ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ| ಈ ವಿಡಿಯೋ ಟ್ವೀಟ್‌ ಮಾಡಿದ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌| ಈ ಮಾರ್ಗ ರೈಲು ಪ್ರಯಾಣ ಎಷ್ಟು ಸುಗಮವಾಗಿ ಇರಲಿದೆ ಎಂಬುದನ್ನು ನೀವೇ ಊಹಿಸಿ ಹೇಳಿದ ರೈಲ್ವೆ ಸಚಿವರು| 

ನವದೆಹಲಿ(ಅ.31): ರೈಲ್ವೆ ಇಲಾಖೆ ಬೆಂಗಳೂರು ಹಾಗೂ ಮೈಸೂರು ನಡುವಿನ ರೈಲ್ವೆ ಹಳಿಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದೆ. ಕಾಮಗಾರಿಯ ನೈಪುಣ್ಯತೆಯನ್ನು ನೀರು ತುಂಬಿದ ಗಾಜಿನ ಲೋಟದ ಮೂಲಕ ಪರೀಕ್ಷೆ ಮೂಲಕ ಅದು ಜನರ ಮುಂದಿಟ್ಟಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ. ಈ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಟ್ವೀಟ್‌ ಮಾಡಿದ್ದು, ಈ ಮಾರ್ಗ ರೈಲು ಪ್ರಯಾಣ ಎಷ್ಟು ಸುಗಮವಾಗಿ ಇರಲಿದೆ ಎಂಬುದನ್ನು ನೀವೇ ಊಹಿಸಿ ಹೇಳಿದ್ದಾರೆ.

Scroll to load tweet…

ಕೊರೋನಾದ ನಡುವೆಯೂ ದೊಡ್ಡ ಶುಭ ಸಮಾಚಾರ ತಿಳಿಸಿದ ಪಿಯೂಶ್ ಗೋಯಲ್!

ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಬೆಂಗಳೂರು- ಮೈಸೂರು ನಡುವಿನ ರೈಲ್ವೆ ಮಾರ್ಗ ಹಾಗೂ ಸೇತುವೆಗಳ ದುರಸ್ತಿ ಕಾಮಗಾರಿಯನ್ನು ಲಾಕ್‌ಡೌನ್‌ ವೇಳೆ ಕೈಗೊಳ್ಳಲಾಗಿತ್ತು.