತನ ಹಾಗೂ ಅತ್ಯಾಧುನಿಕ ಡ್ರೋನ್‌ನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಲಿದೆ. ಈಗಾಗಲೇ ವಿಶ್ವದಲ್ಲಿ ಈ ಪ್ರಯೋಗ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಭಾರತ ನಿರ್ಮಿತ ಡ್ರೋನ್ ಭಾರತದ ಸಮುದ್ರದ ಗಡಿಯಲ್ಲಿ ಪಹರ ಕಾಯುವ ಕೆಲಸ ಮಾಡಲಿದೆ. 

ಡಿಆರ್‌ಡಿಒ ಅಭಿವೃದ್ಧಿ ಪಡಿಸುತ್ತಿರುವ ಈ ಡ್ರೋನ್ ಮಿಲಿಟರಿ ಉದ್ದೇಶಕ್ಕೆ ಬಳಕೆ ಮಾಡಲು ಕೆಲ ಸಮಯ ಹಿಡಿಯಲಿದೆ. ಆದರೆ ನೌಕಾಪಡೆಯ ಬಲ ಹೆಚ್ಚಿಸಲು ಆಟೋನೋಮಸ್ ಅಂಡರ್ ವಾಟರ್ ಡ್ರೋನ್ ಖರೀದಿಸಲು, ಆಮದು ಮಾಡಿಕೊಳ್ಳಲು ಮುಕ್ತವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಭಾರತದಲ್ಲಿ UAV ಉದ್ಯಮವು ಈಗ ಪ್ರಾರಂಭವಾಗಿದೆ, ನೌಕಾಪಡೆಯ ಉದ್ದೇಶಗಳನ್ನು ಪೂರೈಸಲು ಈಗಾಗಲೇ ಮೊದಲ ಹೆಜ್ಜೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಇತ್ತೀಚೆಗೆ ಭಾರತದಲ್ಲಿ ನಡೆದ ಡ್ರೋನ್ ಮಹೋತ್ಸವದಲ್ಲಿ ಹಲವು ಅತ್ಯಾಧುನಿಕ ಡ್ರೋನ್ ಪರಿಚಯಿಸಲಾಗಿತ್ತು. 

ಹಿಟ್ ಫರ್ಸ್ಟ್ ಹಿಟ್ ಹಾರ್ಡ್: ಪರ್ಫೆಕ್ಟ್ ಆಗಿ ಗುರಿ ಮುಟ್ಟಿದ ಭಾರತೀಯ ನೌಕಾಸೇನೆಯ ಕ್ಷಿಪಣಿ!

ಈ ಡ್ರೋನ್ ಮಹೋತ್ಸವ ಕಾರ್ಯಕ್ರಮದಲ್ಲಿ, ಬೆಂಗಳೂರಿನ ‘ಆಸ್ಟೀರಿಯಾ ಏರೋಸ್ಪೇಸ್‌’ ಕಂಪನಿ ತನ್ನ ಡ್ರೋನ್‌ಗಳನ್ನು ಡ್ರೋನ್‌ ಉತ್ಸವದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ಕೈಗಾರಿಕಾ ವಲಯದಲ್ಲಿ ಭದ್ರತೆ, ಸರ್ವೇಕ್ಷಣೆ ಹಾಗೂ ಪರಿವೀಕ್ಷಣೆಗಾಗಿ ಬಳಸಲಾಗುವ ಡ್ರೋನ್‌ ಸೇರಿ ಹಲವು ಬಗೆಯ ವೈಮಾನಿಕ ನೌಕೆಗಳನ್ನು ಪ್ರದರ್ಶಿಸುತ್ತಿದೆ. ಈ ವೇಳೆ ಮೋದಿ ಅವರು ಆಸ್ಟೀರಿಯಾ ಕಂಪನಿಯ ಡ್ರೋನ್‌ವೊಂದನ್ನು ಹಾರಿಸಿ ಸಂತಸಪಟ್ಟರು.

ಡ್ರೋನ್‌ ಉತ್ಸವದಲ್ಲಿ ಮಾತನಾಡಿದ ಮೋದಿ ಅವರು, ‘ಸ್ಟಾರ್ಟಪ್‌ಗಳು ಹಾಗೂ ಉತ್ಪಾದಕ ಸಂಸ್ಥೆಗಳು ಭಾರತವನ್ನು ಡ್ರೋನ್‌ ತಂತ್ರಜ್ಞಾನದ ಹಬ್‌ ಆಗಿಸಬೇಕು. ಡ್ರೋನ್‌ಗಳನ್ನು ದೇಶದಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ಅನಾವಶ್ಯಕ ನಿಯಮ ಹಾಗೂ ಅಡ್ಡಿಗಳನ್ನು ಕಡಿಮೆ ಮಾಡಿದ್ದೇವೆ. ಡ್ರೋನ್‌ಗಳು ಪೊಲೀಸ್‌, ಸಂಚಾರ ನಿರ್ವಹಣೆ, ದೂರದ ಪ್ರದೇಶಗಳಲ್ಲಿ ಸಸ್ಯ ನೆಡಲೂ ಸಹಾಯ ಮಾಡಲಿವೆ. ಜತೆಗೆ ನಮ್ಮ ದೇಶದ ಕಾರ್ಯನಿರ್ವಹಿಸುವ ಶೈಲಿಯನ್ನೇ ಬದಲಿಸಲಿವೆ. ತಂತ್ರಜ್ಞಾನ ಆಧರಿಸಿ ಸೇವೆಯನ್ನು ದೇಶಾದ್ಯಂತ ತಲುಪಿಸಲು ನೆರವಾಗಲಿವೆ’ ಎಂದು ಹೇಳಿದರು.