ಮೆಟ್ಟೂರು ಡ್ಯಾಂ ಭರ್ತಿ: ಇನ್ನೊಂದು ವರ್ಷ ತಮಿಳುನಾಡಿನ ಕ್ಯಾತೆ ಇಲ್ಲ?

ಕಾವೇರಿ ನದಿಗೆ ಅಡ್ಡಲಾಗಿ ತಮಿಳುನಾಡಿನ ಮೆಟ್ಟೂರಿನಲ್ಲಿ ಕಟ್ಟಿರುವ ಅಣೆಕಟ್ಟಿಗೆ ಕರ್ನಾಟಕ ಭಾರೀ ಪ್ರಮಾಣದ ನೀರು ಬಿಡುತ್ತಿರುವ ಕಾರಂ, ತಮಿಳುನಾಡು ಸರ್ಕಾರ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವಂತೆ ಭಾನುವಾರ ಆದೇಶಸಿದೆ. 

Mettur dam filling Tamil Nadu CM instructs to release water gvd

ಚೆನ್ನೈ (ಜು.29): ಕಾವೇರಿ ನದಿಗೆ ಅಡ್ಡಲಾಗಿ ತಮಿಳುನಾಡಿನ ಮೆಟ್ಟೂರಿನಲ್ಲಿ ಕಟ್ಟಿರುವ ಅಣೆಕಟ್ಟಿಗೆ ಕರ್ನಾಟಕ ಭಾರೀ ಪ್ರಮಾಣದ ನೀರು ಬಿಡುತ್ತಿರುವ ಕಾರಂ, ತಮಿಳುನಾಡು ಸರ್ಕಾರ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡುವಂತೆ ಭಾನುವಾರ ಆದೇಶಸಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ದುರೈಮುರುಗನ್ ಹಾಗೂ ಇತರರು ಪರಿಸ್ಥಿತಿಯನ್ನು ಅವಲೋಕಿಸಲಾಯಿತು. ಆಗ ನೀರು ಬಿಡುವಂತೆ ಸೂಚಿಸಲಾಯಿತು.

ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕರ್ನಾಟಕವು 1.48 ಲಕ್ಷ ಕ್ಯುಸೆಕ್ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಿದೆ. ಈ ನಿಟ್ಟಿನಲ್ಲಿ 120 ಅಡಿ ಎತ್ತರದ ಮೆಟ್ಟೂರು ಅಣೆಕಟ್ಟಿನ ನೀರಿನ ಮಟ್ಟ 109.20 ಅಡಿಗೆ ಏರಿದ್ದು, ಅಣೆಕಟ್ಟು ತುಂಬಲು ಕೇವಲ 11 ಅಡಿಗಳಷ್ಟೇ ಬಾಕಿ ಇದೆ. ಆದ್ದರಿಂದ ಮೆಟ್ಟೂರು ಜಲಾಶಯದಿಂದ ತಕ್ಷಣವೇ ನೀರನ್ನು ಹರಿಬಿಡಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್‌ ಅಧಿಕಾರಿಗಳಿಗೆ ನಿರ್ದೇಶಿಸಿದರು.

ವಾಲ್ಮೀಕಿ, ಮುಡಾ ಅಕ್ರಮ: ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆ.3ರಿಂದ ಬಿಜೆಪಿ-ಜೆಡಿಎಸ್ 7 ದಿನಗಳ ಪಾದಯಾತ್ರೆ

ತಮಿಳ್ನಾಡು ವ್ಯಾಪಾರ ಮಳಿಗೆಗಳಲ್ಲಿ ತಮಿಳು ನಾಮಫಲಕ: ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ತಮ್ಮ ಅಂಡಿಯ ಮುಂದೆ ತಮಿಳು ನಾಮಫಲಕಗಳನ್ನು ಅಳವಡಿಸಬೇಕು ಎಂದು ಮುಖ್ಯಮಂತ್ರಿ ಎಮ್‌.ಕೆ ಸ್ಟಾಲಿನ್ ಮಂಗಳವಾರ ಕರೆ ನೀಡಿದ್ದಾರೆ. ವರ್ತಕರ ಕಲ್ಯಾಣ ಮಂಡಳಿಯ ಸದಸ್ಯರ ಸಭೆಯಲ್ಲಿ ಅವರು ಈ ಮನವಿ ಮಾಡಿದ್ದಾರೆ.

‘ಇತ್ತೀಚೆಗೆ ನನ್ನನ್ನು ಬೇಟಿಯಾದ ವರ್ತಕರ ಮಂಡಳಿಯ ಅಧ್ಯಕ್ಷ ಎ.ಎಮ್‌.ವಿಕ್ರಮರಾಜ ಹಾಗೂ ಇತರೆ ಪದಾಧಿಕಾರಿಗಳು ತಮಿಳುನಾಡಿನ ಎಲ್ಲಾ ಅಂಗಡಿಗಳಿಗೆ ತಮಿಳು ಭಾಷೆಯ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಇಂತಹ ನಿರ್ಣಯಗಳನ್ನು ಸ್ವಯಂಪ್ರೇರಿತರಾಗಿ ತೆಗೆದುಕೊಳ್ಳಬೇಕೇ ಹೊರತು ಸರ್ಕಾರ ಹೇಳಿ ಮಾಡಿಸುವಂತಿರಬಾರದು’ ಎಂದು ಸ್ಟಾಲಿನ್ ಹೇಳಿದ್ದಾರೆ.

ರಾಜ್ಯದಲ್ಲಿ ಹೂಡಿಕೆಗೆ ಭಯದ ವಾತಾವರಣ: ಸಚಿವೆ ನಿರ್ಮಲಾ ಸೀತಾರಾಮನ್ ಕಿಡಿ

ಮಂಡಳದ ನೇತೃತ್ವದಲ್ಲಿ ನಡೆದ ಕಾರ್ಯಕ್ರಮಗಳ ಕುರಿತು ಮಾತನಾಡಿದ ಅವರು, ‘ಈ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದ 8,883 ವರ್ತಕರು ವಿವಿಧ ರೀತಿಯ ಆರ್ಥಿಕ ನೆರವು ಪಡೆದಿದ್ದು, 3.29 ಕೋಟಿ ರೂ. ನೆರವು ನೀಡಲಾಗಿದೆ. ಇಂತಹ ಕಾರ್ಯಗಳು ಮುಂದುವರೆಯಲಿವೆ’ ಎಂದು ಹೇಳಿದರು. ಇತ್ತೀಚೆಗೆ ಕರ್ನಾಟಕದಲ್ಲಿ ಕನ್ನಡದಲ್ಲಿ ನಾಮಫಲಕ ಅಳವಡಿಸುವುದನ್ನು ಕರ್ನಾಟಕ ಸರ್ಕಾರ ಕಡ್ಡಾಯ ಮಾಡಿತ್ತು. ಅದಕ್ಕೆ ಕೆಲವೆಡೆ ವಿರೋಧ ವ್ಯಕ್ತವಾಗಿತ್ತು ಎಂಬುದು ಗಮನಾರ್ಹ.

Latest Videos
Follow Us:
Download App:
  • android
  • ios