ದೇಗುಲದಲ್ಲಿ ಶರ್ಟ್ ತೆಗೆವ ಪದ್ಧತಿ: ಕೇರಳ ಸಿಎಂ ಹೇಳಿಕೆಗೆ ಸಚಿವ ಗಣೇಶ್ ಕುಮಾರ್ ಕಿಡಿ
ಪುರುಷರ ದೇಗುಲದ ಪ್ರವೇಶದ ವೇಳೆ ಮೇಲುಂಗಿ ತೆಗೆಯುವ ಸಂಪ್ರದಾಯ ಕೈಬಿಡುವ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆಗೆ, ಇದೀಗ ಸ್ವತಃ ಅವರ ಸಂಪುಟದಿಂದಲೇ ವಿರೋಧ ವ್ಯಕ್ತವಾಗಿದೆ.
ತಿರುವನಂತಪುರಂ (ಜ.05): ಪುರುಷರ ದೇಗುಲದ ಪ್ರವೇಶದ ವೇಳೆ ಮೇಲುಂಗಿ ತೆಗೆಯುವ ಸಂಪ್ರದಾಯ ಕೈಬಿಡುವ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆಗೆ, ಇದೀಗ ಸ್ವತಃ ಅವರ ಸಂಪುಟದಿಂದಲೇ ವಿರೋಧ ವ್ಯಕ್ತವಾಗಿದೆ. ದೇಗುಲದ ಆಚರಣೆ ವಿಷಯದಲ್ಲಿ ಸರ್ಕಾರದ ಮಧ್ಯಪ್ರವೇಶ ಸರಿಯಲ್ಲ. ದೇಗುಲಗಳ ಆಚರಣೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ತಂತ್ರಿಗಳೇ ಬಿಡಿ ಎಂದು ಸಾರಿಗೆ ಸಚಿವ ಗಣೇಶ್ ಕುಮಾರ್ ಹೇಳಿದ್ದಾರೆ.
ಇದರೊಂದಿಗೆ ಸೂಕ್ಷ್ಮ ವಿಷಯದಲ್ಲಿ ಸರ್ಕಾರದೊಳಗೇ ಭಿನ್ನಾಭಿಪ್ರಾಯ ಇರುವುದು ಬೆಳಕಿಗೆ ಬಂದಿದೆ.ಒಂದು ವೇಳೆ ಪುರುಷರು ಮೇಲಂಗಿ ತೆಗೆದು ದೇಗುಲ ಪ್ರವೇಶಿಸುವುದು ಸೇರಿ ಯಾವುದಾದರೂ ನಿಯಮದಲ್ಲಿ ಬದಲಾವಣೆ ಮಾಡಬೇಕೆಂದು ಸರ್ಕಾರ ಬಯಸಿದರೆ ತಂತ್ರಿಗಳ ಜತೆಗೆ ಸಮಾಲೋಚನೆ ನಡೆಸಲಿ ಅಥವಾ ದೇವಪ್ರಶ್ನೆ ಇಡಲಿ ಎಂದು ನಾಯರ್ ಸರ್ವೀಸ್ ಸೊಸೈಟಿ ಆಡಳಿತ ಮಂಡಳಿ ನಿರ್ದೇಶಕರೂ ಆಗಿರುವ ಕೆ.ಬಿ.ಗಣೇಶ್ ಕುಮಾರ್ ಸಲಹೆ ಸಲಹೆ ನೀಡಿದ್ದಾರೆ.
