23 ವರ್ಷದ ಎಂಜಿನೀಯರ್ಗೆ ಇಮೇಲ್ ಬಂದಿದೆ. ಆತಂಕದಲ್ಲೇ ತೆರೆದು ನೋಡಿದರೆ 11 ಲಕ್ಷ ರೂಪಾಯಿ ಆಫರ್ ಬೋಲ್ಡ್ ಲೆಟರ್ನಲ್ಲಿ ಉಲ್ಲೇಖಿಸಲಾಗಿದೆ. ಖುಷಿಯಿಂದ ಇಮೇಲ್ ಓದಿ ಪೂರ್ತಿಗೊಳಿಸಿದಾಗ ಆಘಾತ ಕಾದಿತ್ತು.
ಹೈದರಾಬಾದ್ (ಅ.29) ಮೈಕ್ರೋಸಾಫ್ಟ್ ಉದ್ಯೋಗಿಗಳು ಪ್ರತಿ ದಿನ ಆತಂಕದಲ್ಲೇ ದಿನದೂಡುತ್ತಿದ್ದಾರೆ. ಈಗಾಗಲೇ 60 ಸಾವಿರ ಉದ್ಯೋಗಿಗಳಿಗೆ ಇಮೇಲ್ ಮೂಲಕ ಸ್ವಯಂ ನಿವೃತ್ತಿಗೆ ಸೂಚನೆ ನೀಡಲಾಗಿದೆ. ಭಾರಿ ಉದ್ಯೋಗ ಕಡಿತ ಮಾಡುತ್ತಿರುವ ಮೈಕ್ರೋಸಾಫ್ಟ್ನಲ್ಲಿ 23 ವರ್ಷದ ಹೈದರಾಬಾದ್ ಟೆಕ್ಕಿಗೆ ಇಮೇಲ್ ಬಂದಿದೆ. ಇಮೇಲ್ನಲ್ಲಿ 11 ಲಕ್ಷ ರೂಪಾಯಿ ಆಫರ್ ಮುಂದಿಡಲಾಗಿತ್ತು. ಎಲ್ಲರೂ ಉದ್ಯೋಗ ಕಳೆದುಕೊಳ್ಳುತ್ತಿದ್ದರೆ, ತನಗೆ 11 ಲಕ್ಷ ರೂಪಾಯಿ ಹೆಚ್ಚುವರಿ ಆಫರ್ ಬಂದಿದೆ ಎಂದು ಹಿರಿ ಹಿರಿ ಹಿಗ್ಗಿದ್ದಾನೆ. ಹಲವು ಲೆಕ್ಕಾಚಾರ ಹಾಕಿದ್ದಾರೆ, ಟ್ರಿಪ್, ಖರೀದಿ ಎಲ್ಲವೂ ಹಾದು ಹೋಗಿದೆ. ಆದರೆ ಇಮೇಲ್ ಪೂರ್ತಿ ಓದುವಷ್ಟರಲ್ಲಿ ಆತಂಕ ಹೆಚ್ಚಾಗಿದೆ. ಈ ಕುರಿತು ಹೈದರಾಬಾದ್ ಟೆಕ್ಕಿ ರೆಡ್ಡಿಟ್ ಮೂಲಕ ಹೇಳಿಕೊಂಡಿದ್ದಾರೆ.
11 ಲಕ್ಷ ರೂಪಾಯಿ ಆಫರ್ ಇಮೇಲ್
ಮೈಕ್ರೋಸಾಫ್ಟ್ ಉದ್ಯೋಗಿಗಳು ಪ್ರತಿ ದಿನ, ಪ್ರತಿ ನಿಮಿಷ ಇಮೇಲ್ ಬಂದಿದೆಯಾ ಎಂದು ಚೆಕ್ ಮಾಡುತ್ತಲೇ ದಿನ ದೂಡುತ್ತಿದ್ದಾರೆ. ಹೀಗೆ 23 ವರ್ಷದ ಹೈದರಾಬಾದ್ ಟೆಕ್ಕಿಗೆ ಇಮೇಲ್ ಬಂದಿದೆ. ಮೈಕ್ರೋಸಾಫ್ಟ್ ಈಗಾಗಲೇ ಸ್ವಯಂ ನಿವೃತ್ತಿ (VEO) ಪ್ರೋಗ್ರಾಂ ಆರಂಭಿಸಿದೆ. ಹೀಗಾಗಿ ಆತಂಕದಲ್ಲೇ ಇಮೇಲ್ ತೆರೆದಿದ್ದಾನೆ. ತೆರೆದು ನೋಡಿದರೆ ಇದರಲ್ಲಿ ಬೋಲ್ಡ್ ಲೆಟರ್ ಮೂಲಕ 11 ಲಕ್ಷ ರೂಪಾಯಿ ಆಫರ್ ನೀಡಲಾಗಿತ್ತು. ಟೆಕ್ಕಿ ಅಚ್ಚರಿಗೊಂಡಿದ್ದಾನೆ ಜೊತೆಗೆ ಪುಳಕಿತಗೊಂಡಿದ್ದಾನೆ. 11 ಲಕ್ಷ ರೂಪಾಯಿ ಆಫರ್ ನೋಡಿ ಖುಷಿಯಾಗಿದ್ದಾನೆ.
