ಕೋಲ್ಕತ್ತಾ(ಏ.14): 77 ವರ್ಷ ವೃದ್ಧನ ಕತೆ ಸದ್ಯ ಸೋಶಿಯಲ್ ಮೀಡಿಯಾಆದಲ್ಲಿ ಆಭರೀ ವೈರಲ್ ಆಗಿದೆ. ಅವರ ಕತೆ ಓದಿದವರೆಲ್ಲರೂ ಭಾವುಕರಾಗಿದ್ದಾರೆ. ಕೋಲ್ಕತ್ತಾದ ಸ್ವಪನ್ ಸೇಟ್‌ರವರ ಈ ಕತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್‌ ಸೃಷ್ಟಿಸಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 2002ರಲ್ಲಿ ಈ ವೃದ್ಧನ ಪತ್ನಿಗೆ ಗರ್ಭಕೋಶದ ಕ್ಯಾನ್ಸರ್‌ ಇರುವುದು ತಿಳಿದು ಬಂದಿದೆ. ಹೀಗಿರುವಾಗ ಪತ್ನಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲದಾಗ ಅವರು ದೇಶಾದ್ಯಂತ ಯಾತ್ರೆ ನಡೆಸಿ ವಯೋಲಿನ್ ಬಾರಿಸಲಾರಂಭಿಸಿದ್ದರು. ಸೋಶಿಯಲ್ ಮಿಡಿಯಾದಲ್ಲಿ ಅವರು ವಯೋಲಿನ್ ಬಾರಿಸುತ್ತಿರುವ ವಿಡಿಯೋ ಕೂಡಾ ವೈರಲ್ ಆಗಿದೆ.

ರಸ್ತೆ ಬದಿ ವಯೋಲಿನ್ ಬಾರಿಸಿಯೇ ಪತ್ನಿಗೆ ಚಿಕಿತ್ಸೆ

ಸ್ವಪನ್ ಸೇಟ್‌ ಓರ್ವ ಚಿತ್ರಗಾರ, ಶಿಲ್ಪಿ ಹಾಗೂ ವಯೋಲಿನ್ ವಾದಕರಾಗಿದ್ದಾರೆ. ಹೀಗಿರುವಾಗ ಅವರು ತಮ್ಮ ಪತ್ನಿಯ ಚಿಕಿತ್ಸೆಗೆ ಹಣ ಹೊಂದಿಸಲು ತಮ್ಮ ಕಲೆಯನ್ನು ಬಳಸಿದ್ದಾರೆ. ಸುಮಾರು 17 ವರ್ಷ ಇದನ್ನು ಮುಂದುವರೆಸಿದ್ದಾರೆ. 2019ರಲ್ಲಿ ಅವರ ಪತ್ನಿಯ ಚಿಕಿತ್ಸೆ ಪೂರ್ಣಗೊಂಡು ಗುಣಮುಖರಾಗಿದ್ದಾರೆ. ಆದರೆ ಸೇಟ್‌ ವಯೋಲಿನ್ ನುಡಿಸುವುದನ್ನು ನಿಲ್ಲಿಸಲಿಲ್ಲ. ಮತ್ತೆ ತಮ್ಮ ಯಾತ್ರೆ ಮುಂದುವರೆಸಿದ್ದಾರೆ. ಆದರೆ ಈ ಬಾರಿ ಹಣವನ್ನು ತಮಗಾಗಿ ಅಥವಾ ತಮ್ಮ ಹೆಮಡತಿಗಾಗಿ ಅಲ್ಲ, ಬದಲಾಗಿ ಬಡ, ಅಗತ್ಯವಿರುವವರಿಗಾಗಿ ಕೂಡಿಸಲಾರಂಭಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಕೋಲ್ಕತ್ತಾದಲ್ಲಿ ಶಾಪಿಂಗ್ ಮಾಲ್ ಒಂದರ ಹೊರಗೆ ವಯೋಲಿನ್ ನುಡಿಸುತ್ತಿರುವ ಸ್ವಪನ್ ಸೇಟ್‌ ವಿಡಿಯೋ ಒಂದು ಈ ತಿಂಗಳ ಆರಂಭದಲ್ಲಿ ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು. ಕ್ಯಾಪ್ಶನ್‌ನಲ್ಲಿ ಸ್ವಪನ್‌ ಸೇಟ್‌ ಚಿತ್ರಕಾರ, ಶಿಲ್ಪಿ ಹಾಗೂ ವಯೋಲಿನ್ ವಾದಕರಾಗಿದ್ದಾರೆ. ಅವರ ಸ್ಟುಡಿಯೋ ಬಲರಾಮ್‌ ಡೇ ಸ್ಟ್ರೀಟ್‌ ಕೋಲ್ಕತ್ತಾದಲ್ಲಿದೆ. 2002 ರಲ್ಲಿ ಅವರ ಪತ್ನಿಗೆ ಗರ್ಭಕೋಶದ ಕ್ಯಾನ್ಸರ್ ಇದೆ ಎಂಬುವುದು ತಿಳಿದು ಬಂತು. ಈ ವೇಳೆ ಅವರು ಪತ್ನಿಗೆ ಚಿಕಿತ್ಸೆ ಕೊಡಿಸಲು, ಹಣ ಒಗ್ಗೂಡಿಸಲು ತಮ್ಮ ಕಲೆಯನ್ನು ಬಳಸಿಕೊಂಡಿದ್ದಾರೆ. ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿ ವಯೋಲಿನ್ ನುಡಿಸಿ, ಚಿತ್ರ ಬಿಡಿಸಿ ಹಣ ಒಗ್ಗೂಡಿಸಿದ್ದಾರೆ ಎಂದು ಬರೆದಿದೆ.

ಈ ಹದಿನೇಳು ವರ್ಷದ ಸಂಘರ್ಷದ ಬಳಿಕ ಅವರ ಹೆಂಡತಿ ಗುಣಮುಖರಾಗಿದ್ದಾರೆ. ಆದರೆ ಸೇಟ್‌ ಈಗಲೂ ಬೇರೆ ಬೆರೆ ಕಡೆ ತೆರಳಿ ವಯೋಲಿನ್ ನುಡಿಸುತ್ತಾರೆ, ಜನರಿಗೆ ಮನೋರಂಜನೆ ನಿಡುತ್ತಾರೆ. ತಮ್ಮ ವಯೋಲಿನ್ ಕೇಳಲು ಯಾರೆಲ್ಲಾ ನಿಲ್ಲುತ್ತಾರೋ ಅವರೆಲ್ಲರಿಗೂ ಸೇಟ್‌ ಫ್ಲೈಯಿಂಗ್ ಕಿಸ್‌ ಕೂಡಾ ನೀಡುತ್ತಾರೆ.

ಅವರ ಈ ಮನಮುಟ್ಟುವ ಕತೆಯನ್ನು ಟ್ವಿಟರ್‌ನಲ್ಲಿ  'I Love Siliguri ಹೆಸರಿನ ಪೇಜ್‌ನಲ್ಲಿ ಶೇರ್ ಮಾಡಲಾಗಿದೆ. ಜೊತೆಗೆ ಅವರ ಮ್ಯೂಸಿಕ್ ಸಿಡಿ ಕೂಡಾ ಲಭ್ಯವಿದೆ ಎನ್ನಲಾಗಿದೆ. ಒಂದು ವೇಳೆ ನೀವು ಅವರಿಗೆ ಸಪೋರ್ಟ್‌ ಮಾಡಲಿಚ್ಛಿಸಿದರೆ ನೀವೂ ಖರೀದಿಸಿ ಎಂದು ಬರೆಯಲಾಗಿದೆ.