Asianet Suvarna News Asianet Suvarna News

ಜು. 9ರಿಂದ ಚಿತ್ರಕೂಟದಲ್ಲಿ ರಾಜ್ಯಮಟ್ಟದ RSS ಪ್ರಚಾರಕರ ಸಭೆ

* RSS ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್

* ಜುಲೈ 9 ರಿಂದ ಆರಂಭಗೊಳ್ಳಲಿದೆ ಈ ಸಭೆ

* ಆನ್‌ಲೈನ್‌ ಸಭೆಗೆ ಆದ್ಯತೆ ಕೊಟ್ಟ ಆರ್‌ಎಸ್‌ಎಸ್‌

* ಕೊರೋನಾ ಮೂರನೇ ಅಲೆಯ ಬಗ್ಗೆ ಚರ್ಚೆ

Meeting of state level RSS Pracharaks Organised In Chitrakoot From July 9 pod
Author
Bangalore, First Published Jul 9, 2021, 10:11 AM IST

ಚಿತ್ರಕೂಟ(ಜು.09): ಆರ್‌ಎಸ್‌ಎಸ್‌ನ ಎಲ್ಲಾ ರಾಜ್ಯಮಟ್ಟದ ಪ್ರಚಾರಕರ (ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್) ಸಭೆಯನ್ನು ಚಿತ್ರಕೂಟದಲ್ಲಿ ಆಯೋಜಿಸಲಾಗಿದೆ. ಸಾಮಾನ್ಯವಾಗಿ, ಈ ಸಭೆ ಪ್ರತಿವರ್ಷ ಜುಲೈನಲ್ಲಿ ನಡೆಯುತ್ತದೆ ಆದರೆ ಕಳೆದ ವರ್ಷ ಕೊರೋನಾದಿಂದ ಜಾರಿಯಲ್ಲಿದ್ದ ನಿಯಮಗಳಿಂದಾಗಿ ಚಿತ್ರಕೂಟದಲ್ಲಿ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ವರ್ಷ ಈ ಸಭೆ ಚಿತ್ರಕೂಟದಲ್ಲಿ ಆಯೋಜಿಸಲಾಗಿದೆ. ಕೊರೋನಾ ನಿರ್ಬಂಧಗಳು ಸಂಪೂರ್ಣವಾಗಿ ತೆಗೆದು ಹಾಕಿಲ್ಲ, ಇನ್ನೂ ಹಲವಾರು ನಿಯಮಗಳು ಜಾರಿಯಲ್ಲಿವೆ. ಹೀಗಾಗಿ ಈ ನಿಯಮಗಳ ಪಾಲನೆಗಾಗಿ ಸಭೆಯಲ್ಲಿ ದೈಹಿಕವಾಗಿ ಭಾಗವಹಿಸುವವರ ಸಂಖ್ಯೆಗೆ ಮಿತಿ ಹೇರಲಾಗಿದ್ದು, ಅನೇಕರು ಡಿಜಿಟಲ್ ವೇದಿಕೆ ಮೂಲಕ ಪಾಲ್ಗೊಳ್ಳಲಿದ್ದಾರೆ. 


ಜುಲೈ 9-10 ರಂದು, 11 ಕ್ಷೇತ್ರಗಳ (ಪ್ರದೇಶಗಳು) ಕ್ಷೇತ್ರ ಮತ್ತು ಸಹ ಕ್ಷೇತ್ರ ಪ್ರಚಾರಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಐವರು ಸಹಾ ಸರ್ಕಾರ್ಯವಾಹ್ (ಜಂಟಿ ಪ್ರಧಾನ ಕಾರ್ಯದರ್ಶಿಗಳು) ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಎಲ್ಲಾ ಏಳು ‘ಕಾರ್ಯಾ ವಿಭಾಗ’ಗಳ‘ ಪ್ರಮುಖ್ ’ಮತ್ತು‘ ಸಹ-ಪ್ರಮುಖ್ ’ಕೂಡಾ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಜುಲೈ 11 ರ ಸಭೆಯಲ್ಲಿ ಎಲ್ಲಾ 45 ಪ್ರಾಂತ್ಯಗಳ ಪ್ರಾಂತ್ಯ ಪ್ರಚಾರಕ್ ಮತ್ತು ಸಹ ಪ್ರಾಂತ್ಯ ಪ್ರಚಾರಕರು ಆನ್‌ಲೈನ್ ಮೂಲಕ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ದೇಶದಲ್ಲಿ RSSನ ಒಟ್ಟು  45 ಪ್ರಾಂತ್ಯಗಳಿವೆ. ಇನ್ನು ಜುಲೈ 12 ರಂದು ವಿವಿಧ ಸಂಸ್ಥೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿ (ಎಲ್ಲಾ ಭಾರತ್ ಸಂಘಟನಾ ಕಾರ್ಯದರ್ಶಿಗಳು) ಆನ್‌ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಈ ಸಭೆಯು ಪ್ರಾಥಮಿಕವಾಗಿ ಆರ್‌ಎಸ್‌ಎಸ್‌ನೊಳಗಿನ ವಿಚಾರಗಳ ಮೇಲೆ ಕೇಂದ್ರೀಕರಿಸಲಿವೆ. ಅಲ್ಲದೇ ಕೊರೋನಾದಂತಹ ವಿಷಮ ಕಾಲದಲ್ಲಿ ಆರ್‌ಎಸ್‌ಎಸ್‌ ಸ್ವಯಂ ಸೇವಕರು ದೇಶಾದ್ಯಂತ ಮಾಡಿದ ಸೇವಾ ಕಾರ್ಯಗಳ ವಿಮರ್ಶೆಯ ಪರಿಶೀಲನೆ ನಡೆಸಲಿವೆ. ಜೊತೆಗೆ ಕೊರೋನಾ ಮೂರನೇ ಅಲೆಯ ಸಾಧ್ಯತೆಯ ಮೌಲ್ಯಮಾಪನವನ್ನೂ ನಡೆಸಲಿದ್ದು ಮತ್ತು ಅದಕ್ಕೆ ಅನುಗುಣವಾಗಿ ಮಾಡಬೇಕಾದ ಅಗತ್ಯ ಸಿದ್ಧತೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ವೇಳೆ, ತರಬೇತಿ ಅಗತ್ಯತೆಗಳು ಮತ್ತು ಅಗತ್ಯವಿರುವ ಇತರ ವ್ಯವಸ್ಥೆಗಳನ್ನು ಮೌಲ್ಯಮಾಪನವನಬ್ನೂ ನಡೆಸಲಾಗುತ್ತದೆ ಎಂದು ಆರ್‌ಎಸ್‌ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 

Follow Us:
Download App:
  • android
  • ios