ಕ್ರೈಸ್ತ, ಮುಸ್ಲಿಂ ಆಚರಣೆಗಳ ಬಗ್ಗೆ ಕೇರಳ ಸಿಎಂ ಪ್ರಶ್ನಿಸ್ತಾರಾ? : ನಾಯರ್ ಸರ್ವೀಸ್ ಸೊಸೈಟಿ
ವಿವಿಧ ದೇಗುಲಗಳು ತಮ್ಮದೇ ಆದ ಸಂಪ್ರದಾಯ ಮತ್ತು ಪದ್ಧತಿಗಳನ್ನು ಹೊಂದಿವೆ. ಭಕ್ತರು ಅದನ್ನು ಪಾಲಿಸಬೇಕಿದೆ, ಯಾರಿಗೆ ಇವೆಲ್ಲ ಇಷ್ಟವಿಲ್ಲವೋ ಅವರು ದೇಗುಲಕ್ಕೆ ಹೋಗಬೇಕಾಗಿಲ್ಲ ಎಂದು ತಿಳಿಸಿದರು. ಶಿವಗಿರಿ ಮಠದ ಸಚ್ಚಿದಾನಂದ ಸ್ವಾಮೀಜಿ ಅವರು ಪುರುಷರು ಮೇಲಂಗಿ ತೆಗೆದರಷ್ಟೇ ದೇಗುಲಕ್ಕೆ ಪ್ರವೇಶ ನೀಡುವ ಪದ್ಧತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ನಿಯಮ ರದ್ದು ಮಾಡುವಂತೆ ಆಗ್ರಹಿಸಿದ್ದರು. ಇದಕ್ಕೆ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರೂ ಬೆಂಬಲ ವ್ಯಕ್ತಪಡಿಸಿದ್ದರು. ಪಿಣರಾಯ್ ಅವರ ಈ ನಿಲುವಿಗೆ ಎನ್‌ಎಸ್‌ಎಸ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಹಿಂದೂ ಧರ್ಮಕ್ಕೆ ಅವಮಾನ: ಸಮಾಜ ಸುಧಾರಕ, ಸನಾತನ ಧರ್ಮದ ಪ್ರತಿಪಾದಕ ಶ್ರೀ ನಾರಾಯಣಗುರುಗಳನ್ನು ಸನಾತನ ಧರ್ಮದ ಶತ್ರು ಎಂದು ಬಿಂಬಿಸುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ನಾರಾಯಣಗುರುಗಳನ್ನು ಅವಮಾನಿಸಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರ ಹೇಳಿಕೆ ದುರುದ್ದೇಶಪೂರಿತ ಮತ್ತು ಸಂಪೂರ್ಣ ಖಂಡನೀಯ. ತರ್ಕಬದ್ಧ ಚಿಂತನೆಯನ್ನು ಉತ್ತೇಜಿಸುವ ನೆಪದಲ್ಲಿ ಹಿಂದೂ ನಂಬಿಕೆಗಳನ್ನು ಅವರು ಅವಮಾನಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕೇರಳ ದೇಗುಲಗಳಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ರದ್ದು? ದೇವಸ್ವಂ ಮಂಡಳಿ ಚಿಂತನೆ: ಕೇರಳ ಸಿಎಂ
ಸನಾತನ ಧರ್ಮವನ್ನು ದ್ವೇಷಿಸಬೇಕು ಎಂಬುದು ವಿಜಯನ್ ಅವರ ಶಿವಗಿರಿ ಸಮಾವೇಶದ ಭಾಷಣದ ತಿರುಳು. ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುವೆ. ಅವರ ಹೇಳಿಕೆ ಹಿಂದೂಗಳನ್ನು ಘಾಸಿಗೊಳಿಸಿದೆ. ಹಿಂದೂ ಸಮಾಜ ಸುಧಾರಕರ ವಿರುದ್ಧ ಅಲ್ಲಿನ ಸರ್ಕಾರ ಮಾತನಾಡಲು ಆರಂಭಿಸಿದೆ. ಕಮ್ಯುನಿಸ್ಟ್‌ನ ಹಿಂದೂ ವಿರೋಧಿ ಇಂತಹ ದ್ವೇಷ ಪ್ರಚಾರವನ್ನು ಕೇರಳದ ಜನರು ತಿರಸ್ಕರಿಸಬೇಕು. ಅಲ್ಲದೆ ಸಮಾಜ ಸುಧಾರಕರ ವಿರುದ್ಧ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿದು ಸಾರ್ವಜನಿಕವಾಗಿ ಮಾತನಾಡಿದ ಕೇರಳ ಸಿಎಂ ವಿರುದ್ಧ ಸಮಸ್ತ ಹಿಂದೂಗಳು ತರಾಟೆಗೆ ತೆಗೆದುಕೊಂಡು ಸಿಎಂ ವಿರುದ್ಧ ಎದ್ದೇಳಬೇಕು ಎಂದಿದ್ದಾರೆ.