Asianet Suvarna News Asianet Suvarna News

Surgical Strikes Proof Row : ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ಕೇಸ್ ದಾಖಲಿಸಿದೆ ಅಸ್ಸಾಂ ಪೊಲೀಸ್!

ಸರ್ಜಿಕಲ್ ಸ್ಟ್ರೈಕ್ ಕುರಿತಾದ ವಿಡಿಯೋ ಸಾಕ್ಷಿ ನೀಡಿದ ಅಸ್ಸಾಂ ಮುಖ್ಯಮಂತ್ರಿ
ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ಕೇಸ್ ದಾಖಲಿಸಿದ ಅಸ್ಸಾಂ ಪೊಲೀಸ್
ಕೆಸಿ ಚಂದ್ರಶೇಖರ್ ರಾವ್ ದೇಶದ್ರೋಹಿಯಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ
 

Assam Police is expected to register a case against Telangana Chief Minister K Chandrashekhar Rao for Surgical Strikes Proof Comments san
Author
Bengaluru, First Published Feb 15, 2022, 6:29 PM IST

ಗುವಾಹಟಿ (ಫೆ. 15): ಭಾರತೀಯ ಸೇನೆ (Indian Army), ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) (Pakistan occupied Kashmir) ಭಯೋತ್ಪಾದಕ ತಾಣಗಳ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗಳ ಸಾಕ್ಷಿ ಕೇಳಿದ್ದ ತೆಲಂಗಾಣ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್ (Telangana Chief Minister K Chandrashekhar Rao) ವಿರುದ್ಧ ಕೇಸ್ ದಾಖಲಿಸಲು ಅಸ್ಸಾಂ ಪೊಲೀಸ್ (Assam Police) ಮುಂದಾಗಿದೆ. ಇಂಥ ಹೇಳಿಕೆಗಳನ್ನು ನೀಡುವ ಮೂಲಕ ದೇಶವಿರೋಧಿ ಭಾವನೆಗಳಿಗೆ ಬಲ ತುಂಬುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಮಂಗಳವಾರ ಹೇಳಿದೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಮುಖ್ಯಸ್ಥ ಕೆಸಿಆರ್ (TRS),  ಸೆಪ್ಟೆಂಬರ್ 2019 ರಲ್ಲಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರದ ಆದೇಶದಂತೆ ಸೇನೆಯು ನಡೆಸಿದ ಸರ್ಜಿಕಲ್ ಸ್ಟ್ರೈಕ್‌ಗಳ ಕುರಿತು ರಾಹುಲ್ ಗಾಂಧಿ ಸಾಕ್ಷಿ ಕೇಳಿದ್ದರು ರಾಹುಲ್ ಗಾಂಧಿಯ ಈ ಮಾತನ್ನು ತಾವು ಬೆಂಬಲಿಸುವುದಾಗಿ ಅವರು ಹೇಳಿದ್ದರು. 

“ಇವರ ಮನಸ್ಥಿತಿಗಳನ್ನೊಮ್ಮೆ ನೋಡಿ ಜನರಲ್ ಬಿಪಿನ್ ರಾವತ್  (General Bipin Rawat) ದೇಶದ ಹೆಮ್ಮೆ, ಅವರ ನೇತೃತ್ವದಲ್ಲಿ ಭಾರತ ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿತು, ರಾಹುಲ್ ಗಾಂಧಿ ದಾಳಿಯ ಪುರಾವೆ ಕೇಳಿದರು. ನೀವು ರಾಜೀವ್ ಗಾಂಧಿ ಅವರ ಮಗನೋ? ಅಲ್ಲವೋ? ಎಂದು ನಾವು ಯಾವಾಗಲಾದರೂ ಪುರಾವೆ ಕೇಳಿದ್ದೇವೆಯೇ? ನನ್ನ ಸೇನೆಯಿಂದ ಪುರಾವೆ ಕೇಳುವ ಯಾವ ಹಕ್ಕು ನಿಮಗಿದೆ? ಎಂದು ಉತ್ತರಾಖಂಡದಲ್ಲಿ ನೆದ ಸಾರ್ವಜನಿಕ ಸಭೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮ ಹೇಳಿದ್ದರು.
 


