Asianet Suvarna News Asianet Suvarna News

ಲಾಕ್‌ಡೌನ್ ವೇಳೆ ಏರ್ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಹಣ ವಾಪಸ್!

ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಅಗತ್ಯ ಹಾಗೂ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಸ್ಥಗಿತಗೊಂಡಿದೆ. ಇದರಲ್ಲಿ ವಿಮಾನಯಾನ ಸೇವೆ ಕೂಡ ಸೇರಿಕೊಂಡಿದೆ. ಇದೀಗ ಲಾಕ್‌ಡೌನ್ ವೇಳೆ ವಿಮಾನ ಟಿಕೆಟ್ ಬುಕ್ ಮಾಡಿದ ಗ್ರಾಹಕರಿಗೆ ಸಂಪೂರ್ಣ ಹಣ ವಾಪಾಸ್ ನೀಡಬೇಕು ಎಂದು ವಿಮಾನಯಾನ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

Ministry of Civil aviation memorandum on Refund of Air fare during lockdown period
Author
Bengaluru, First Published Apr 16, 2020, 6:40 PM IST

ನವದೆಹಲಿ(ಏ.16): ಕೊರೋನಾ ವೈರಸ್ ಹತೋಟಿಗೆ ತರಲು ಕೇಂದ್ರ ಸರ್ಕಾರ ಇದೀಗ ಲಾಕ್‌ಡೌನ್ ಅವಧಿ ವಿಸ್ತರಿಸಿದೆ. ಮೊದಲು ಮಾರ್ಚ್ 24 ರಿಂದ ಏಪ್ರಿಲ್ 14ರ ವರೆಗೆ ಲಾಕ್‌ಡೌನ್ ಹೇರಲಾಗಿತ್ತು. ಬಳಿಕ ಮೇ.3ರ ವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಇದರ ನಡುವೆ ವಿಮಾನಯಾನ ಸಚಿವಾಲಯ ಮಹತ್ವದ ಪ್ರಕಟಣೆ ಹೊರಡಿಸಿದೆ. ಮೊದಲ ಹಂತದ ಲಾಕ್‌ಡೌನ್ ವೇಳೆ ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರಿಗೆ ಸಂಪೂರ್ಣ ಹಣ ವಾಪಸ್ ಸಿಗಲಿದೆ.

ಯಾವೆಲ್ಲ ಆಧಾರದಲ್ಲಿ ಲಾಕ್ ಡೌನ್ ಮಾಡಲಾಗುತ್ತದೆ? 3 ಟಿ ತತ್ವ ಎಂದರೇನು?

ವಿಮಾಯಾನ ಸಚಿವಾಲಯ ಹೊರಡಿಸಿದೆ ಪ್ರಕಟಣೆಯಲ್ಲಿ ವಿಮಾನ ಕಂಪನಿಗಳಿಗೆ ಕೆಲ ಸೂಚನೆಗಳನ್ನು ನೀಡಿದೆ .  ಮಾ.24 ರಿಂದ ಏಪ್ರಿಲ್ 14ರವರೆಗೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಟಿಕೆಟ್ ಬಕ್ ಮಾಡಿದ ಗ್ರಾಹಕರಿಗೆ ಟಿಕೆಟ್ ಹಣವನ್ನು ಸಂಪೂರ್ಣವಾಗಿ ವಾಪಸ್ ನೀಡಲು ಸೂಚಿಸಿದೆ. ಗ್ರಾಹಕರು ಟಿಕೆಟ್ ಕ್ಯಾನ್ಸಲ್ ಮಾಡಿ ಹಣ ಹಿಂತಿರುಗಿಸಲು ಆಗ್ರಹಿಸಿದರೆ ವಿಮಾನ ಕಂಪನಿಗಳು ಹಣ ಹಿಂತಿರುಗಿಸಬೇಕು ಎಂದು ಸೂಚಿಸಿದೆ. 

ಮೊದಲ ಹಂತದ ಲಾಕ್‌ಡೌನ್ ಏಪ್ರಿಲ್ 14ಕ್ಕೆ ಕೊನೆಗೊಳ್ಳುತ್ತಿತ್ತು. ಹೀಗಾಗಿ ಹಲವು ವಿದೇಶಿ ಕಂಪನಿಗಳು  ಏಪ್ರಿಲ್ 15 ರಿಂದ ಗ್ರಾಹಕರಿಗೆ ಟಿಕೆಟ್ ಬುಕಿಂಗ್ ಅವಕಾಶ ನೀಡಿತ್ತು. ಏರ್ ಇಂಡಿಯಾ ಹೊರತು ಪಡಿಸಿ ಉಳಿದೆಲ್ಲಾ ವಿಮಾನ ಸೇವೆ ಕಂಪನಿಗಳು ಟಿಕೆಟ್ ಬುಕಿಂಗ್ ಅವಕಾಶ ನೀಡಿತ್ತು ಆದರೆ ಪ್ರಧಾನಿ ಮೋದಿ ಲಾಕ್‌ಡೌನ್ 2ನೇ ಹಂತಕ್ಕೆ ವಿಸ್ತರಿಸಿದ್ದಾರೆ. ಇದೀಗ 2ನೇ ಹಂತದಲ್ಲಿ ಬುಕ್ ಮಾಡಿದ ಗ್ರಾಹಕರಿಗೆ ಹಣ ವಾಪಸ್ ನೀಡುವುದಿಲ್ಲ. ಈ ಗ್ರಾಹಕರಿಗೆ ಡಿಸೆಂಬರ್ 31ರ ವರೆಗೆ ಪ್ರಯಾಣದ ಅವಕಾಶ ನೀಡಲಾಗದುವುದು. ಇಷ್ಟ ಅಲ್ಲ ಹೆಚ್ಚಿನ ಶುಲ್ಕ ವಿಧಿಸಿವುದಿಲ್ಲ ಎಂದು ವಿದೇಶಿ ವಿಮಾನ ಕಂಪನಿಗಳು ಹೇಳಿದೆ.

Follow Us:
Download App:
  • android
  • ios