Asianet Suvarna News Asianet Suvarna News

ಬೊಂಡಾ ಸಮುದಾಯದಿಂದ ನೀಟ್ ಪಾಸ್ ಮಾಡಿದ ಮೊದಲಿಗ, ಕೇಂದ್ರದಿಂದ 1.2 ಲಕ್ಷ ರೂ ಫೀಸ್ ಮನ್ನ!

ಬೊಂಡಾ ಅತೀ ದುರ್ಬಲ ಬುಡಕಟ್ಟು ಸಮುದಾಯದಿಂದ ಬಂದು ನೀಟ್ ಪರೀಕ್ಷೆ ಪಾಸ್ ಮಾಡಿದ ಮೊದಲಿಗ ಅನ್ನೋ ಹೆಗ್ಗಳಿಕೆಗೆ 19ರ ಯುವಕ ಪಾತ್ರನಾಗಿದ್ದಾನೆ. ಈ ಸಾಧನೆಯೇ ಹಲವರಿಗೂ ಸ್ಪೂರ್ತಿಯಾಗಿದೆ.

Meet 19 year old Mangal muduli become first bonda tribal to clear neet in first attempt Odisha ckm
Author
First Published Sep 1, 2024, 8:13 PM IST | Last Updated Sep 1, 2024, 8:16 PM IST

ಒಡಿಶಾ(ಸೆ.01) ಬೊಂಡಾ ಅತೀ ದುರ್ಬಲವಾದ ಬುಡಕಟ್ಟು ಸಮುದಾಯ. ಈ ಸಮುದಾಯದಲ್ಲಿ ಶಾಲೆಯ ಮೆಟ್ಟಿಲು ಹತ್ತಿದವರು ಬಿಡಿ ನೋಡಿದವರು ವಿರಳ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸೇರಿದಂತೆ ಎಲ್ಲಾ ರೀತಿಯಲ್ಲೂ ಈ ಸಮುದಾಯ ದುರ್ಬಲ. ಆದರೆ ಈ ಸಮುದಾಯದ 19ರ ಹರೆಯದ ಯುವಕ ಮಂಗಾಲ ಮುದುಲಿ ಇದೀಗ ನೀಟ್ ಪರೀಕ್ಷೆ ಪಾಸ್ ಮಾಡಿದ್ದಾರೆ. ನೀಟ್ ಪರೀಕ್ಷೆ ಪಾಸ್ ಮಾಡಿದ ಬೊಂಡಾ ಬುಡಕಟ್ಟು ಸಮುದಾಯದ ಮೊದಲಿಗ ಅನ್ನೋ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ಾದರೆ.

ಮಲ್ಕಾಂಗಿರಿ ಜಿಲ್ಲೆಯಲ್ಲಿ ಬೊಂಡಾ ಬುಡಕಟ್ಟು ಸಮುದಾಯ ಹೆಚ್ಚಾಗಿ ವಾಸವಿದೆ. ಈ ಸಮುದಾಯದ ಮಂಗಾಲ ಮುದುಲಿ ಓದಿನಲ್ಲಿ ಮುಂದಿದ್ದ. ಇತರ ವಿದ್ಯಾರ್ಥಿಗಳಿಗಿಂತ ಉತ್ತಮವಾಗಿ ಅಂಕಗಳನ್ನು ಪಡೆದಿದ್ದ. ಹೀಗಾಗಿ ಶಾಲಾ ಟೀಚರ್ ಸಲಹೆಯಂತೆ ಈತ ನೀಟ್ ಪರೀಕ್ಷೆಗೆ ತಯಾರಿ ಆರಂಭಿಸಿದ್ದ. ಶೈಕ್ಷಣಿ ಅಂಕ, ಅರ್ಹತೆಯಿಂದ ಕೇಂದ್ರ ಸರ್ಕಾರ ಈತನ ಕೋಚಿಂಗ್‌ಗೆ ಆರ್ಥಿಕ ನೆರವು ನೀಡಿತ್ತು. ಬಲೇಶ್ವರದಲ್ಲಿ ಕೋಚಿಂಗ್ ಸೆಂಟರ್ ಶುಲ್ಕ 1.2 ಲಕ್ಷ ರೂಪಾಯಿಯನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿತ್ತು.

