ಭುಜ್[ಫೆ. 18]  ‘ಋತುಮತಿಯಾಗಿದ್ದ ವೇಳೆ ಮಹಿಳೆ ತಯಾರಿಸಿದ ಅಡುಗೆ ಒಮ್ಮೆ ಸೇವಿಸಿದರೂ ಸಾಕು, ಮುಂದಿನ ಜನ್ಮದಲ್ಲಿ ಎತ್ತಾಗಿ ಹುಟ್ಟುತ್ತೀರಿ..! ಇನ್ನು ಮುಟ್ಟಾದ ಹೆಣ್ಣು ಅಡುಗೆ ತಯಾರಿ ಕಾರ್ಯದಲ್ಲಿ ಭಾಗಿಯಾದರೆ, ಆಕೆ ಮುಂದಿನ ಜನ್ಮದಲ್ಲಿ ನಾಯಿಯಾಗಿ ಜನ್ಮ ತಾಳುತ್ತಾಳೆ’ ಇಂಥದ್ದೊಂದು ಹೇಳಿಕೆ ನೀಡಿದ ಸ್ವಾಮೀಜಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪ್ರವಚನ ಮಾಡುವ ವೇಳೆ  ಸ್ವಾಮಿ ಕೃಷ್ಣ ಸ್ವರೂಪ ದಾಸ್‌ ಜೀ ಮಹಾರಾಜ್ ಹೀಗೆ ಹೇಳಿದ್ದು ಭರಪೂರ ಟೀಕೆ ಎದುರಿಸಬೇಕಾಗಿ ಬಂದಿದೆ. ಗುಜರಾತ್‌ನ ಭುಜ್‌ನಲ್ಲಿ ಇರುವ ಸ್ವಾಮಿ ನಾರಾಯಣ ಭುಜ್ ಸ್ವಾಮೀಜಿ ಕೊಟ್ಟ ಹೇಳಿಕೆ ದೇಶಾದ್ಯಂತ ಸುದ್ದಿ ಮಾಡುತ್ತಿದೆ.

ಮಗಳಿಗೆ ಮಾತ್ರ ಅಲ್ಲ, ಮಗನಿಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ಯುವತಿಯರು ಮುಟ್ಟಾಗಿದ್ದಾರೋ ಇಲ್ಲವೋ ಎಂದು ಪರಿಶೀಲಿಸಲು ಅವರ ಒಳಉಡುಪು ತೆಗೆಸಿದ್ದು ಇದೇ ದೇವಾಲಯದ  ಅಧೀನದಲ್ಲಿರುವ ಕಾಲೇಜಿನಲ್ಲಿ! ಸ್ವಾಮೀಜಿ ಗುಜರಾತಿ ಭಾಷೆಯಲ್ಲಿ ಪ್ರವಚನ ನೀಡಿದ್ದ ವಿಡಿಯೋ ವೈರಲ್ ಆಗುತ್ತಿದೆ.

ಕೆಲವೊಮ್ಮೆ ಶಾಸ್ತ್ರದಲ್ಲಿ ಇರುವುದನ್ನೆಲ್ಲ ಹೇಳಲು ಸಾಧ್ಯವಿಲ್ಲ. ಆದರೆ ನಿಮಗೆ ಅರ್ಥ ಮಾಡಿಸಬೇಕು ಎಂದರೆ ಅವೆಲ್ಲವನ್ನು ಅನಿವಾರ್ಯವಾಗಿ ಹೇಳಲೇ ಬೇಕಾಗುತ್ತದೆ. ಮಹಿಳೆಯರು ಮುಟ್ಟಾದಾಗ ಅಡುಗೆ ಮಾಡಲೇಬಾರದು. ಒಂದು ವೇಳೆ ಇದೆಲ್ಲವನ್ನು ಮೀರಿ ಅಡುಗೆ ಮಾಡಿದ್ದೇ ಆದಲ್ಲಿ ಮುಂದಿನ ಜನ್ಮದಲ್ಲಿ ನಾಯಿಯಾಗಿ ಹುಟ್ಟುತ್ತೀರಾ ಎಂದು ಎಚ್ಚರಿಕೆ ನೀಡಿದ್ದಾರೆ.