Asianet Suvarna News Asianet Suvarna News

ಮೊದಲ ಪ್ರಕರಣದಲ್ಲೇ ಗೆದ್ದ ನಿರ್ಭಯಾ ವಕೀಲೆ ಸೀಮಾ!

ಮೊದಲ ಪ್ರಕರಣದಲ್ಲೇ ಗೆದ್ದ ನಿರ್ಭಯಾ ವಕೀಲೆ ಸೀಮಾ| ಯಾವುದೇ ಶುಲ್ಕ ಪಡೆಯದೇ ನಿರ್ಭಯಾ ಪರ ಹೋರಾಟ

Meet Seema Kushwaha The Lawyer Who Fought Alongside Nirbhaya Mother For 7 Long Years
Author
Bangalore, First Published Mar 21, 2020, 9:13 AM IST

ನವದೆಹಲಿ(ಮಾ.21): ನಿರ್ಭಯಾ ರಕ್ಕಸರು ಏಳು ವರ್ಷಗಳ ಬಳಿಕ ಗಲ್ಲಿಗೇರಿದ್ದಾರೆ. ಆ ಮೂಲಕ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ಈ ದೀರ್ಘ ಅವಧಿಯ ಹೋರಾಟಲ್ಲಿ ನಿರ್ಭಯಾ ತಾಯಿ ಆಶಾ ದೇವಿಗೆ ಜತೆಯಾಗಿದ್ದವರು ವಕೀಲೆ ಸೀಮಾ ಕುಶ್ವಾಹ.

2014ರಿಂದ ಈ ಪ್ರಕರಣದಲ್ಲಿ ವಕಾಲತ್ತು ವಹಿಸಿದ ಯುವ ವಕೀಲೆ, ದುರುಳರನ್ನು ನೇಣುಗಂಬ ಏರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಅವರ ಮೊದಲ ಪ್ರಕರಣವಾಗಿದ್ದು, ದೇಶವೇ ಗಮನಿಸುವಂತೆ ಗೆದ್ದು ಬೀಗಿದ್ದಾರೆ. ಯಾವುದೇ ಶುಲ್ಕ ಪಡೆಯದೇ, ದೊಡ್ಡ ಸವಾಲೊಂದನ್ನು ಅತಿ ಜಯಿಸಿದ್ದಾರೆ.

ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿರುವ ಸೀಮಾ, ಪ್ರಕರಣ ನಡೆದಾಗ ನ್ಯಾಯಾಲಯದಲ್ಲಿ ತರಬೇತಿ ಪಡೆಯುತ್ತಿದ್ದರು. ಬಳಿಕ ನಿರ್ಭಯಾ ಪ್ರಕರಣದ ಪರ ವಕಾಲತ್ತಿಗೆ, ಅತ್ಯಾಚಾರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡುವ ಜ್ಯೋತಿ ಲೀಗಲ್‌ ಟ್ರಸ್ಟ್‌ ಸೇರಿದ್ದರು.

ಐಎಎಸ್‌ಗೆ ತಯಾರಿ ನಡೆಸುತ್ತಿರುವ ಸೀಮಾ, ಸದ್ಯ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕರಣದಲ್ಲಿ ಹೆಜ್ಜೆ ಹೆಜ್ಜೆಗೂ ಆಶಾ ದೇವಿ ಜತೆಗಿದ್ದ ಸೀಮಾ, ನಿರ್ಭಯಾ ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ.

Follow Us:
Download App:
  • android
  • ios