ದಟ್ಟಾರಣ್ಯದಲ್ಲಿರೋ ಆದಿವಾಸಿಗಳ ಭೇಟಿಗೆ  ಹೋದ ಆಸ್ಟ್ರೇಲಿಯಾ ಯೂಟ್ಯೂಬರ್‌ಗೆ ಆಯ್ತು  ವಿಚಿತ್ರ ಅನುಭವ  

ಶ್ರಮವಹಿಸಿ ಮಂಗಾಲ ಮುದುಲಿ ಇದೀಗ ನೀಟ್ ಪರೀಕ್ಷೆ ಪಾಸ್ ಮಾಡಿದ್ದಾನೆ. ಬುಡುಕಟ್ಟು ಸಮುದಾಯಗಳ ಪೈಕಿ 261ನೇ ಸ್ಥಾನ ಪಡೆದಿದ್ದಾನೆ. ಬೆರ್ಹಾಂಪುರದಲ್ಲಿನ ಎಂಕೆಸಿಜಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವ್ಯಾಸಾಂಗಕ್ಕೆ ಮುದುಲಿ ತೆರಳುತ್ತಿದ್ದಾನೆ. ಇದೀಗ ಬೊಂಡಾ ಸಮುದಾಯದ ಮೊದಲ ವೈದ್ಯ ಅನ್ನೋ ಕಿರೀಟ ಗಿಟ್ಟಿಸಿಕೊಳ್ಳುವ ಉತ್ಸಾಹದಲ್ಲಿದ್ದಾನೆ.

ನೀಟ್ ಪರೀಕ್ಷೆ ಪಾಸ್ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿರುವ ಮುದುಲಿ ಕಠಿಣ ಪರಿಶ್ರಮದ ಮೂಲಕ ಎಂಬಿಬಿಎಸ್ ಅತ್ಯುತ್ತಮ ಅಂಕದೊಂದಿಗೆ ಪೊರೈಸುವುದಾಗಿ ಹೇಳಿದ್ದಾನೆ. ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡಿರುವುದು ಅತೀವ ಸಂತಸ ತಂದಿದೆ. ನನ್ನ ಈ ಯಶಸ್ಸು ಕುಟುಂಬಕ್ಕೆ ಹಾಗೂ ನನ್ನ ಶಿಕ್ಷಕ ದಾಸ್ ಅವರಿಗೆ ಸಲ್ಲಬೇಕು. ನಮ್ಮ ಕುಟುಂಬದಲ್ಲಿ, ಸಮುದಾಯದಲ್ಲಿ ಕಾಲೇಜು ತೆರಳಿದವರೇ ಇಲ್ಲ. ಆದರೆ ನನ್ನ ಪೋಷಕರು ಪ್ರೋತ್ಸಾಹ ನೀಡಿದ್ದಾರೆ. ಹುರಿದುಂಬಿಸಿದ್ದಾರೆ. ಜೊತೆಗೆ ಶಿಕ್ಷಕರ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ ಎಂದು ಮುದುಲಿ ಹೇಳಿದ್ದಾನೆ.

ಇತ್ತ ಮುದುಲಿ ಶಿಕ್ಷಕ ಉತ್ಕಾಲ್ ಕೇಶರಿ ದಾಸ್ ಕೂಡ ಹರ್ಷ ವ್ಯಕ್ತಪಡಿಸಿದ್ದಾನೆ. ಮುದುಲಿ ಓದಿನಲ್ಲಿ ಮುಂದಿದ್ದ. ಹೀಗಾಗಿ ನೀಟ್ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಿದ್ದೆ. ಕೇಂದ್ರ ಸರ್ಕಾರ ಈತನ ಕೋಚಿಂಗ್ ಶುಲ್ಕ ಮನ್ನಾ ಮಾಡಿತ್ತು. ಇದು ಕೂಡ ಮುದುಲಿಗೆ ನೆರವಾಯಿತು. ಇದೀಗ ಸಾಧನೆಯಲ್ಲಿ ಹಾದಿಯಲ್ಲಿರುವ ಮುದುಲಿ ಯಶಸ್ವಿಯಾಗಲಿದ್ದಾನೆ ಅನ್ನೋ ವಿಶ್ವಾಸಲಿದೆ ಎಂದು ದಾಸ್ ಹೇಳಿದ್ದಾರೆ. 

ಬೇರೆ ಜನಾಂಗದ ಗಂಡಸ್ರ ಕಣ್ಣು ಬೀಳದಿರಲು ಈ ಬುಡಕಟ್ಟು ಮಹಿಳೆ ಕುತ್ತಿಗೆಗೆ ಬಿತ್ತು ರಿಂಗ್

Latest Videos
Follow Us:
Download App:
  • android
  • ios