ಪಾಕಿಸ್ತಾನದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎಂದಾದಲ್ಲಿ, ಅದು ಮಾಡಿದೆ ಎಂದು ನೀವು ನಂಬಲೇಬೇಕು. ಇದರಲ್ಲಿ ವಿವಾದ ಎಲ್ಲಿಂದ ಬರುತ್ತದೆ. ನೀವು ಜನರಲ್ ಬಿಪಿನ್ ರಾವತ್ ಅವರನ್ನು ನಂಬವುದಿಲ್ಲವೇ? ಸ್ವತಃ ಅವರೇ ಭಾರತೀಯ ಸೇನೆ ಸರ್ಜಿಕಲ್ ಸ್ಟೈಕ್ ಮಾಡಿದೆ ಎಂದು ಹೇಳಿದ್ದಾರೆ. ಅದಕ್ಕೆ ನಿಮಗೆ ಏಕೆ ಪುರಾವೆ ನೀಡಬೇಕು. ನಮ್ಮ ಸೈನಿಕರಗೌರವವನ್ನು ಕಳೆಯಬೇಡಿ. ದೇಶಕ್ಕಾಗಿ ಜನರು ಪ್ರಾಣವನ್ನು ಅರ್ಪಿಸುತ್ತಿದ್ದಾರೆ. ಸೈನಿಕರು ತಮಗಾಗಿ ಜೀವಿಸುತ್ತಿಲ್ಲ, ನಮ್ಮೆಲ್ಲರ ರಕ್ಷಣೆಗಾಗಿ ಬದುಕಿದ್ದಾರೆ ಎಂದು ಹಿಮಾಂತ ಹೇಳಿದ್ದರು.

Rakesh Tikait : ಮತ್ತೊಬ್ಬ ಕಿಮ್ ಜಾಂಗ್ ಉನ್ ಜನರಿಗೆ ಬೇಕಾ?
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Jammu and Kashmir Lieutenant Governor Manoj Sinha) ಕೂಡ ಕೆಸಿಆರ್ ಹೇಳಿಕೆಯನ್ನು ಟೀಕಿಸಿದ್ದಾರೆ. "ಭಾರತೀಯ ಸೇನೆಯ ಶೌರ್ಯದ ಬಗ್ಗೆ ಯಾರಿಗೂ ಅನುಮಾನವಿಲ್ಲ... ಅಂತಹ ಜನರಿಗೆ ದೇವರು ಒಳ್ಳೆಯ ಬುದ್ದಿಯನ್ನು ನೀಡಲಿ, ಇದರಿಂದ ದೇಶ ಮತ್ತು ಸೈನ್ಯದ ಕುರಿತಾಗಿ ಅವರು ಉತ್ತಮ ಚಿಂತನಾ ಪ್ರಕ್ರಿಯೆಯನ್ನು ಹೊಂದಬಹುದು' ಎಂದು ಟ್ವೀಟ್ ಮಾಡಿದ್ದಾರೆ.

Punjab: 1984 ರ ಸಿಖ್ ಹತ್ಯಾಕಾಂಡ ಪ್ರಸ್ತಾಪ, ಕಾಂಗ್ರೆಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ಸರ್ಜಿಕಲ್ ಸ್ಟ್ರೈಕ್ ನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕೆಸಿ ಚಂದ್ರಶೇಖರ್ ರಾವ್ ಅವರನ್ನು ಕಟುವಾಗಿ ಟೀಕೆ ಮಾಡಿದ ಹಿಮಾಂತ ಬಿಸ್ವಾ ಶರ್ಮ, ಟ್ವಿಟರ್ ನಲ್ಲಿ ಸರ್ಜಿಕಲ್ ಸ್ಟ್ರೈಕ್‌ನ ವೀಡಿಯೊವನ್ನು ಸಹ ಬಿಡುಗಡೆ ಮಾಡಿದ್ದಾರೆ. "ಪ್ರೀತಿಯ ಕೆಸಿಆರ್, ನಮ್ಮ ವೀರ ಸೇನೆಯ ಸರ್ಜಿಕಲ್ ಸ್ಟ್ರೈಕ್‌ನ ವಿಡಿಯೋಗ್ರಾಫಿಕ್ ಪುರಾವೆ ಇಲ್ಲಿದೆ. ಇದರ ಹೊರತಾಗಿಯೂ, ನೀವು ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಪ್ರಶ್ನಿಸುತ್ತೀರಿ ಮತ್ತು ಅವರನ್ನು ಅವಮಾನಿಸುತ್ತಿದ್ದೀರಿ, ನಮ್ಮ ಸೈನ್ಯದ ಮೇಲೆ ದಾಳಿ ಮಾಡಲು ಮತ್ತು ಕೆರಳಿಸಲು ನೀವು ಏಕೆ ಪ್ರಯತ್ನ ಪಡುತ್ತಿದ್ದೀರಿ ಎನ್ನುವುದೇ ಅರ್ಥವಾಗುತ್ತಿಲ್ಲ. ನವ ಭಾರತ ನಮ್ಮ ಸೇನೆಯ ವಿರುದ್ಧದ ಅವಮಾನಗಳನ್ನು ಸಹಿಸುವುದಿಲ್ಲ' ಎಂದು ಅಸ್ಸಾಂ ಸಿಎಂ ಶರ್ಮಾ ಅವರು ವೀಡಿಯೋದೊಂದಿಗೆ ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios