ಅಸ್ಸಾಂ(ಜು.24): ಕಿತ್ತು ತಿನ್ನುವ ಬಡತನ, ಒಂದು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ. ಇದರ ಜೊತೆಗೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಹೊಡೆತದಿಂದ ಜನರು ಹೈರಾಣಾಗಿದ್ದಾರೆ. ಅಸ್ಸಾಂನ ವಲಸೆ ಕಾರ್ಮಿಕನೊಬ್ಬ  ಬಡತನ ತಾಳಲಾರದೆ ತನ್ನ 15 ದಿನದ ಮಗಳನ್ನೇ ಮಾರಾಟ ಮಾಡಿದ ಘಟನೆ ನಡೆದಿದೆ.

ಬೆಂಗಳೂರು ಮತ್ತೆ ಲಾಕ್‌ಡೌನ್‌: ತವರಿಗೆ ಹೊರಟ ವಲಸೆ ಕಾರ್ಮಿಕರು

ಕೊಕ್ರಜಾರ್ ಜಿಲ್ಲೆಯ ದಂತೋಲ ಮಂದಾರಿಯ ಗ್ರಾಮದ ದೀಪಕ್ ಬ್ರಾಹ್ಮಾ ಎಂಬ ವಲಸೆ ಕಾರ್ಮಿಕ ತನ್ನು 15 ದಿನದ ಮಗಳನ್ನು 45,000 ರೂಪಾಯಿಗೆ ಮಾರಾಟ ಮಾಡಿದ್ದಾನೆ. ಈ ಕುರಿತು ಮಾಹಿತಿ ತಿಳಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಇಷ್ಟೇ ಅಲ್ಲ ಇಬ್ಬರು ಮಾನವ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಜೊತೆಗೆ 15 ದಿನದ ಮಗುವನ್ನು ರಕ್ಷಿಸಿದ್ದಾರೆ.

ವಲಸಿಗ ಕಾರ್ಮಿಕರ ನೆರವಿಗೆ ಧಾವಿಸಲು ರಾಜ್ಯಗಳಿಗೆ ಗಡುವು!

ಕೊರೋನಾ ವೈರಸ್ ಕಾರಣ ಕೆಲಸ ಕಳೆದುಕೊಂಡಿದ್ದ ದೀಪಕ್, ಅಸ್ಸಾಂಗೆ ಕುಟುಂಬ ಸಮೇತ ಮರಳಿದ್ದ. ವಲಸೆ ಕಾರ್ಮಿಕನಾಗಿ ದುಡಿಯುತ್ತಿದ್ದ ದೀಪಕ್ ಕುಟುಂಬಕ್ಕೆ ಎಲ್ಲಾ ಆದಾಯವೂ ನಿಂತಿತು. ಇತ್ತ ದೀಪಕ್ ಪತ್ನಿ 2ನೇ  ಹೆಣ್ಣ ಮಗುವಿಗೆ ಜನ್ಮ ನೀಡಿದ್ದಳು. ಮತ್ತಷ್ಟು ಚಿಂತೆಗೆ ಬಿದ್ದ ದೀಪಕ್ 15 ದಿನವಾಗಿದ್ದ ಮುದ್ದಾದ ಮಗುವನ್ನು ಮಾರಾಟ ಮಾಡಿದ್ದಾನೆ.

15 ದಿನದ ಮಗುವನ್ನು ಮಲಗಿಸಿ ಮನೆ ಕೆಲಸದಲ್ಲಿ ತೊಡಗಿದ್ದ ದೀಪಕ್ ಪತ್ನಿ ಮತ್ತೆ ಬಂದು ನೋಡಿದಾಗ ಆಘಾತ ಕಾದಿತ್ತು. ಮಗು ಕಾಣೆಯಾದಾಗ  ಈ ಕುರಿತು ವಿಚಾರಿಸಿದಾಗ ಮಾರಾಟ  ಮಾಡಿರುವುದಾಗಿ ಹೇಳಿದ್ದಾನೆ. ತಕ್ಷಣವೇ ಪೊಲೀಸ್ ಠಾಣೆಗೆ ದೀಪಕ್ ಪತ್ನಿ ದೂರು ನೀಡಿದ್ದಾಳೆ. ಪೊಲೀಸರು ದೀಪಕ್ ಜೊತೆಗೆ ಇಬ್ಬರು ಮಕ್ಕಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಅರೆಸ್ಟ್ ಮಾಡಿದ್ದಾರೆ.

ಮಕ್ಕಳ ಸಾಗಾಣಿಕೆ, ಹೆಣ್ಣು ಮಕ್ಕಳ ಮಾರಾಟ ವಿರುದ್ಧ ಅಸ್ಸಾಂನಲ್ಲಿ NGO ಕೆಲಸ ಮಾಡುತ್ತಿದೆ. ಈ ಮಾರಾಟದ ಮಾಹಿತಿ ತಿಳಿದ NGO ಪೊಲೀಸರನ್ನು ಸಂಪರ್ಕಿಸಿತ್ತು. ಕೊನೆಗೂ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಅಸ್ಸಾಂಲ್ಲಿ ಲಕ್ಷಾಂತರ ಮಂದಿ ಕೊರೋನಾ ವೈರಸ್‌ನಿಂದ ಕೆಲಸ ಕಳೆದುಕೊಂಡಿದ್ದಾರೆ. ಕಾಡಿನ ತಪ್ಪಲಿನಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರು ಈ ರೀತಿ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಎಂದು NGO ಹೇಳಿದೆ.