Asianet Suvarna News Asianet Suvarna News

ಪಿಎಂ ಮೋದಿಗೆ ಸಿಕ್ಕ ಉಡುಗೊರೆ, ಸ್ಮರಣಿಕೆಗಳ ಇ-ಹರಾಜು: ನಮಾಮಿ ಗಂಗೆಗೆ ಹಣ ಬಳಕೆ!

* ಗಂಗಾ ನಂದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶದಿಂದ ಸತ್ಕಾರ್ಯ

* ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಿಕ್ಕ ಉಡುಗೊರೆ ಹಾಗೂ ಸ್ಮರಣಿಕೆಗಳ ಇ-ಹರಾಜು

* ಸೆಪ್ಟೆಂಬರ್ 17 ರಿಂದ ಈ ಇ-ಹರಾಜು ಪ್ರಕ್ರಿಯೆ ಆರಂಭ

Ministry of Culture to e auction mementos received by PM Modi pod
Author
Bangalore, First Published Sep 16, 2021, 4:10 PM IST

ನವದೆಹಲಿ(ಸೆ.16) ಗಂಗಾ ನಂದಿಯ ಪುನಶ್ಚೇತನ ಮತ್ತು ಸಂರಕ್ಷಣೆಯ ಉದ್ದೇಶ ಹೊಂದಿರುವ ನಮಾಮಿ ಗಂಗೆ ಅಭಿಯಾನಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಸಿಕ್ಕ ಉಡುಗೊರೆ ಹಾಗೂ ಸ್ಮರಣಿಕೆಗಳನ್ನು ಸಂಸ್ಕೃತಿ ಸಚಿವಾಲಯ ಇ-ಹರಾಜು ಮಾಡಲಿದೆ.

ಹೌದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಆಯೋಜಿಸಿದೆ. ಈ ಸ್ಮರಣಿಕೆಗಳಲ್ಲಿ ಪದಕ ವಿಜೇತ ಒಲಿಂಪಿಕ್ ಕ್ರೀಡಾಪಟುಗಳು ಮತ್ತು ಪ್ಯಾರಾಲಿಂಪಿಕ್ ಕ್ರೀಡಾಪಟುಗಳ ಕ್ರೀಡಾ ಸಾಧನಗಳು ಮತ್ತು ಉಪಕರಣಗಳು, ಅಯೋಧ್ಯೆ ರಾಮ ಮಂದಿರ, ಚಾರ್ ಧಾಮ್,  ರುದ್ರಾಕ್ಷ್ ಸಮಾವೇಶ ಕೇಂದ್ರದ  ಪ್ರತಿರೂಪಗಳು, ಮಾದರಿಗಳು, ಶಿಲ್ಪಗಳು, ವರ್ಣಚಿತ್ರಗಳು, ಅಂಗವಸ್ತ್ರ ಮೊದಲಾದವುಗಳು ಸೇರಿವೆ.

ಗಂಗಾ ನದಿಯಲ್ಲಿ ತೇಲಿಬಂತು ಪೆಟ್ಟಿಗೆ; ತೆರೆದು ನೋಡಿದರೆ ಪುಟ್ಟ ಕಂದಮ್ಮ!

ಸೆಪ್ಟೆಂಬರ್ 17 ರಿಂದ ಈ ಇ-ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು, ಈ ಉಡುಗೊರೆ ಹಾಗೂ ಸ್ಮರಣಿಕೆಗಳನ್ನು ಪಡೆಯಲು  https://pmmementos.gov.in ವೆಬ್‌ ಸೈಟ್ ಮೂಲಕ ಇ -ಹರಾಜಿನಲ್ಲಿ ಭಾಗವಹಿಸಬಹುದು. ಈ ಹರಾಜಿನಲ್ಲಿ ಸಂಗ್ರಹವಾಗುವ ಹಣವನ್ನು ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುತ್ತದೆ. 

Follow Us:
Download App:
  • android
  • ios