ಏನಿದು 11 ಲಕ್ಷ ರೂಪಾಯಿ ಆಫರ್
ಇಮೇಲ್ ಮೂಲಕ 11 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ ನಿಜ. ಆದರೆ ಇಮೇಲ್ ಪೂರ್ತಿ ಓದಿ ಮುಗಿಸಿದಾಗ ಟೆಕ್ಕಿಗೆ ಅರ್ಥವಾಗಿದೆ. 23ರ ಹರೆಯದ ಟೆಕ್ಕಿಗೆ ಉದ್ಯೋಗ ತೊರೆಯಲು ನೀಡಿದ ಆಫರ್. ಸ್ವಯಂ ರಾಜೀನಾಮೆ ನೀಡುವುದಾದರೆ 11 ಲಕ್ಷ ರೂಪಾಯಿ ನೀಡುವುದಾಗಿ ಮೈಕ್ರೋಸಾಫ್ಟ್ ಇಮೇಲ್ ಮೂಲಕ ತಿಳಿಸಿತ್ತು. ಯಾವುದೇ ಕಂಡೀಷನ್ ಇಲ್ಲದೆ 11 ಲಕ್ಷ ರೂಪಾಯಿ ನೀಡುವುದಾಗಿ ಹೇಳಲಾಗಿತ್ತು. ಇಷ್ಟೇ ಅಲ್ಲ ಯಾವುದೇ ಕಂಡೀಷನ್ ಇಲ್ಲದೆ ರಾಜೀನಾಮೆ ನೀಡಲು ಸೂಚಿಸಲಾಗಿತ್ತು.
ರೆಡ್ಡಿಟ್ನಲ್ಲಿ ಭಾರಿ ಚರ್ಚೆ
ರೆಡ್ಡಿಟ್ನಲ್ಲಿ ಈ ಕುರಿತು ಭಾರಿ ಚರ್ಚೆಯಾಗುತ್ತಿದೆ. ಹಲವರು 11 ಲಕ್ಷ ರೂಪಾಯಿ ತೆಗೆದುಕೊಂಡು ರಾಜೀನಾಮೆ ನೀಡುವುದು ಉತ್ತಮ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೇ ವೇಳೆ ಉತ್ತಮ ವೇತನದ ಉದ್ಯೋಗವನ್ನು ಕೇವಲ 11 ಲಕ್ಷ ರೂಪಾಯಿಗೆ ರಾಜೀನಾಮೆ ನೀಡುವುದು ಉತ್ತಮವಲ್ಲ. ಸದ್ಯ ಮಾರುಕಟ್ಟೆಯಲ್ಲಿ ಉದ್ಯೋಗ ಕಡಿತ ತೀವ್ರಗೊಳ್ಳುತ್ತಿದೆ.
ಮೈಕ್ರೋಸಾಫ್ಟ್ VEO ಮೂಲಕ ಉದ್ಯೋಗ ಕಡಿತ ಮಾಡುತ್ತಿದೆ. ಒತ್ತಾಯಪೂರ್ವಕವಾಗಿ ಸ್ವಯಂ ನಿವೃತ್ತಿಗೆ ಸೂಚಿಸುತ್ತಿದೆ. ಮೈಕ್ರೋಸಾಫ್ಟ್ ಉದ್ಯೋಗಿಗಳು ಕಣ್ಣೀರಿಡುತ್ತಿದ್ದಾರೆ. ಇಮೇಲ್ ಮೂಲಕ ಸಂದೇಶ ರವಾನಿಸಲಾಗುತ್ತಿದೆ. ಆತಂಕ ತೀವ್ರಗೊಳ್ಳುತ್ತಿದೆ. ಹಲವು ಟೆಕ್ ಕಂಪನಿಗಳು ಮತ್ತೊಂದು ಸುತ್ತಿನ ಉದ್ಯೋಗ ಕಡಿತಕ್ಕೆ ತಯಾರಿ ನಡೆಸುತ್ತಿದೆ. ಮೈಕ್ರೋಸಾಫ್ಟ್ ಬೆನ್ನಲ್ಲೇ ಅಮೇಜಾನ್ ಸೇರಿದಂತೆ ಕೆಲ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ.






