ಉತ್ತರ ಪ್ರದೇಶದ ಸಂಭಲ್‌ನಲ್ಲಿ ಮಹಿಳೆಯೊಬ್ಬರು 5 ದಿನಗಳ ಅಂತರದಲ್ಲಿ ನಾಲ್ಕು ಮಕ್ಕಳಿಗೆ ಸಹಜ ಹೆರಿಗೆ ಮೂಲಕ ಜನ್ಮ ನೀಡಿದ್ದಾರೆ. ದುರದೃಷ್ಟವಶಾತ್ ಮೊದಲ ಮಗು ಮೃತಪಟ್ಟಿದ್ದು, ಉಳಿದ ಮೂರು ಶಿಶುಗಳ ಪೈಕಿ ಒಂದು ಆರೋಗ್ಯವಾಗಿದ್ದು, ಇಬ್ಬರಿಗೆ ಚಿಕಿತ್ಸೆ ಮುಂದುವರೆದಿದೆ.

5 ದಿನದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಬರೇಲಿ (ಮೇ.17): ಮಹಿಳೆಯೊಬ್ಬರು 5 ದಿನಗಳ ಅವಧಿಯಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಉತ್ತರ ಪ್ರದೇಶದ ಸಂಭಲ್‌ನಲ್ಲಿ ನಡೆದಿದೆ. ದುರದೃಷ್ಟವಶಾತ್‌ ಮೊದಲ ಶಿಶು ಸಾವನ್ನಪ್ಪಿದೆ. ಉಳಿದ 3 ಶಿಶುಗಳಲ್ಲಿ ಒಂದು ಆರೋಗ್ಯವಾಗಿದ್ದು, ಮತ್ತೆರಡಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ಕು ಮಕ್ಕಳು ಸಹಜ ಹೆರಿಗೆ!

ಎಲ್ಲಾ ನಾಲ್ಕು ಮಕ್ಕಳು ಕೂಡಾ ಸಹಜ ಹೆರಿಗೆ ಮೂಲಕವೇ ಜನ್ಮ ತಾಳಿದ್ದು ಕೂಡಾ ವಿಶೇ಼ಷ.

ಟಿಎಂಯು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ

ಅಮೀನಾ ಮೇ 9ರಂದು ಮೊರದಾಬಾದ್‌ನ ಟಿಎಂಯು ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಅದು 710 ಗ್ರಾಂ ತೂಕವಿತ್ತು. 5 ದಿನಗಳ ಬಳಿಕ ಮೇ 14ರಂದು ಪುನಃ 1 ಗಂಡು ಹಾಗೂ 2 ಹೆಣ್ಣುಮಕ್ಕಳಿಗೆ ಜನ್ಮವಿತ್ತಿದ್ದಾರೆ. 

YouTube video player